MESCOM ದಿನಾಂಕ: 16.01.2025 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 01 ರವರೆಗೆ ನಗರ ಉಪವಿಭಾಗ-1, ಸರ್ವಜ್ಞ ವೃತ್ತ, ಬಾಲ್‌ರಾಜ್ ಅರಸ್ ರಸ್ತೆ, ಮೆಸ್ಕಾಂ, ಶಿವಮೊಗ್ಗ ಕಛೇರಿಯಲ್ಲಿ “ಜನ ಸಂಪರ್ಕ ಸಭೆ” ಯನ್ನು ನಡೆಸಲಗುವುದು.
ಈ ಸಭೆಯಲ್ಲಿ ಮೆಸ್ಕಾಂ ಹಿರಿಯ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಗ್ರಾಹಕರಿಂದ ಮೆಸ್ಕಾಂ ಕಂಪನಿಯ ವಿದ್ಯುತ್ ಸಂಬಂಧಿತ ಅಹವಾಲುಗಳನ್ನು ಸ್ವೀಕರಿಸಲಾಗುವುದು.
MESCOM ಆದ್ದರಿಂದ ಶಿವಮೊಗ್ಗ ನಗರ ಉಪವಿಭಾಗ-1 ರ ಘಟಕ-1, 2 ಮತ್ತು 3 ರ ವ್ಯಾಪ್ತಿಯಲ್ಲಿನ ಗ್ರಾಹಕರು ಸದರಿ “ಜನ ಸಂಪರ್ಕ ಸಭೆ” ಯ ಸದುಪಯೋಗ ಪಡೆಯಬೇಕೆಂದು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ನಗರ ಉಪ ವಿಭಾಗ-1 ಇವರು ತಿಳಿಸಿದ್ದಾರೆ.