Distributors Day ತಿಯೊಂದು ಕ್ಷೇತ್ರದಲ್ಲಿ ವಾರ್ಷಿಕವಾಗಿ ವಿಶೇಷ ದಿನಾಚರಣೆ ಆಚರಿಸಲಾಗುತ್ತಿದೆ. ಉದಾಹರಣೆ ಇಂಜಿನಿಯರ್ ದಿನ, ವೈದ್ಯರ ದಿನ.. ಹೀಗೆ ವಿವಿಧ ದಿನ ಇರುತ್ತದೆ. ಆದರೆ ಸರ್ಕಾರಕ್ಕೆ ಹೆಚ್ಚು ಜಿಎಸ್‌ಟಿ ಮೂಲಕ ತೆರಿಗೆ ಸಂಗ್ರಹಿಸಿ ನೀಡುವ ವಿತರಕರಿಗೆ ಅವರದ್ದೆ ಒಂದು ದಿನ ಇಲ್ಲ. ವಿತರಕರ ಸಂಘದಿಂದ ಆಚರಿಸಿದ್ದ ಉತ್ಸವ 2020ರ ನೆನಪಿಗಾಗಿ ಪ್ರತಿ ವರ್ಷ ಫೆ. 2ರಂದು ವಿತರಕರ ದಿನಾಚರಣೆಯಾಗಿ ಆಚರಿಸುವುದಕ್ಕೆ ಹಾಗೂ ಸರ್ಕಾರದಿಂದ ಮನ್ನಣೆ ಪಡೆಯುವುದಕ್ಕೆ ಶಿವಮೊಗ್ಗ ಜಿಲ್ಲಾ ವಿತರಕರ ಸಂಘದಿಂದ ಅಭಿಯಾನ ಶುರು ಮಾಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎಂ.ಸಿ.ದೇವರಾಜ್ ಹೇಳಿದರು.
ಕಂಪನಿಗಳಿಗೆ ಹಾಗೂ ವರ್ತಕರಿಗೆ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಿತರಕರ ಹಿತ ಕಾಪಡುವುದೇ ಸಂಘದ ಮೂಲ ಉದ್ದೇಶ. ಆನ್ ಲೈನ್, ಮಾಡರ್ನ ಟ್ರೇಡ್ ಹಾಗೂ ಇ-ಕಾಮರ್ಸ್ ವ್ಯವಹಾರದ ಸವಾಲುಗಳನ್ನು ಎದುರಿಸಲು ವಿತರಕರು ಹಾಗೂ ವರ್ತಕರನ್ನು ಸಶಕ್ತಗೊಳಿಸುವುದು ನಮ್ಮ ಸಂಘದ ಉದ್ದೇಶ. ಮೊದಲ ವರ್ಷದ ದಿನಾಚರಣೆ ಉದ್ದೇಶಕ್ಕಾಗಿ 2025ರ ಫೆ. 2 ರಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆವರಣದಲ್ಲಿ ಸಭೆ ನಡೆಸಲಾಗುತ್ತಿದೆ. ಸಂಘದ ಸರ್ವ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
Distributors Day ಸಂಘದ ಕಾರ್ಯದರ್ಶಿ ಗಿರೀಶ್ ಒಡೆಯರ್ ಮಾತನಾಡಿ, ಕಾರ್ಯಕ್ರಮಕ್ಕೆ ರಾಜ್ಯ ಮಟ್ಟದ ಒಕ್ಕೂಟಗಳ ಅಧ್ಯಕ್ಷ ಹುಬ್ಬಳ್ಳಿ ಮೂಲದ ಗಿರೀಶ್ ಸುಂಕದ್ ಹಾಗೂ ಬೆಂಗಳೂರು ಮೂಲದ ಜಯಂತ್ ಗಾಣಿಗ್ ಸೇರಿದಂತೆ ಶಿವಮೊಗ್ಗ – ಚಿಕ್ಕಮಗಳೂರು ಜಿಲ್ಲೆಯ ಹಾಗೂ ವಿವಿಧ ತಾಲ್ಲೂಕುಗಳ ನಾಯಕರು ಪಾಲ್ಗೊಳ್ಳುವರು. ಸಂಘದ ಸದಸ್ಯರ ಗುರುತಿಗಾಗಿ ಕಚೇರಿಯಲ್ಲಿ ತೂಗು ಹಾಕಲು ಫಲಕ ಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಮಾಜಿ ಅಧ್ಯಕ್ಷ ಶಿವರಾಜ್ ಉಡುಗಣಿ, ಉಪಾಧ್ಯಕ್ಷ ಬದ್ರಿನಾಥ್, ಸಹ ಕಾರ್ಯದರ್ಶಿ ಅರವಿಂದ್ ರಾವ್, ಖಜಾಂಚಿ ಚಂದ್ರಶೇಖರ್ ಕೆಕೆ ಸಂಘದ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.