Bekkina Kalmatha ಶ್ರೀ ಜಗದ್ಗುರು ಗುರುಬಸವ ಮಹಾಶಿವಯೋಗಿಗಳವರ ೧೧೩ನೇ ಸ್ಮರಣೋತ್ಸವ – ಹಾರನಹಳ್ಳಿ ಕರಿಬಸವಯ್ಯ
ಪೂಜ್ಯರ ಸ್ಮರಣೋತ್ಸವ ಜನವರಿ ೧೬,೧೭,೧೮ರಂದು ಶಿವಮೊಗ್ಗ ಬೆಕ್ಕಿನಕಲ್ಮಠದಲ್ಲಿ ನಡೆಯಲಿದೆ.
( ಲಿಂ. ಪರಮ ತಪಸ್ವಿ ಗುರುಬಸವ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವದಲ್ಲಿ ಸಂದರ್ಭದಲ್ಲಿ ಪೂಜ್ಯರ ಪೀಠಾರೋಹಣ ರಜತ ಮಹೋತ್ಸವ ಸವಿನೆನಪಿಗಾಗಿ ನಾಡಿಗೆ ಅಮೂಲ್ಯ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಪ್ರತಿ ವರ್ಷ ಗುರುಬಸವಶ್ರೀ ಪ್ರಶಸ್ತಿ , ಶರಣ ಸಾಹಿತ್ಯದಲ್ಲಿ ಸಂಶೋಧನೆ , ಅಧ್ಯಯನ ಮಾಡಿದ ಸಾಧಕರಿಗೆ ಅಕ್ಕಮಹಾದೇವಿ ಹಾಗೂ ಅಲ್ಲಮಪ್ರಭು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.ಪ್ರಸಕ್ತ ವರ್ಷದ ಗುರುಬಸವಶ್ರೀ ಪ್ರಶಸ್ತಿಗೆ ಖ್ಯಾತ ರಂಗಭೂಮಿ ನಟ, ಸಿನಿಮಾ ನಿರ್ದೇಶಕ ಟಿ.ಎಸ್.ನಾಗಾಭರಣ ಅಲ್ಲಮಪ್ರಭು ಪ್ರಶಸ್ತಿಗೆ ಸಂಶೋಧಕ ಡಾ.ವೀರಣ್ಣ ರಾಜೂರು, ಅಕ್ಕಮಹಾದೇವಿ ಪ್ರಶಸ್ತಿಗೆ ಖ್ಯಾತ ಕಾದಂಬರಿಕಾರ್ತಿ ಡಾ. ಹೆಚ್ ಎಸ್.ಅನುಪಮ ಅವರು ಅವರು ಭಾಜನರಾಗಿದ್ದಾರೆ.
Bekkina Kalmatha ಮಲೆನಾಡಿನ ಮಹಾಪೀಠವಾದ ಆನಂದಪುರ ಜಗದ್ಗುರು ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನಮಠ, ಶೂನ್ಯ ಪೀಠಾಧ್ಯಕ್ಷ ನಿರಂಜನ ಜಗದ್ಗುರು ಅಲ್ಲಮಪ್ರಭು ಪರಂಪರೆಯ ಕೆಳದಿ ಅರಸರಿಂದ ಗೌರವ ಪಡೆದ ಪ್ರಮುಖ ಧರ್ಮಪೀಠವಾಗಿದೆ. ಐತಿಹಾಸಿಕ ಪರಂಪರೆಯ ತಪಸ್ವಿ, ಪಂಡಿತ, ಕವಿ, ಸಮಾಜ ಸೇವಾತತ್ಪರ ಪೂಜ್ಯರನ್ನು ಪಡೆದ ಹೆಗ್ಗಳಿಕೆ ಶ್ರೀ ಪೀಠದ್ದಾಗಿದೆ. ಈ ದಿವ್ಯ ಪರಂಪರೆಯಲ್ಲಿ ಹದಿನಾಲ್ಕುನೆಯ ಜಗದ್ಗುರುಗಳಾದ ಲಿಂ|| ಗುರುಬಸವ ಮಹಾಶಿವಯೋಗಿಗಳವರ ಹೆಸರು ಸ್ಮರಣೀಯವಾಗಿದೆ.
ಶಿವಮೊಗ್ಗ ನಗರದ ಶ್ರೀ ಬೆಕ್ಕಿನಕಲ್ಮಠ ಸ್ಥಾಪಕರಾದ ಪೂಜ್ಯರು ಇಲ್ಲಿ ನೆಲೆಸಿ ಈ ಕೇಂದ್ರದ ಮೂಲಕ ಬಸವಾದಿ ಪ್ರಮಥರ ಮಾನವ ಧರ್ಮ ಸಂದೇಶವನ್ನು ಸಾಹಿತ್ಯ-ಸಂಸ್ಕೃತಿ ಪ್ರಸಾರ ಪ್ರಕಟನೆಯ ಮೂಲಕ ಸಕಲ ಜೀವಾತ್ಮರ ಲೇಸಿಗಾಗಿ ಶ್ರಮಿಸಿದ್ದಾರೆ. ಆನಂದಪುರ ಶ್ರೀ ಜಗದುರು ಮುರುಘರಾಜೇಂದ್ರ ಮಠದ ಪೀಠಪರಂಪರೆಯ ೧೪ನೇ ಗುರುಬಸವ ಸ್ವಾಮಿಗಳು ಸಂಸ್ಕೃತ ವಿದ್ವಾಂಸರಾಗಿದ್ದು, ಕೋಟೆ ಭೀಮೇಶ್ವರ ದೇವಾಲಯದ ಆವರಣದಲ್ಲಿ ನಡೆಯುತ್ತಿದ್ದ ವಿದ್ವತ್ ಗೋಷ್ಠಿಯ ಅಧ್ಯಕ್ಷತೆಯ ಗೌರವವನ್ನು ಪಡೆದುಕೊಂಡಿದ್ದರು. ಹಿಂದೆ ಜನಭೀಕರ ರೋಗಕ್ಕೆ ತುತ್ತಾದಾಗ ಜನರಿಗೆ ಆರೋಗ್ಯ ಮಹತ್ವ ತಿಳಿಸಿ ಯೋಗ ಧ್ಯಾನದ ಮೂಲಕ ಜನಸೇವೆ ಮಾಡಿದರು. ಭಕ್ತರು ಇವರ ಮೇಲಿನ ಭಕ್ತಿ,ಅಭಿಮಾನದಿಂದ ಗುರುಪುರ ಎಂದು ನಾಮಕರಣ ಮಾಡಿದgರು. ಒಂದು ಶತಮಾನದ ಹಿಂದೆ ಶಿವಮೊಗ್ಗದ ತುಂಗಾತೀರದಲ್ಲಿ ಬೆಕ್ಕಿನಕಲ್ಮಠವನ್ನು ಭಕ್ತರ ನೆರವಿನಿಂದ ಸ್ಥಾಪಿಸಿದರು. ಗುರು ವಿರಕ್ತರ ಸಮನ್ವಯದ ಸಾಕಾರಮೂರ್ತಿಯಾಗಿದ್ದ ಇವರ ಗದ್ದುಗೆ ಹೊನ್ನಾಳಿ ಹೀರೆಕಲ್ಮಠದಲ್ಲಿದೆ.
ಪ್ರಸ್ತುತ ಪೀಠಾಧಿಕಾರಿಗಳಾದ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು. ಡಾ. ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಗುರುಬಸವ ಮಹಾಸ್ವಾಮಿಗಳವರ ಆದರ್ಶಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಪೂಜ್ಯರ ಹೆಸರಿನಲ್ಲಿ ಶ್ರೀ ಜಗದ್ಗುರು ಗುರುಬಸವೇಶ್ವರ ವಿದ್ಯಾಪೀಠ ಸ್ಥಾಪಿಸಿ ಶಿಶುವಿಹಾರದಿಂದ ಕಾಲೇಜು ಶಿಕ್ಷಣದ ವರೆಗೂ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಉಚಿತ ವಿದ್ಯಾರ್ಥಿ ನಿಲಯಗಳನ್ನು ನಡೆಸುತ್ತಿದ್ದಾರೆ. ಗುರುಬಸವ ಅಧ್ಯಯನ ಪೀಠದಿಂದ ಧರ್ಮ, ಸಂಸ್ಕೃತಿ .ಕಲೆಗೆ ಸಂಬಂಧಿಸಿದ ಮೌಲಿಕ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ನಾಡಿನ ಜ್ಞಾನ ದಾಸೋಹಕ್ಕೆ ಅಮೂಲ್ಯ ಕೊಡುಗೆಯನ್ನು ನೀಡುತಿದ್ದಾರೆ. .ಇದುವರೆಗೂ ಸುಮಾರು ೪೦ ಪುಸ್ತಕಗಳನ್ನು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರಕಟಿಸಲಾಗಿದೆ. ಕೆಳದಿ ಸಂಸ್ಥಾನದ ಸಮಗ್ರ ಅಧ್ಯಯನ ಕುರಿತು ೧೯೯೧ ರಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಸಿ ಖ್ಯಾತ ಸಂಶೋಧಕ ಪ್ರೊ.ಎಂ.ಎಂ.ಕಲಬುರ್ಗಿಯವರ ಸಂಪಾದಕತ್ವದಲ್ಲಿ ಪುಸ್ತಕ ಪ್ರಕಟಿಸಲಾಗಿದೆ. ಈ ಗ್ರಂಥದ ಮೌಲ್ಯ ಕುರಿತು ಖ್ಯಾತ ಪತ್ರಕರ್ತ ಪಿ. ಲಂಕೇಶ ತಮ್ಮ ಪತ್ರಿಕೆಯಲ್ಲಿ ವಿಮರ್ಶೆ ಬರೆಯುವ ಮೂಲಕ ಈ ಗ್ರಂಥದ ಮಹತ್ವ ತಿಳಿಸಿದ್ದಾರೆ.
ಲಿಂ. ಪರಮ ತಪಸ್ವಿ ಗುರುಬಸವ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ ಅಂಗವಾಗಿ ಶಿವಮೊಗ್ಗದಲ್ಲಿ ಅನುಭಾವ ಸಮ್ಮೇಳನ ,ಶರಣ ಸಾಹಿತ್ಯ ಸಮ್ಮೇಳನ, ಭಾವೈಕ್ಯ ಸಮ್ಮೇಳನವನ್ನು ಜನವರಿ ೧೭,೧೮ ಮತ್ತು ೧೮ ರಂದು ಶಿವಮೊಗ್ಗ ಬೆಕ್ಕಿನಕಲ್ಮಠದಲ್ಲಿ ನಡೆಸಲಾಗುತ್ತಿದೆ. ವಚನ ಗಾಯನಸ್ಫರ್ಧೆ ರಂಗೊಲಿ ಸ್ಫಧೆೆð , ಶಿವಭಜನೆ ಸ್ಫರ್ಧೆ, ಮಕ್ಕಳ ಮಹಾಪುರುಷರ ವೇಷ-ಭೂಷಣ ಸ್ಫರ್ಧೆ ನಡೆಸಲಾಗುತ್ತಿದೆ.