Monday, January 27, 2025
Monday, January 27, 2025

Nisarga Convent ಮಕ್ಕಳಿಗೆ ಕೇವಲ ಶಿಕ್ಷಣವೊಂದೇ ಅಲ್ಲ ಪೋಷಕರು ಅವರೊಂದಿಗೆ ಬೆರೆಯಬೇಕು- ಡಾ.ಎಚ್.ಬಿ.ಮಂಜುನಾಥ್

Date:

Nisarga Convent ಕೇವಲ ಶಿಕ್ಷಣದಿಂದಲೇ ಸತ್ಪ್ರಜೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ, ಶಿಕ್ಷಣದೊಂದಿಗೆ ನೆಲದ ಸಂಸ್ಕೃತಿ ಹಾಗೂ ಮೌಲ್ಯಯುತ ಸಂಸ್ಕಾರಗಳ ಅರಿವು ಮಾಡಿಸಿದಲ್ಲಿ ಮಾತ್ರ ಸತ್ಪ್ರಜೆಗಳನ್ನು ಸೃಷ್ಟಿಸಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು. ದಾವಣಗೆರೆ ನಗರದ ಎಸ್ ಓ ಜಿ ಕಾಲೋನಿಯಲ್ಲಿರುವ ನಿಸರ್ಗ ಕಾನ್ವೆಂಟ್ ಮತ್ತು ಪ್ರೌಢಶಾಲಾ ‘ನಿಸರ್ಗೋತ್ಸವ’ ಉದ್ಘಾಟಿಸಿ ಮಾತನಾಡುತ್ತಾ ಪೋಷಕರು ಮಕ್ಕಳಿಗೆ ಶಾಲಾ ಶಿಕ್ಷಣದ ಕೊಡಿಸಿದರೆ ಸಾಲದು, ದಿನವೂ ಮನೆಯಲ್ಲಿ ಮಕ್ಕಳೊಂದಿಗೆ ಸ್ವಲ್ಪ ವೇಳೆಯಾದರೂ ಆತ್ಮೀಯವಾಗಿ ಮಾತನಾಡುತ್ತಾ ಕಾಲಕಳೆಯಬೇಕು, ತನ್ಮೂಲಕ ನಮ್ಮ ಸಂಸ್ಕೃತಿ ಸಂಸ್ಕಾರಗಳು ಮಕ್ಕಳ ಅರಿವಿಗೆ ಬರಬೇಕು. ದಿನದಲ್ಲಿ ಒಂದು ಹೊತ್ತಾದರೂ ಊಟ ಅಥವಾ ತಿಂಡಿಯನ್ನು ಮನೆ ಮಂದಿಯೆಲ್ಲ ಒಟ್ಟಾಗಿ ಕುಳಿತು ಸೇವಿಸಬೇಕು, ಹಾಗೆ ಆಹಾರ ಸೇವಿಸುವಾಗ ಸೇವಿಸುವಾಗ ಟಿವಿ ಮತ್ತು ಮೊಬೈಲ್ ಇತ್ಯಾದಿಗಳ ಕಡೆ ಗಮನ ಕೊಡದೆ ಪರಸ್ಪರ ತಮಾಷೆ ಮಾಡಿಕೊಳ್ಳುತ್ತಾ ಇರಬೇಕು, ಇದರಿಂದ ಕೌಟುಂಬಿಕ ಬಾಂಧವ್ಯವು ಗಟ್ಟಿಗೊಳ್ಳುತ್ತದೆ, ಮುಂದೆ ಮಕ್ಕಳು ಪೋಷಕರನ್ನು ವೃದ್ದಾಶ್ರಮಕ್ಕೆ ದೂಡುವುದು ತಪ್ಪುತ್ತದೆ ಎಂದರು. Nisarga Convent ಅನ್ಯ ಭಾಷೆಗಳನ್ನು ದ್ವೇಷಿಸದೆ ನಮ್ಮ ಮಾತೃಭಾಷೆ ಹಾಗೂ ಮಾತೃ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎಂದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ನಿಂಚನ ಪಬ್ಲಿಕ್ ಶಾಲಾ ಸ್ಥಾಪಕ ನಿಂಗಪ್ಪನವರು ಜೀವನದ ಸಾಧನೆಯ ಮಾರ್ಗಗಳ ಬಗ್ಗೆ ಪೋಷಕರು ಮಕ್ಕಳಿಗೆ ತಿಳಿಸುತ್ತಿರಬೇಕು ಎಂದರು. ಮತ್ತೋರ್ವ ಮುಖ್ಯ ಅತಿಥಿಗಳಾಗಿ ಶ್ರೀಮತಿ ನಸ್ರೀನ್ ಖಾನ್ ಮಾತನಾಡಿ ಪೋಷಕರು ಮಕ್ಕಳನ್ನು ಅವರ ಉತ್ತಮ ಕಾರ್ಯಗಳಿಗಾಗಿ ಪ್ರೋತ್ಸಾಹಿಸಬೇಕು ಎಂದರು. ಶಾಲಾ ಕಾರ್ಯದರ್ಶಿ ಹೆಚ್.ಜಿ. ಪ್ರಕಾಶರವರ ಉಪಸ್ಥಿತಿಯಲ್ಲಿ ಶಾಲಾ ಅಧ್ಯಕ್ಷ ಬಿ ಪರಮೇಶ್ವರಪ್ಪ ಅಧ್ಯಕ್ಷೀಯ ನುಡಿಗಳ ನಾಡಿದರು. ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ವಿರಕ್ತಮಠದ ಡಾ.ಶ್ರೀ ಬಸವ ಪ್ರಭು ಸ್ವಾಮೀಜಿಯವರು ಅಲಂಕಾರಗಳು ಬಾಹ್ಯ ಶೃಂಗಾರಕ್ಕಾದರೆ ಸದ್ಗುಣಗಳು ಬದುಕಿನ ಶೃಂಗಾರಕ್ಕೆ ಬೇಕು, ಮಲಿನ ಪರಿಸರದಲ್ಲಿ ಬದುಕದೆ ನಿಸರ್ಗ ಹಾಗೂ ಪರಿಸರ ಕಾಪಾಡುವ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದರು. ಶಿಕ್ಷಕ ಬಿ ಎಂ ಶಶಿಕುಮಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಅಕ್ಷತಾ ಮತ್ತು ಸಂಗಡಿಗರು ಹಾಡಿದರೆ ಸ್ವಾಗತವನ್ನು ಶಿಕ್ಷಕಿ ವಿಜಯ ಕೋರಿದರು. ಶಾಲಾ ವಾರ್ಷಿಕ ವರದಿಯನ್ನು ಶಿಕ್ಷಕಿ ಶಕುಂತಲಾ ವಾಚಿಸಿದರೆ ಕ್ರೀಡಾ ವರದಿ ಮತ್ತು ಬಹುಮಾನವನ್ನು ಶಿಕ್ಷಕಿಯರಾದ ಅಸ್ಮ ಹಾಗೂ ರಶ್ಮಿ ಬಿ ಕೆ ನಿರ್ವಹಿಸಿದರು. ಶಿಕ್ಷಕಿ ದೀಪಾ ಆರ್ ವಂದನೆ ಸಲ್ಲಿಸಿದರು. ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಪ್ರಸ್ತುತಿಗಳು ನೆರವೇರಿದವು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಗೋವಿಂದಾಪುರ ಆಶ್ರಯ ವಸತಿ ಸಮುಚ್ಚಯಕ್ಕೆ ಸಚಿವ ಮಧು ಬಂಗಾರಪ್ಪ‌ ಪರಿಶೀಲನಾ ಭೇಟಿ

