Saturday, December 6, 2025
Saturday, December 6, 2025

Rotary Club Shimoga ಹೆತ್ತವರಿಗೆ ಗೌರವಾರ್ಥ ಸಿ, ನೈತಿಕ ಮೌಲ್ಯಗಳನ್ನ ಬೆಳೆಸಿಕೊಳ್ಳಿ- ಹೊಸತೋಟ ಸೂರ್ಯನಾರಾಯಣ್

Date:

Rotary Club Shimoga ಸಾಮಾಜಿಕ ಹಾಗೂ ಪ್ರಜಾಪುಭುತ್ವ ಮೌಲ್ಯಗಳ ಜೊತೆಗೆ ಮಾನವೀಯ, ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಮಕ್ಕಳು ಮೈಗೂಡಿಸಿಕೊಳ್ಳುವುದು ಇಂದಿನ ತುರ್ತು ಅವಶ್ಯಕತೆ ಎಂದು ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ನ ಟ್ರಸ್ಟಿ ಹಾಗೂ ಆಕಾಶ್ ಇನ್ ಇದರ ಮಾಲೀಕರಾದ ರೊ. ಹೊಸತೋಟ ಸೂರ್ಯನಾರಾಯಣ್ ಇವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅವರು ರೋಟರಿ ಪೂರ್ವ ಆಂಗ್ಲ ಶಾಲೆಯ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ತಮ್ಮ ಮಾತನ್ನು ಮುಂದುವರೆಸಿದ ಶ್ರೀಯುತರು ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗುವುದರಿಂದ ಸಂವಿಧಾನಾತ್ಮಕ ಮೌಲ್ಯಗಳ ಜೊತೆಗೆ ಪರಿಶ್ರಮ ವಹಿಸಿ ತಮ್ಮನ್ನು ಶಾಲೆಗೆ ಕಳುಹಿಸಿದ ತಂದೆ ತಾಯಿಗಳಿಗೆ ಗೌರವವನ್ನು ಕೊಡುತ್ತಾ, ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜದ ಆಸ್ತಿಯಾಗಿ ಬೆಳೆದು ತಮ್ಮ ಸಂವಿಧಾನಾತ್ಮಕ ಹೊಣೆಗಾರಿಕೆಗಳನ್ನು ನಿರ್ವಹಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದರು. ಎಲ್ಲಕ್ಕಿಂತ ಮಿಗಿಲಾಗಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಗೀಳಿನಿಂದ ಹೊರಬಂದು ತಮ್ಮ ವ್ಯಾಸಂಗದ ಕಡೆ ಗಮನ ಕೊಟ್ಟು ದೇಶದ ಅತ್ಯಮೂಲ್ಯ ಸಂಪನ್ಮೂಲಗಳಾಗಿ ಬೆಳೆಯಬೇಕೆಂದು ಕರೆಕೊಟ್ಟರು.
ಸಮಾರಂಭದ ಅತಿಥಿಗಳಾದ ಟ್ರಸ್ಟ್ನ ಕಾರ್ಯದರ್ಶಿ ರೊ. ರಾಮಚಂದ್ರ ಎಸ್.ಸಿ., ಇವರು ಮಾತನಾಡುತ್ತಾ, ಸಂವಿಧಾನದ ಆಶಯಗಳನ್ನು ವಿವರವಾಗಿ ತಿಳಿಸಿ ಅದನ್ನು ರಚಿಸುವಲ್ಲಿ ಸಂವಿಧಾನ ಸಮಿತಿ ಅಧ್ಯಕ್ಷರಾದ ಡಾ. ಅಂಬೇಡ್ಕರ್ ಅವರು ಬಹುತ್ವ ಸಂಸ್ಕೃತಿಯುಳ್ಳ ಭಾರತದಂತಹ ವಿಶಾಲ ದೇಶದ ಹಿನ್ನಲೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಧರ್ಮ ಹಾಗೂ ಪ್ರದೇಶಗಳ ಜನರಿಗೆ ಸರಿಹೊಂದುವAತಹ ಸಂವಿಧಾನವನ್ನು ರಚಿಸುವಲ್ಲಿ ಯಶಸ್ವಿಯಾಗಿದ್ದು, ಸಂವಿಧಾನವೇ ನಮ್ಮ ಸರ್ಕಾರಗಳ ಆಸ್ತಿಯಾಗಿರುತ್ತದೆ ಎಂದು ತಿಳಿಸಿದರು.
Rotary Club Shimoga ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿಯಾದ ರೊ. ಚಂದ್ರಶೇಖರಯ್ಯ ಎಂ., ನಿವೃತ್ತ ಡಿ.ಪಿ.ಐ., ಇವರು ಧ್ವಜಾರೋಹಣವನ್ನು ಮಾಡಿ, ಅಧ್ಯಕ್ಷ ಪೀಠದಿಂದ ಮಾತನಾಡುತ್ತಾ ಭಾರತದಾದ್ಯಂತ ೭೬ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸುವ ಈ ಶುಭ ಸಂದರ್ಭದಲ್ಲಿ ನಮ್ಮ ಸ್ವತಂತ್ರ ಸೇನಾನಿಗಳು ಸ್ವಾತಂತ್ರö್ಯ ನಂತರದ ಭಾರತ ಹೇಗಿರಬೇಕು ಎಂಬ ಬಗ್ಗೆ ಕನಸನ್ನು ಕಂಡಿದ್ದು, ಆ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಭಾರತ ಸಂವಿಧಾನ ರಚಿತವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಸಮಾರಂಭದಲ್ಲಿ ಟ್ರಸ್ಟಿ ರೊ. ಮಂಜುನಾಥ್ ಎನ್.ಬಿ., ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವದ ಅಧ್ಯಕ್ಷೆ ಶ್ರೀಮತಿ ವಾಗ್ದೇವಿ ಬಸವರಾಜ್, ಕಾರ್ಯದರ್ಶಿ ಶ್ರೀಮತಿ ಲತಾ ಸೋಮಶೇಖರ್, ಶಾಲೆಯ ಪ್ರಾಂಶುಪಾಲರಾದ ಸೂರ್ಯನಾರಾಯಣ್ ಆರ್., ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು, ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು. ರೋಟರಿ ಶಿವಮೊಗ್ಗ ಪೂರ್ವದ ವತಿಯಿಂದ ಸಿಹಿಯನ್ನು ಹಂಚಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...