Friday, January 24, 2025
Friday, January 24, 2025

Idagunji Ganapathi Temple  ಇಡಗುಂಜಿ ಮೇಳಕ್ಕೆ”ಯುನೆಸ್ಕೊ” ಗೌರವ, ಕೆರೆಮನೆ ಶಿವಾನಂದ ಹೆಗಡೆಗೆ ಗೌರವಾರ್ಪಣೆ

Date:

Idagunji ganapathi temple  ಇಡಗುಂಜಿ ಅಂದರೆ ತಕ್ಷಣ ನಮಗೆ ನೆನಪಿಗೆ ನಿಂತ ನಿಲುವಿನ ಮಹಾಗಣಪತಿಯ ಅಪೂರ್ವ ಮೂರ್ತಿ ಕಣ್ಮುಂದೆ ಬರುತ್ತದೆ.

ಇಡಗುಂಜಿ ಮೇಳ ಅಂದರೆ ನಮಗೆ ಇಡೀ ಯಕ್ಷಗಾನದ ಮದ್ದಳೆ, ಭಾಗವತರ ಕಂಚಿನ ಕಂಠ, ವೇಷತೊಟ್ಟ ಯಕ್ಷಗಾನ ಕಲಾವಿದರು, ಅವರ ಮಾತು, ಹಾವಭಾವ ಏನೆಲ್ಲ ಯಕ್ಷಗಾನದ ವೇದಿಕೆ ಥಟ್ಟನೆ ನೆನಪಾಗುತ್ತದೆ. ಸ್ಥಾಪಕ ಶಿವರಾಮ ಹೆಗಡೆ ನಂತರ ಪುತ್ರರಾದ
ಕರೆಮನೆ ಶಂಭು ಹೆಗಡೆ, ಶಂಭು ಹೆಗಡೆ ಪುತ್ರ ಶಿವಾನಂದ ಹೆಗಡೆ ಅಲ್ಲದೆ ಯುವ ಪೀಳಿಗೆಯ ಶ್ರೀಧರ ಹೆಗಡೆ ತನಕ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ತನ್ನ ಕಲಾ ಪರಂಪರೆಯ
ಮಡಿಹಾಸಿನ ಮೇಲೆ ಕುಣಿದು ಕುಪ್ಪಳಿಸಿದೆ. ಯಕ್ಷಗಾನ ಪ್ರಿಯರ ಮನದಾಳದಲ್ಲಿ ಇಡಗುಂಜಿ ಮೇಳದ ಆಟ ಎಂದರೆ ಬಹುದಿನಗಳ ಹಸಿವೆಗೆ ದೊರಕುವ ರಸದೂಟವೇ ಸರಿ.
ಅವತ್ತು ಏನೆಲ್ಲ ಕೆಲಸ ಇದ್ದರೂ ರಾತ್ರಿ‌ ಎಲ್ಲಾ ಫ್ರೀ ಮಾಡಿಕೊಳ್ಳುವ ಪ್ಲಾನ್ ಹಾಕುವರು ನಮ್ಮ ಯಕ್ಷಗಾನ ಪ್ರಿಯರು.

ಇಡಗುಂಜಿ ಮೇಳಕ್ಕೆ ಈಗ
ಒಂಭತ್ತು ದಶಕಗಳು ಪೂರೈಸಿದ ಸಂಭ್ರಮ.
ಕರ್ನಾಟಕವೇ ಅಲ್ಲದೇ ಹೊರ ರಾಜ್ಯಗಳಲ್ಲಿ ಮೇಳ ಸುಳಿದಾಡಿ
ತನ್ನದೇ ಯಕ್ಷಗಾನದ ಪ್ರತಿಭೆಯಿಂದ ರಸಿಕರ ಮನಸೂರೆಮಾಡಿದೆ. ರಾಷ್ಟ್ರೀಯ ಉತ್ಸವಗಳಲ್ಲಿ ರಾರಾಜಿಸಿದ ಇಡಗುಂಜಿಯ ಮೇಳ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದೆ.

