Monday, December 15, 2025
Monday, December 15, 2025

Akhila Bharatiya Sahitya Parishad ಅಭಾಸಾಪ ರಾಜ್ಯ ಅಧಿವೇಶನ: ಕವಿಗೋಷ್ಠಿಗೆ ಕವಿತೆಗಳ ಆಹ್ವಾನ

Date:

Akhila Bharatiya Sahitya Parishad ‘ಅಭಾಸಾಪ’ವು ಇದೇ ಬರುವ ಮೇ ತಿಂಗಳಲ್ಲಿ ರಾಜ್ಯ ಅಧಿವೇಶನವನ್ನು ಆಯೋಜಿಸುತ್ತಿದೆ. ‘ಸಾಹಿತ್ಯದಲ್ಲಿ ಸ್ವತ್ವ’ ಎಂಬ ವಿಷಯದ ಮೇಲೆ ನಡೆಯುವ ಈ ಅಧಿವೇಶನದಲ್ಲಿ ಕವಿಗೋಷ್ಠಿಗಾಗಿ ಕವಿತೆಗಳನ್ನು ಆಹ್ವಾನಿಸಿದೆ.

ಸಾಹಿತ್ಯವೂ ಸೇರಿದಂತೆ ಕಲೆ, ಶಿಕ್ಷಣ, ನಡೆ-ನುಡಿ, ಉಡುಗೆ-ತೊಡುಗೆ, ಪರಿಸರ, ಆಚರಣೆ, ವಾಣಿಜ್ಯ ಇತ್ಯಾದಿ ನಮ್ಮ ರಾಷ್ಟ್ರಜೀವನದ ವಿವಿಧ ರಂಗಗಳಲ್ಲಿ ಸ್ವಾತಂತ್ರ್ಯ ಕಳೆದುಕೊಂಡಾಗ ನಷ್ಟಗೊಂಡ ಸ್ವತ್ವವನ್ನು ಮತ್ತೆ ಗಳಿಕೊಳ್ಳಬೇಕಿತ್ತಷ್ಟೆ. ಸ್ವತ್ವವನ್ನು ಕಳಕೊಂಡರೆ ಸ್ವಾತಂತ್ರ್ಯವನ್ನು ಕಳಕೊಂಡಂತೆ. ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುವುದೆಂದರೆ ಸ್ವತ್ವವನ್ನು ಪಡಕೊಳ್ಳುವುದೆಂದೇ ಅರ್ಥ. ಎಲ್ಲಾ ರಂಗಗಳಲ್ಲೂ ಸ್ವತ್ವದ ಅಭಿವ್ಯಕ್ತಿ ಸಾಧ್ಯವಾದಾಗ ಗಳಿಸಿಕೊಂಡ ಸ್ವಾತಂತ್ರ್ಯ ಪೂರ್ಣವಾಯಿತೆಂದುಕೊಳ್ಳಬಹುದು.
ಎಲ್ಲಾ ರಂಗಗಳಲ್ಲಿ ನಾವು ಕಳೆದುಕೊಂಡ ನಮ್ಮತನವನ್ನು ಮತ್ತೆ ಪಡೆಯುವ ಸಾಧ್ಯತೆಗಳನ್ನು, ಅವು ಪಡೆಯಬೇಕಾದ ಅಭಿವ್ಯಕ್ತಿಯ ಬಗೆಯನ್ನು ಇತ್ಯಾದಿ ಹತ್ತುಹಲವು ಆಯಾಮಗಳಲ್ಲಿ ಕೆಲವನ್ನಾದರೂ ಸ್ಪರ್ಶಿಸಿ ಉತ್ಕೃಷ್ಟ ಕಾವ್ಯಗುಣವುಳ್ಳ ಸ್ವರಚಿತ ಕವಿತೆಗೆ ಈ ಕವಿಗೋಷ್ಠಿಯಲ್ಲಿ ವಾಚನಕ್ಕೆ ಅವಕಾಶವಿದೆ.

  • ಕವಿತೆಗಳು ಹದಿನಾರರಿಂದ ಇಪ್ಪತ್ತೆರಡು ಸಾಲುಗಳ ಮಿತಿಯಲ್ಲಿರಲಿ.
  • ಭಾರತೀಯ ಭಾಷೆಯಲ್ಲಿರಲಿ.
  • ಕನ್ನಡದ ಹೊರತಾದ ಕವಿತೆಗಳ ಕನ್ನಡ ಭಾವಾನುವಾದವನ್ನು ಕಳುಹಿಸಬೇಕು.
  • ಆಯ್ಕೆಯಾದ ಕವಿತೆಗಳನ್ನು ರಾಜ್ಯ ಅಧಿವೇಶನದಲ್ಲಿ ವಾಚಿಸಲು ಅವಕಾಶ ನೀಡಲಾಗುವುದು.
  • ಆಯ್ಕೆ ಸಮಿತಿಯ ನಿರ್ಣಯವೇ ಅಂತಿಮ.
  • ಕವಿತೆಗಳನ್ನು ದಿನಾಂಕ ೨೦೨೫ ಜನವರಿ ೩೧ರ ಒಳಗೆ ಕಳುಹಿಸಬೇಕು.
  • ಕವಿತೆಗಳನ್ನು ವಾಟ್ಸಾಪಿನಲ್ಲಿ ವರ್ಡ್ ಫೈಲಿನಲ್ಲಿಯೇ ಕಳಿಸಬೇಕು.
  • ಕಳುಹಿಸಬೇಕಾದ ವಾಟ್ಸಾಪ್ ಸಂಖ್ಯೆ
    9480007488 (ಸುಜಾತಾ ಹೆಗಡೆ)
  • ಕವಿತೆ ಜತೆಗೆ ಹೆಸರು, ವಯಸ್ಸು, ವಿಳಾಸ ಹಾಗೂ ಸಂಪರ್ಕ ಸಂಖ್ಯೆಗಳನ್ನು ನಮೂದಿಸಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...