Madhu Bangarappa ಆಶ್ರಯ ಯೋಜನೆಯಡಿ ಗೋವಿಂದಾಪುರದಲ್ಲಿ ನಿರ್ಮಿಸಲಾಗಿರುವ ವಸತಿ ಸಮುಚ್ಚಯಗಳಿಗೆ...

Republic Day ಸಂವಿಧಾನ ಪೀಠಿಕೆ‌ ವಾಚಿಸಿ ಉದ್ಘಾಟಿಸಿದ‌ ಸಚಿವ‌ ಮಧು‌ ಬಂಗಾರಪ್ಪ

Republic Day ಬಾಬಾ ಸಾಹೇಬ್ ಅಂಬೇಡ್ಕರರ ಆಶಯದಂತೆ ಸ್ವಾತಂತ್ರ್ಯ ...

Yuva Nidhi Scheme ಯುವನಿಧಿಗೆ ಕಡ್ಡಾಯ‌ ನೋಂದಣಿ‌ ಮಾಡಲು ಕ್ರಮ ಕೈಗೊಳ್ಳಿ- ಸಿ.ಎಸ್.ಚಂದ್ರಭೂಪಾಲ್

Yuva Nidhi Scheme ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಯೋಜನೆ ಅಡಿಯಲ್ಲಿ...

Padma Bhushan Award ಹಿರಿಯ ನಟ ಅನಂತನಾಗ್ ಸೇರಿದಂತೆ ರಾಜ್ಯದ ಈರ್ವರಿಗೆ ಪದ್ಮಭೂಷಣ ಪ್ರಶಸ್ತಿ

Padma Bhushan Award ಕೇಂದ್ರ ಸರ್ಕಾರವು 2025ನೇ ಸಾಲಿನ ದೇಶದ ಅತ್ಯುನ್ನತ...