National Road Safety Month ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಕಚೇರಿಯ ಜಂಟಿ ಸಾರಿಗೆ ಆಯುಕ್ತಾರಾದ ಭೀಮನಗೌಡ ಪಾಟೀಲ್ ಅವರು ಆರ್‌ಟಿಓ ಕಚೇರಿ ಜ್ಯೋತಿ ಬೆಳಗುವ ಮೂಲಕ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಇತ್ತೀಚೆಗೆ ಉದ್ಘಾಟಿಸಿದರು.
ಅವರು ಈ ವೇಳೆ ಮಾತನಾಡಿ, ವಾಹನ ಚಾಲನೆ ಮಾಡುವ ಪ್ರತಿಯೊಬ್ಬರು ವಾಹನ ಚಾಲನೆ ಪರವಾನಿಗೆ ಹೊಂದಿರಬೇಕು. ವಾಹನ ಚಾಲನೆ ವೇಳೆ ರಸ್ತೆ ಸುರಕ್ಷತಾ ನಿಯಮಾವಳಿಗಳನ್ನು ಪಾಲಿಸಬೇಕು. ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗುವಾಗ ಸೇಫ್ಟಿ ಹಾರ್ನೆಸ್‌ನ್ನು ಬಳಸಬೇಕು. ನಾಲ್ಕು ಚಕ್ರ ವಾಹನ ಚಾಲಕರು ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು ಎಂದು ತಿಳಿಸಿದರು.
National Road Safety Month ಇದೇ ವೇಳೆ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿ ಹಂಚಲಾಯಿತು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಮುರಗೇಂದ್ರ ಬಿ ಶಿರೋಳಕರ, ಹಿರಿಯ ಮೋಟಾರ್ ವಾಹನ ನಿರೀಕ್ಷಕರಾದ ಮಲ್ಲೇಶಪ್ಪ, ಮೋಟಾರ್ ವಾಹನ ನಿರೀಕ್ಷಕರಾದ ಮಂಜುನಾಥ್, ಕಚೇರಿ ಅಧೀಕ್ಷಕರಾದ ರಮ್ಯಾ, ಸಿಬ್ಬಂದಿ ಡಿ.ಮೋಹನ್ ಕುಮಾರ್ ಹಾಗೂ ಚಾಲನಾ ತರಬೇತಿ ಶಾಲೆಯ ಪ್ರಾಂಶುಪಾಲರು, ವಕೀಲರು, ಸಾರ್ವಜನಿಕರು ಹಾಜರಿದ್ದರು.
National Road Safety Month ವಾಹನ ಸವಾರರು ರಸ್ತೆ ಸುರಕ್ಷತೆ ನಿಯಮಾವಳಿ ತಿಳಿದಿರಬೇಕು- ಭೀಮನಗೌಡ ಪಾಟೀಲ್
Date: