Indian Post ದೇಶದ ಗಡಿಯಲ್ಲಿ ಹಗಲು ಇರುಳೆನ್ನದೇ ವೀರಯೋಧರು ಸೇವೆ ಸಲ್ಲಿಸುತ್ತಿರುವುದರಿಂದ ಜನರು ಸುರಕ್ಷಿತವಾಗಿದ್ದೇವೆ ಎಂದು ಭಾರತೀಯ ಅಂಚೆ ಕಚೇರಿ ಮಾರ್ಕೆಟಿಂಗ್ ಎಕ್ಸಿಕ್ಯೂಟರ್ ಆಶಾ ಹೇಳಿದರು.
ಭಾರತೀಯ ಅಂಚೆ ಕಚೇರಿ ಶಿವಮೊಗ್ಗ ವತಿಯಿಂದ ನಗರದ ಗ್ಲೋಬಲ್ ಆಂಗ್ಲ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 77ನೇ ಸೈನ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವೀರಯೋಧರು ಕಾರ್ಯ ನಿರ್ವಹಿಸುವ ರೀತಿ ಕುರಿತು ಎಲ್ಲರೂ ತಿಳಿದುಕೊಳ್ಳಬೇಕು ಎಂದರು.
ಲೀಡರ್ ಟ್ರೈನರ್ ಗೈಡ್ಸ್ ಕಾತ್ಯಾಯಿನಿ ಸಿ.ಎಸ್. ಮಾತನಾಡಿ, ಮಕ್ಕಳು ಸೇವೆಗೆ ಸದಾ ಸಿದ್ಧರಾಗಿರಬೇಕು. ಬಾಲ್ಯದಿಂದಲೇ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಕೈಲಾದಷ್ಟು ಸಹಾಯ ಮಾಡಬೇಕು ಎಂದು ತಿಳಿಸಿದರು.
Indian Post ಮುಖ್ಯಶಿಕ್ಷಕ ಹರ್ಷ ಮಾತನಾಡಿ, ಮಕ್ಕಳು ರಾಷ್ಟ್ರದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ದೇಶಕ್ಕಾಗಿ ತಮ್ಮ ಕರ್ತವ್ಯ ಮಾಡಬೇಕು ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ನ ಬನ್ನೀಸ್ ಶಿಕ್ಷಕಿ ನಳಿನಿ ಉಪಸ್ಥಿತರಿದ್ದರು.
ಯೋಧರ ಸೇವೆ ಸ್ಮರಿಸುವ, 77ನೇ ಸೈನ್ಯ ದಿನಾಚರಣೆ ಬಗ್ಗೆ ಚಿತ್ರಕಲಾ ಸ್ಪರ್ಧೆ, ಯೋಧರಿಗೊಂದು ಭಾವನಾತ್ಮಕ ಪತ್ರ, ಯೋಧರಿಗಾಗಿ ರಾಖಿ ಚಿತ್ರ ಚಿತ್ರಿಸುವ, ಸಂದೇಶ ಬರೆಯುವ ಹಾಗೂ ಎಲ್ಲ ಪ್ರತಿಗಳನ್ನು ಅಂಚೆ ಕಚೇರಿ ಮೂಲಕ ಯೋಧರಿಗೆ ತಲುಪಿಸುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಕ್ಕಳು ಸೈನ್ಯ ಮತ್ತು ಸೈನಿಕರ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಬನ್ನೀಸ್, ಕಬ್ಸ್, ಬುಲ್‌ಬುಲ್ಸ್, ಸ್ಕೌಟ್ಸ್, ಗೈಡ್ಸ್ ಹಾಗೂ ಶಾಲೆಯ ಎಲ್ಲ ಮಕ್ಕಳು ಭಾಗವಹಿಸಿದ್ದರು.