ಈ ವರ್ಷ ಯುನಸ್ಕೋದಿಂದ ಜಾಗತಿಕವಾಗಿ
ಪಾರಂಪರಿಕ ಕಲಾತಂಡವೆಂಬ
ಮನ್ನಣೆ ಪಡೆದು ಮತ್ತಷ್ಟೂ ನಭದತ್ತ ತನ್ನ ಯಕ್ಷ ಚಿತ್ತಾರ ಹರಡಿದೆ. ಇದು ಸುಲಭದ ಸಾಧನೆಯಲ್ಲ ದೇಶೀಯವಾಗಿ
ಈ ಮನ್ನಣೆ ಆರೇಳು ತಂಡಗಳಿಗೆ ಸಿಕ್ಕಿವೆ. ಈ ಸಾಧನೆಯ ಹಿಂದೆ ಕೆರೆಮನೆ ಕುಟುಂಬದ ಶ್ರಮ, ತ್ಯಾಗ, ಅರ್ಪಣಾ ಮನೋಭಾವ ಮತ್ತು ಇಡೀ ಊರಿನವರ ಸಹಕಾರ ಘನವಾಗಿ ನಿಂತಿದೆ.

Idagunji ganapathi temple  ಹೊನ್ನಾವರ ಸನಿಹದ ಗುಣವಂತೆ ಎಂಬ ಪುಟ್ಟಗ್ರಾಮದಲ್ಲಿ ಕೆರೆಮನೆ ಶಂಭುಹೆಗಡೆ ಕಲಾಲೋಕವೇ ಮೈದಳೆದು ನಿಂತಿದೆ. ಯಕ್ಷಗಾನವನ್ನ ಒಂದು ಶೈಕ್ಷಣಿಕ ಶಿಸ್ತಾಗಿ ಅಧ್ಯಯನ ಮಾಡುವ
ಅಕಾಡೆಮಿಕ್ ಪ್ರಯತ್ನ ಅಲ್ಲಿ ಸಾಕಾರಗೊಂಡಿದೆ.
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ,ಯಕ್ಷಗಾನ ಗುರುಕುಲ,ಪ್ರಾತ್ಯಕ್ಷತೆ ಆಟವೇ ಪಾಠ,ಕಾರ್ಯಾಗಾರಗಳು,ತರಬೇತಿ..ಒಂದೆ ಎರಡೆ ಹೀಗೆ ಹತ್ತು ಹಲವು ಆಯಾಮಗಳಿಂದ ಇಡೀ ಯಕ್ಷಗಾನ ಕಲೆಗಿರುವ ಸಹಸ್ರ ಮುಖಗಳ ಬಗ್ಗೆ ಎಲ್ಲರೂ ನೋಡುವಂತೆ ಮಾಡಲಾಗುತ್ತಿದೆ
ಯಕ್ಷಗಾನ ಕಲಾಪ್ರಪಂಚದ ದಿಗ್ಗಜರೆಲ್ಲರೂ ಈ ಕಲಾವೇದಿಕೆಯ ಹೊನಲು‌ಬೆಳಕಿನಲ್ಲಿ ಬಣ್ಣಹಚ್ಚಿದ್ದಾರೆ. ಕಂಚು‌ಕಂಠದ ಭಾಗವತರು ಪಾತ್ರಗಳಿಗೆ ರಾಗ ಕಂಠ ನೀಡಿದ್ದಾರೆ. ಮದ್ದಳೆ ಪ್ರವೀಣರ ಮಾಂತ್ರಿಕ ಕೈಗಳು ಇಲ್ಲಿ ಸೋತಿಲ್ಲ.. ಅದಕ್ಕೆ ಹೊಯ್ ಕೈಯಾಗಿ ಪಾತ್ರಧಾರಿಗಳ ಮಾತುಗಾರಿಕೆ ಹೆಜ್ಜೆಗಳೂ ದಣಿದಿಲ್ಲ.

ಪ್ರಸ್ತುತ ಇಡಗುಂಜಿ ಮೇಳದ ನಿರ್ದೇಶಕರಾಗಿರುವ ಕೆರೆಮನೆ ಶಿವಾನಂದ ಹೆಗಡೆ ಅವರ ಅವಿರತ ಶ್ರಮದಿಂದಾಗಿ ಗುಣವಂತೆ ಜಾಗತಿಕ ಯಕ್ಷ ನಕ್ಷೆಯಲ್ಲಿ ಮಿನುಗುವಂತಾಗಿದೆ.
ಶಿವಮೊಗ್ಗದ ಯಕ್ಷಗಾನ ಪ್ರೇಮಿಗಳಿಗೆ ಇಡಗುಂಜಿ ಮೇಳ ಬಹಳ ಆಪ್ತವಾಗಿರುವ ಕಲಾತಂಡ. ಅದರ ಕಲಾವಿದರಂತೂ ಬಂಧು ಮಿತ್ರರಂತೆ ಬೆರೆತುಹೋಗಿದ್ದಾರೆ.

ಈ ಬಾರಿ ವಿಶೇಷ ಸಂಗತಿಯೆಂದರೆ
ಜಾಗತಿಕವಾಗಿ ಲಭಿಸಿರುವ “ “ಯುನೆಸ್ಕೊ” ಮನ್ನಣೆ ಕರ್ನಾಟಕವೇ ಹೆಮ್ಮೆ ಪಡುವಂತೆ ಮಾಡಿದೆ. ಇಂತಹ ಅಪೂರ್ವ ಗೌರವಕ್ಕೆ ಭಾಜನವಾಗಿದೆ ಇಡಗುಂಜಿ ಮೇಳ. ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಅವರ
ನೇತೃತ್ವದಲ್ಲಿ “ಸೀತಾಪಹರಣ” ಯಕ್ಷಗಾನ ಪ್ರಸಂಗವನ್ನು ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ
ತಾ.26-1-2025 ರ ಭಾನುವಾರ ಸಂಜೆ 6 ಕ್ಕೆ ಪ್ರದರ್ಶಿಸಲಿದ್ದಾರೆ.

ಜೊತೆಯಲ್ಲಿಯೇ ಯಕ್ಷಗಾನ ಮಂಡಳಿಯ ಮುಂಚೂಣಿಗ
ಕೆರೆಮನೆ ಶಿವಾನಂದ ಹೆಗಡೆ ಅವರಿಗೆ ಆತ್ಮೀಯ ಸನ್ಮಾನವನ್ನೂ
ಏರ್ಪಡಿಸಲಾಗಿದೆ.
ಶಿವಮೊಗ್ಗದ ಯಕ್ಷಗಾನ ರಸಿಕರು
ಹೆಚ್ವಿನ ಸಂಖ್ಯೆಯಲ್ಲಿ ಅಭಿಮಾನದಿಂದ ಆಗಮಿಸಬೇಕೆಂದು ಶಿವಮೊಗ್ಗ ಅಭ್ಯುದಯ ಸಂಸ್ಥೆಯ ನಿರ್ದೇಶಕ
ಲಕ್ಷ್ಮೀನಾರಾಯಣ ಕಾಶಿ‌ ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kichcha Sudeep “ಉತ್ತಮ ನಟ” ಪ್ರಶಸ್ತಿಯನ್ನ ನಯವಾಗಿ ತಿರಸ್ಕರಿದ ಕಿಚ್ಚ ಸುದೀಪ್

Kichcha Sudeep ಕಿಚ್ಚ ಸುದೀಪ್‌ ಅವರ " ಪೈಲ್ವಾನ್" ಸಿನಿಮಾದಲ್ಲಿನ ಅಭಿನಯಕ್ಕಾಗಿ...

CM Siddharamaiah ಬಿಜೆಪಿ‌ ನೇತೃತ್ವದ ಕೇಂದ್ರ ಸರ್ಕಾರವು ಭದ್ರಾ ಯೋಜನೆಗೆ ₹5,300 ಕೋಟಿ ಬಿಡುಗಡೆ ಮಾಡಲಿ- ಸಿದ್ಧರಾಮಯ್ಯ

CM Siddharamaiah ನೀರಾವರಿಗೆ ನಮ್ಮ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು, 1,274...

Shivamogga City Corporation ನೀರಿನ ಕಂದಾಯ ಸ್ವೀಕೃತಿಗೆ‌ ಮಹಾನಗರ ಪಾಲಿಕೆಯಿಂದ ಭಾನುವಾರ ವಿಶೇಷ ಕೌಂಟರ್

Shivamogga City Corporation 2024-25ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ...