Padma Bhushan Award ಕೇಂದ್ರ ಸರ್ಕಾರವು 2025ನೇ ಸಾಲಿನ ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಪ್ರಕಟಿಸಿದೆ.
ಈ ಬಾರಿ 30 ಮಂದಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ವಿವಿಧ ಕ್ಷೇತ್ರಗಳಾದ ಕಲೆ, ಸಾಹಿತ್ಯ, ಸಮಾಜುಮುಖಿ ಕಾರ್ಯ, ಸಾರ್ವಜನಿಕ ವ್ಯವಹಾರ, ವಿಜ್ಞಾನ, ಎಂಜಿನಿಯರಿಂಗ್, ವ್ಯಾಪಾರ, ಕೈಗಾರಿಕೆ, ವೈದ್ಯಕೀಯ, ಶಿಕ್ಷಣ, ಕ್ರೀಡೆ ಮತ್ತು ನಾಗರಿಕ ಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡುತ್ತಾ ಬಂದಿದೆ.
ಈ ಬಾರಿ ಕಲಾ ವಿಭಗದಿಂದ ರಾಜ್ಯದ ಶ್ರೀ ಲಕ್ಷ್ಮೀನಾರಾಯಣ ಸುಬ್ರಮಣ್ಯಂ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿದೆ.
Padma Bhushan Award ಪದ್ಮ ಭೂಷಣ ವಿಭಾದಲ್ಲಿ ರಾಜ್ಯದಿಂದ ಇಬ್ಬರು ಪುರಸ್ಕೃತರಾಗಿದ್ದು, ಸಾಹಿತ್ಯ ಮತ್ತು ಶಿಕ್ಷಣ – ಪತ್ರಿಕೋದ್ಯಮದಿಂದ ಶ್ರೀ ಎ. ಸೂರ್ಯಪ್ರಕಾಶ್, ಕಲಾಕ್ಷೇತ್ರದಿಂದ ಶ್ರೀ ಅನಂತ್ ನಾಗ್ ಪುರಸ್ಕೃತರಾದರೆ, ಪದ್ಮಶ್ರೀ ಪ್ರಶಸ್ತಿಗೆ ಕಲೆಯಿಂದ ಶ್ರೀಮತಿ. ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ, ಶ್ರೀ ಹಾಸನ್ ರಘು, ಶ್ರೀ ರಿಕಿ ಗ್ಯಾನ್ ಕೇಜ್, ಶ್ರೀ ವೆಂಕಪ್ಪ ಅಂಬಾಜಿ ಸುಗಟೇಕರ್ ಹಾಗೂ ವ್ಯಾಪಾರ ಮತ್ತು ಕೈಗಾರಿಕೆಯಿಂದ ಶ್ರೀ ಪ್ರಶಾಂತ್ ಪ್ರಕಾಶ್ ಮತ್ತು ವೈದ್ಯಕೀಯ ವಿಭಾಗದಲ್ಲಿ ಶ್ರೀಮತಿ. ವಿಜಯಲಕ್ಷ್ಮಿ ದೇಶಮನೆ ಅವರು ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.