Shankara Eye Hospital ಶಂಕರ ಕಣ್ಣಿನ ಆಸ್ಪತ್ರೆ, ಶಿವಮೊಗ್ಗ ಸಂಸ್ಥೆಯ ನೂತನ ‘ಶಂಕರ ನೇತ್ರ ಕೇಂದ್ರ’ವನ್ನು ಶಿವಮೊಗ್ಗದ ಹೃದಯ ಭಾಗ ದುರ್ಗಿಗುಡಿಯಲ್ಲಿ ಶುಭಾರಂಭಗೊಳಿಸಲಾಯಿತು. ಶಂಕರ ಕಣ್ಣಿನ ಆಸ್ಪತ್ರೆಯು ಮಲೆನಾಡಿನ ಜನತೆಗೆ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಕಳೆದ 16 ವರ್ಷಗಳಿಂದ ನಿರಂತರ ನೇತ್ರ ಚಿಕಿತ್ಸಾ ಸೇವೆಯನ್ನು ಒದಗಿಸುತ್ತಾ ಬಂದಿದ್ದು, ಈಗ ಶಿವಮೊಗ್ಗದ ನಗರ ಕೇಂದ್ರ ಭಾಗದಲ್ಲಿ ಹೊರ ರೋಗಿ ವಿಭಾಗವನ್ನು ಆರಂಭಿಸಿ, ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡ ಪೂರ್ಣ ಪ್ರಮಾಣದ ಸೇವೆಯನ್ನು ವಿಸ್ತೃತಗೊಳಿಸಿದೆ.
ಕಾರ್ಯಕ್ರಮದಲ್ಲಿ ಆಹ್ವಾನಿಸಿದ ಗಣ್ಯರಿಗೆ ಡಾ|| ನರೇಂದ್ರ ಭಟ್ ರವರು ಸ್ವಾಗತವನ್ನು ಕೋರಿದರು, ಡಾ||ಮಹೇಶ್ ಎಸ್, ಮುಖ್ಯ ವೈದ್ಯಾಧಿಕಾರಿಗಳು ಶಂಕರ ಸಂಸ್ಥೆ ನಡೆದು ಬಂದ ದಾರಿಯನ್ನು ವಿವರಿಸಿದರು.
ಡಾ||ಮಲ್ಲಿಕಾರ್ಜುನ್, ಎಮ್ ಹೆಚ್, ಕಾರ್ನಿಯಾ ತಜ್ಞರು ಸಿಟಿ ಸೆಂಟರ್ ನ ಧ್ಯೇಯ & ಕಾರ್ಯಕ್ರಮಗಳ ವಿವರಣೆಯನ್ನು ನೀಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಜಿ.ಕೆ.ಮಿಥುನ್ ಕುಮಾರ್, IPS ಶಿವಮೊಗ್ಗ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳು ಉಪಸ್ಥಿತರಿದ್ದು, ಅವರು ಸಂಸ್ಥೆಯ ಕಾರ್ಯಾವೈಕರಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು ಹಾಗೂ ನೂತನ ನೇತ್ರ ಕೇಂದ್ರಕ್ಕೆ ಶುಭ ಕೋರಿದರು.
ಶ್ರೀ ಹೇಮಂತ್ ಏನ್, IAS ಜಿಲ್ಲಾ ಪಂಚಾಯತ್, ಶಿವಮೊಗ್ಗ ಇವರು ಶಂಕರ ಸಂಸ್ಥೆಯ ಸಮಗ್ರ ಸೇವೆ ಶಿವಮೊಗ್ಗದಲ್ಲಿರುವುದು ಹೆಮ್ಮೆಯ ಸಂಗತಿ, ಶಂಕರ ನೇತ್ರ ಕೇಂದ್ರದ ಮೂಲಕ ಇನ್ನು ಹೆಚ್ಚಿನ ಜನರಿಗೆ ನೇತ್ರ ಚಿಕಿತ್ಸಾ ಸೇವೆ ತಲುಪುವಂತೆ ಆಶಿಸಿದರು, ಹಾಗೂ ಡಾ||ನಟರಾಜ್ ಕೆ ಎಸ್, ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳು, ಶಿವಮೊಗ್ಗ ಇವರು ಶಂಕರ ಸಲ್ಲಿಸುತ್ತಿರುವ ಸೇವೆಯು ನಿತ್ಯನೂತನವಾದುದು, ಜಿಲ್ಲಾ ಅಂಧತ್ವ ಮುಕ್ತ ಅಭಿಯಾನ ಕಾರ್ಯಾಕ್ರಮಕ್ಕೆ ಕೈಜೊಡಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
Shankara Eye Hospital ನಿರಂತರ ಸೇವೆಯು ಸಮಾಜಕ್ಕೆ ಅಗತ್ಯವಾದುದಾಗಿದೆ ಎಂದು ತಿಳಿಸಿದರು. ಡಾ|| ಕಿರಣ್ ಕುಮಾರ್, DBCS ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ಶಿವಮೊಗ್ಗ, ಇವರು DBCS ಕಾರ್ಯಾಕ್ರಮದ ಅಡಿಯಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯ ಸಹಕಾರದಿಂದ ಗ್ರಾಮೀಣ ಪ್ರದೇಶದ ಆರ್ಥಿಕ ಹಿಂದುಳಿದ ಜನರಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ ವರದಾನವಾಗಿದ್ದು, ಸಂಸ್ಥೆಯ ಸೇವೆಯನ್ನು ಶ್ಲಾಘಿಸಿದರು. ಡಾ|| ರವಿಶಂಕರ ಹೆಚ್ ಎನ್, ರೆಟಿನಾ ತಜ್ಞರು ಕಾರ್ಯಕ್ರಮಕ್ಕೆ ಆಗಮಿಸಿದ ಸಮಸ್ತರಿಗೆ ವಂದನೆಗಳನ್ನು ಸಲ್ಲಿಸಿದರು.
ಡಾ||ವೃಂದಾ ಭಟ್ ರವರು ಸಂಪೂರ್ಣ ಕಾರ್ಯಕ್ರಮದ ನಿರೂಪಣೆ ಕಾರ್ಯವನ್ನು ನೆರವೇರಿಸಿದರು.
ಕಾರ್ಯಕ್ರಮಕ್ಕೆ ಶಂಕರ ಆಸ್ಪತ್ರೆಯ ಪೋಷಕರುಗಳಾದ ಡಾ|| ನರೇಂದ್ರ ಭಟ್, ಡಾ||ವೃಂದಾ ಭಟ್, ಡಾ||ಮಂಜುನಾಥ, ಹಾಗೂ ಡಾ|| ವೆಂಕಟೇಶ್ ಮೂರ್ತಿ, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳಾದ ಶ್ರೀಮತಿ ಗಾಯತ್ರಿ ಶಾಂತರಾಮ್ ಮತ್ತು ಶ್ರೀಮತಿ ಅನಿತಾ, ಅಲ್ಲದೇ ಆಸ್ಪತ್ರೆಯ ವೈದ್ಯ ವೃಂದ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.