Prerana Institute ತಮಿಳುನಾಡಿನ ಕಂಚಿಪುರಂನಲ್ಲಿ ಭಾವಸಾರ ವಿಷನ್ ಇಂಡಿಯಾದಿಂದ ಡಿ. 28, 29ರಂದು ಆಯೋಜಿಸಿದ್ದ ರಾಷ್ಟ್ರಮಟ್ಟದ ಸಮಾವೇಶದಲ್ಲಿ ಬಿವಿಐ ಪ್ರೇರಣಾ ಶಿವಮೊಗ್ಗ ಸಂಸ್ಥೆಯು ಮೂರು ರಾಷ್ಟ್ರಮಟ್ಟದ ಪ್ರಶಸ್ತಿ ಹಾಗೂ ಏಳು ಏರಿಯಾ ಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
Prerana Institute ಬಿವಿಐ ಪ್ರೇರಣಾ ಶಿವಮೊಗ್ಗ ಸಂಸ್ಥೆಯ ಉಮಾ ವೆಂಕಟೇಶ್ ಅವರು ರಾಷ್ಟ್ರಮಟ್ಟದಲ್ಲಿ ಹೈಯೆಸ್ಟ್ ಪ್ರಾಜೆಕ್ಟ್ ಅವಾರ್ಡ್, ಬೆಸ್ಟ್ ನ್ಯಾಷನಲ್ ಪ್ರೆಸಿಡೆಂಟ್‌ಗೆ ಪಾತ್ರರಾಗಿದ್ದಾರೆ. ಸುನೀಲ್ ಬೇದ್ರೆ ಅವರು ಬೆಸ್ಟ್ ಡೆಪ್ಯುಟಿ ಗವರ್ನರ್ ಆಗಿ ಪ್ರಶಸ್ತಿ ಪಡೆದಿದ್ದಾರೆ.
ಬಿವಿಐ ಪ್ರೇರಣಾ ಶಿವಮೊಗ್ಗ ಸಂಸ್ಥೆಗೆ ಏಳು ಏರಿಯಾ ಗವರ್ನರ್ ಅವಾರ್ಡ್ಸ್ ಲಭಿಸಿದೆ. ಉಮಾ ವೆಂಕಟೇಶ್ ಅವರಿಗೆ ಬೆಸ್ಟ್ ಎಕ್ಸಾಸ್ಟ್ರಾರ್ಡಿನರಿ ಪ್ರೆಸಿಡೆಂಟ್, ಕವಿತಾ ಹರೀಶ್ ಅವರಿಗೆ ಬೆಸ್ಟ್ ಸೆಕ್ರೆಟರಿ ಪ್ರಶಸ್ತಿ, ಸ್ನೇಹಾ ಪ್ರಶಾಂತ್ ಅವರಿಗೆ ಬೆಸ್ಟ್ ವುಮೆನ್ ವೆಲ್ಫೇರ್ ಪ್ರಶಸ್ತಿ, ವನಿತಾ ಪ್ರವೀಣ್ ಅವರಿಗೆ ಬೆಸ್ಟ್ ಚೈಲ್ಡ್ ವೆಲ್ಫೇರ್ ಪ್ರಶಸ್ತಿ, ಮಂಜುನಾಥ್ ಮಾಳದಕರ್ ಅವರಿಗೆ ಬೆಸ್ಟ್ ಪ್ರಾಜೆಕ್ಟ್ ಡೈರೆಕ್ಟರ್ ಪ್ರಶಸ್ತಿ ಹಾಗೂ ಅವಿನಾಶ್ ಮಿರಜಕರ ಅವರಿಗೆ ಬೆಸ್ಟ್ ವಿಜನ್ ಸರ್ವಿಸ್ ಪ್ರಶಸ್ತಿ ಲಭಿಸಿದೆ.