ಸಂಗೀತ ನೃತ್ಯ ಸಂಭ್ರಮ “ನಾದಲೀಲೆ ರಾಜ್ಯ ಪ್ರಶಸ್ತಿ” ಪುರಸ್ಕಾರ, ಕನ್ನಡ ಕುವರ-ಕುವರಿ ಪ್ರಶಸ್ತಿ ಪ್ರಧಾನ ಸಮಾರಂಭವು ಡಾ. ಬಿ.ಆರ್.ಅಂಬೇಡ್ಕರ್ ಭವನ, ಶಿವಮೊಗ್ಗ ಇಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕಲಾಕುಟುಂಬದಿಂದ ಕಲಾವಿದರನ್ನು ಗುರುತಿಸುವ ಹಾಗೂ ಸನಾತನ ಧರ್ಮ, ಸಂಸ್ಕೃತಿ, ಕಲೆ, ಸಾಹಿತ್ಯ ಬೆಳೆಸುವ ಹಿನ್ನೆಲೆಯಲ್ಲಿ ಉನ್ನತ ಮಟ್ಟಕ್ಕೆ ಬೆಳೆಸುವ ವಿವಿಧ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಂಸ್ಥೆಯಾಗಿ ಬೆಳೆಯಲೆಂದು ಖ್ಯಾತ ಮನೋವೈದ್ಯ, ಕಲಾವಿದೆ, ಲೇಖಕರಾದ ಡಾ. ಕೆ.ಎಸ್.ಪವಿತ್ರ ಅಭಿಪ್ರಾಯಪಟ್ಟರು.
ಶ್ರೀ ಎಸ್.ಎನ್.ಚನ್ನಬಸಪ್ಪ (ಚನ್ನಿ), ಸನ್ಮಾನ್ಯ ಶಾಸಕರು ವಿಧಾನಸಭೆ, ಶಿವಮೊಗ್ಗ ನಗರ ಕ್ಷೇತ್ರ ಇವರು ಸಂಸ್ಥೆಯು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಪ್ರೋತ್ಸಾಹಿಸಿದರು.
ಇದೇ ಸಂದರ್ಭದಲ್ಲಿ ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ, ಶ್ರೀಮತಿ ಶಾಂತಾ ಎಸ್.ಶೆಟ್ಟಿ, ಡಾ. ಅಪೇಕ್ಷ ಮಂಜುನಾಥ್, ಶ್ರೀ ಡಾ. ರಾಜೇಂದ್ರ ಬುರಡಿಕಟ್ಟಿ ಇವರುಗಳಿಗೆ ನಾದಲೀಲೆ ರಾಜ್ಯಪ್ರಶಸ್ತಿ ಪ್ರಧಾನಮಾಡಲಾಯಿತು.
ಶ್ರೀಮತಿ ರೇವತಿ ರಾಹುಲ್, ಮೈಸೂರು ತಂಡದಿಂದ ಸುಗಮ ಸಂಗೀತ ನಡೆಯಿತು. ಹಾಗೂ ಭರತನಾಟ್ಯ ಪ್ರದರ್ಶನ ಡಾ. ಎಂ.ಎಸ್.ವಿದ್ಯಾಲಕ್ಷ್ಮಿ, ಕು.ಗೌರಿ ಮನೋಹರಿ ಬೆಂಗಳೂರು ಇವರಿಂದ ನಡೆಯಿತು.
ತಾಲ್ಲೂಕಿನ ಸರ್ಕಾರಿ ಮತ್ತು ಅನುದಾನ ಸಹಿತ ಶಾಲೆಯ ಎಸ್.ಎಸ್.ಎಲ್.ಸಿ ಪ್ರಥಮ ಭಾಷೆ ಕನ್ನಡದಲ್ಲಿ 125/125 ಅಂಕ ಪಡೆದ ಮಕ್ಕಳಿಗೆ ಕನ್ನಡ ಕುವರ-ಕುವರಿ ಪ್ರಶಸ್ತಿಯನ್ನು ನೀಡಲಾಯಿತು.
ಅಧ್ಯಕ್ಷರು ಶ್ರೀಮತಿ ಕೆ.ಎಸ್.ದಾಕ್ಷಾಯಣಿ ರಾಜ್‌ಕುಮಾರ್, ಕಾರ್ಯದರ್ಶಿ ಹೊಸೂರು ಶ್ರೀ ಕೆ.ರಾಜಕುಮಾರ್ ಇವರುಗಳು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಿರೂಪಣೆ ದೀರಜ್ ಬೆಳ್ಳಾರೆ, ವಂದನಾರ್ಪಣೆ ಕಾರ್ಯಕ್ರಮವನ್ನು ಆರ್.ಡಿ.ರೇವಂತ್ ರವರು ನಡೆಸಿಕೊಟ್ಟರು.
ನಾದಲೀಲೆ ವಿವಿಧ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಂಸ್ಥೆಯಾಗಿ ಬೆಳೆಯಲಿ- ಡಾ.ಕೆ.ಎಸ್.ಪವಿತ್ರಾ
Date: