Environmental Science from Sahyadri Science College ಹಬ್ಬಗಳನ್ನು ಆಚರಿಸುವ ಮೂಲಕ ಭಾರತೀಯ ಸಂಸ್ಕೃತಿ, ಸಂಪ್ರದಾಯದ ವೈಜ್ಞಾನಿಕ ಹಿನ್ನೆಲೆಯ ಅರಿವನ್ನು ಮುಂದಿನ ಪೀಳಿಗೆಗೆ ಹಬ್ಬಗಳ ವಿಶೇಷತೆ, ಆಹಾರ ಕ್ರಮ ಉಡುಗೆ-ತೊಡುಗೆಗಳನ್ನು ಪರಿಚಯಿಸಿದಂತಾಗುತ್ತದೆ ಎಂದು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನಾಗರಾಜ ಪರಿಸರ ಹೇಳಿದರು.
ಮಕರ ಸಂಕ್ರಾಂತಿ ಪ್ರಯುಕ್ತ ವಿನೋಬನಗರದ ರಾಯಲ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಆಯೋಜಿಸಿದ್ದ ರಾಯಲ್ ಸುಗ್ಗಿ ಸಂಭ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಹಬ್ಬಗಳ ಆಚರಣೆಯ ಮಹತ್ವವನ್ನು ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ,
ಮಕ್ಕಳಿಗೆ ಭತ್ತದ ರಾಶಿ, ಕಬ್ಬುಗಳು ಹಾಗೂ ಹಣ್ಣು, ತರಕಾರಿ, ಗೆಡ್ಡೆ ಗೆಣಸುಗಳು, ಎಳ್ಳು ಬೆಲ್ಲ ಹಾಗೂ ಸುಗ್ಗಿಯ ಮಹತ್ವದ ಅರಿವು ಮಕ್ಕಳಿಗೆ ತಿಳಿಸುವುದು ಬಹಳ ವಿಶೇಷ ಎಂದರು.
ಶಾಲೆ ಕಾರ್ಯದರ್ಶಿ ಪೂಜಾ ನಾಗರಾಜ್ ಪರಿಸರ ಮಾತನಾಡಿ, ಶಾಲೆಯ ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಹಬ್ಬದ ಉತ್ಸವದಲ್ಲಿ ಭಾಗವಹಿಸಿದ್ದು ತುಂಬಾ ಸಂತೋಷ ಎಂದು ಹೇಳಿದರು.
Environmental Science from Sahyadri Science College ಕನ್ನಡ ಶಿಕ್ಷಕ ಅರುಣ್ ಅವರು ಸಂಕ್ರಾಂತಿ ಹಾಗೂ ಸುಗ್ಗಿ ಹಬ್ಬದ ವಿಶೇಷತೆ ಕುರಿತು ತಿಳಿಸಿಕೊಟ್ಟರು. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ ಎನ್ನುವರು, ಸಂಕ್ರಾಂತಿ ಅಂದಾಕ್ಷಣ ನೆನಪಾಗುವುದು ಎಳ್ಳು ಬೆಲ್ಲ. ಸಂಕ್ರಾಂತಿ ಮಹತ್ವವನ್ನು ಪುರಾಣ ತಿಳಿಸುತ್ತದೆ. ವಿಜ್ಞಾನ ಇಣುಕು ಹಾಕುತ್ತದೆ. ಸಂಪ್ರದಾಯ ಮಾತಾಡುತ್ತದೆ. ಕೃತಜ್ಞತೆ ಕೈ ಹಿಡಿಯುತ್ತದೆ. ನಮಗೆ ಒಳಿತಾಗಲಿ, ನಮ್ಮ ಬದುಕಲ್ಲಿ ಸಂಕ್ರಾಂತಿಯಾಗಲಿ ಎಂಬ ಆಶಾವಾದ ಇರುತ್ತದೆ ಎಂದರು.
ಸಂಕ್ರಾಂತಿಯಂದು ಎಳ್ಳು ಬೆಲ್ಲ ಕಡಲೆ ಮತ್ತು ಕೊಬ್ಬರಿಯನ್ನು ತಿನ್ನಬೇಕು. ಚಳಿಗಾಲದ ಅವಧಿಯಲ್ಲಿ ಚರ್ಮ ಒಡೆದಿರುತ್ತದೆ. ದೇಹದಲ್ಲಿ ಎಣ್ಣೆ ಅಂಶ ಕಡಿಮೆ ಇರುತ್ತದೆ. ಎಳ್ಳು ಬೆಲ್ಲ ಕೊಬ್ಬರಿ ಕಡಲೆಯನ್ನು ಈ ಸಂದರ್ಭದಲ್ಲಿ ಸ್ವೀಕರಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಪರ್ಶ ಅಮೋಘ, ಮುಖ್ಯ ಶಿಕ್ಷಕ ವಿನಯ್ ಎಸ್, ಶಿಕ್ಷಕರಾದ ಸೋನಿಕ, ವಿಂದ್ಯಾ, ಪಲ್ಲವಿ, ರವಿಕುಮಾರ್, ಭಾಗ್ಯಲಕ್ಷ್ಮಿ, ಸುನಿತ ಇನ್ನಿತರರು ಹಾಗೂ ಪೋಷಕರು ಭಾಗವಹಿಸಿದ್ದರು