Kichcha Sudeep ಕಿಚ್ಚ ಸುದೀಪ್ ಅವರ ” ಪೈಲ್ವಾನ್” ಸಿನಿಮಾದಲ್ಲಿನ ಅಭಿನಯಕ್ಕಾಗಿ ಉತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಜ್ಯ ಚಲನಚಿತ್ರ ಪ್ರಶಸ್ತಿ ತೀರ್ಪುಗಾರರ ಮಂಡಳಿಯವರು ಸುದೀಪ್ ಅವರಿಗೆ “ಉತ್ತಮ ನಟ” ಪುರಸ್ಕಾರ ಘೋಷಿಸಿದ್ದಾರೆ.
ಸುದೀಪ್ ಅಭಿಮಾನಿಗಳಿಗೆ ಅಪಾರ ಸಂತೋಷವಾಗಿದೆ.
ಆದರೆ ಇದ್ದಕ್ಕಿದ್ದಂತೆ ಕಿಚ್ಚ ಸುದೀಪ್ ಪ್ರಶಸ್ತಿಯು ತಮಗೆ ಬೇಡ. ಈಗ ಕೆಲವು ವರ್ಷಗಳಿಂದ ಪ್ರಶಸ್ತಿ ಸ್ವೀಕಾರ ತ್ಯಜಿಸಿರುವೆ.
ರಾಜ್ಯ ಸರ್ಕಾರಕ್ಕೆ, ತೀರ್ಪುಗಾರರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಬಹಳ ಶ್ರಮದಿಂದ ಮೇಲ್ಬಂದ ಕಲಾವಿದರಲ್ಲಿ ಸುದೀಪ್ ಕೂಡ ಒಬ್ಬರು. ಗಾಡ್ ಫಾದರ್ ಗಳ ಋತುವಿನ ಯಾವುದೇ ಚಂಡಮಾರುತಕ್ಕೆ ಸಿಲುಕದೇ ತಮ್ಮದೇ ಅಭಿನಯ, ಸ್ಟೈಲ್ ಗಳಿಂದ ಕನ್ನಡಪ್ರೇಕ್ಷಕ ವರ್ಗವನ್ನ ಹೊಂದಿರುವ ಪ್ರಭಾವಶಾಲೀ ನಟ.
Kichcha Sudeep ಅಭಿಮಾನಿಗಳು ಕುಣಿದು ಕುಪ್ಪಳಿಸಲು ಸಿದ್ಧರಾಗುತ್ತಿದ್ದಂತೆಯೇ ಸುದೀಪ್ ತಾಳಿರುವ ಪ್ರಶಸ್ತಿ ತಿರಸ್ಕಾರದ ನಿರ್ಧಾರ
ಕಿಚ್ಚ ಪ್ರಿಯರಿಗೆ ಅಚ್ಚರಿ ಹುಟ್ಟಿಸಿದೆ .