Chamber of Commerce and Industry ಹಬ್ಬಗಳು ಮನಸ್ಸಿಗೆ ಸಂತೋಷ ನೀಡುವುದರ ಜತೆಯಲ್ಲಿ ಸಂಸ್ಕೃತಿ ಪರಂಪರೆಯ ಅರಿವು ಮೂಡಿಸುತ್ತದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು.
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಭದ್ರಾವತಿ ವಾಸು ನೇತೃತ್ವದ ಭಾವಗಾನ ತಂಡದಿಂದ ನಗರದ ಗೋಪಿಶೆಟ್ಟಿಕೊಪ್ಪದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಆಯೋಜಿಸಿದ್ದ ಹೊಸ ವರ್ಷಾಚರಣೆ, ಗೀತಗಾಯನ ಹಾಗೂ ಸುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಗಾಳಿಪಟ ಹಾರಿಸುವ ಆಚರಣೆ ವಿವಿಧೆಡೆ ಇದೆ. ಹೋರಿಗಳನ್ನು ಬೆದರಿಸುವ, ಕಿಚ್ಚು ಹಾಯಿಸುವ ಆಚರಣೆಗಳು ಸಹ ಇವೆ. ಹಬ್ಬಗಳ ಆಚರಣೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಕರಾತ್ಮಕ ಭಾವನೆ ದೂರವಾಗಿ ಧಾರ್ಮಿಕ ಮನೋಭಾವ ವೃದ್ಧಿಸುತ್ತದೆ. ಎಲ್ಲರನ್ನೂ ಒಗ್ಗೂಡಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾವಗಾನ ತಂಡದ ಅಧ್ಯಕ್ಷ ಭದ್ರಾವತಿ ವಾಸು ಮಾತನಾಡಿ, ಸಂಕ್ರಾಂತಿ ಸಂಭ್ರಮದಂದು ಅಡಕೆ, ಜೋಳ, ಭತ್ತ, ವಿವಿಧ ಧಾನ್ಯಗಳ ರಾಶಿ ಹಾಕಿ ಕಬ್ಬು, ಬಾಳೆ, ತಳಿರುತೋರಣಗಳಿಂದ ಸಿಂಗಾರ ಮಾಡಿ ರಾಶಿಪೂಜೆ ಮಾಡಿ ಹಬ್ಬ ಸಂಭ್ರಮಿಸುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದರು.
Chamber of Commerce and Industry ಎಳ್ಳುಬೆಲ್ಲ ಹಂಚಿ ಹಾಡು, ನೃತ್ಯದೊಂದಿಗೆ ಸಂಭ್ರಮಿಸಲಾಯಿತು. ಸುಗ್ಗಿ ಹಾಡುಗಳನ್ನು ಹಾಡಲಾಯಿತು. ಭಾವೈಕ್ಯತೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆ ಆಚರಣೆಯೊಂದಿಗೆ ಈಗಾಗಲೇ ಭಾವಗಾನ ತಂಡದ ಸದಸ್ಯರು ರಾಜ್ಯಮಟ್ಟದಲ್ಲಿ ಪ್ರತಿಭೆ ಅನಾವರಣಗೊಳಿಸಿ ಶಿವಮೊಗ್ಗ ಜಿಲ್ಲೆ ಕೀರ್ತಿ ತಂದಿರುತ್ತಾರೆ.
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್, ಗಣೇಶ್, ಭುಜಂಗಪ್ಪ, ಪರಶುರಾಮ್, ಪ್ರಶಾಂತ್, ಆದ್ಯಾ, ಹೇಮಂತ್, ಪ್ರತಿಮಾ, ಉಮಾ, ಪದಾಧಿಕಾರಿಗಳು, ಸದಸ್ಯರು ಇದ್ದರು.