Bhadravathi Police ಭದ್ರಾವತಿಯ ಕಡದಕಟ್ಟೆ ಲೇಔಟ್‌ನ ಚನ್ನಕೇಶವ, 68 ವರ್ಷ ಇವರು 2024 ರ ಜು.3 ರ ರಾತ್ರಿಯಿಂದ ಮನೆಯಿಂದ ಕಾಣೆಯಾಗಿದ್ದಾರೆ.
ಕಾಣೆಯಾದ ಚನ್ನಕೇಶವ ಸುಮಾರು 5.2 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಧೃಡ ಮೈಕಟ್ಟು ಹೊಂದಿದ್ದಾರೆ. ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಇವರು ಬಿಳಿ ಬಣ್ಣದ ಚೆಕ್ಸ್ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ತಲೆಯಲ್ಲಿ 1 ಇಂಚು ಉದ್ದರ ಕಪ್ಪು ಬಿಳಿ ಮಿಶ್ರಿತ ಗುಂಗುರು ಕೂದಲು, ಸೊಂಟದಲ್ಲಿ ಬೆಳ್ಳಿ ಉಡುದಾರ, ಕತ್ತಿನಲ್ಲಿ ಮಂಜುನಾಥ ಸ್ವಾಮಿಯ ಡಾಲರ್, ಎಡಗೈ ಮುಂಗೈ ಮೇಲೆ ನಾಣ್ಯದ ಗಾತ್ರದ ಗಾಯದ ಗುರುತು ಹಾಗೂ ಕತ್ತಿನ ಹಿಂಭಾಗದಲ್ಲಿ ಒಂದು ಇಂಚು ಉದ್ದದ ಸುಟ್ಟ ಗಾಯದ ಗುರುತು ಇದೆ.
Bhadravathi Police ಇವರ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ಸಂಖ್ಯೆ : 08282 274313, ಸಿಪಿಐ ನಗರ ವೃತ್ತ ಕಚೇರಿ ಸಂಖ್ಯೆ 08282266549, ಡಿಎಸ್‌ಪಿ ಭದ್ರಾವತಿ 08282 266252 ನ್ನು ಸಂಪರ್ಕಿಸಬಹುದೆಂದು ಭದ್ರಾವತಿ ನ್ಯೂಟೌನ್ ಪೊಲೀಸ್ ಇಲಾಖೆ ತಿಳಿಸಿದೆ.