Rotary Club Shivamogga ಯುವ ಸಮೂಹವನ್ನು ಜಾಗೃತಗೊಳಿಸಿದ ಭಾರತದ ಆಧ್ಯಾತ್ಮಿಕದ ಪ್ರೇರಕಶಕ್ತಿ ಸ್ವಾಮಿ ವಿವೇಕಾನಂದರು ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಜಿ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆಯಲ್ಲಿ ಮಾತನಾಡಿ, ಭವ್ಯ ಭಾರತ ನಿರ್ಮಾಣದ ಸಂಕಲ್ಪ ತೊಟ್ಟ ಅದಮ್ಯ ಚೇತನ ಸ್ವಾಮಿ ವಿವೇಕಾನಂದರು ಮೂರು ಶ್ರೇಷ್ಠ ಸಾಲುಗಳನ್ನು ಹೇಳಿದ್ದರು. ನಿಮ್ಮನ್ನು ಸಹಾಯ ಮಾಡಿದವರನ್ನು ಎಂದು ಮರೆಯಬೇಡಿ, ನಿಮ್ಮನ್ನು ನಂಬಿದವರಿಗೆ ಎಂದು ಮೋಸ ಮಾಡಬೇಡಿ, ನಿಮ್ಮನ್ನ ಪ್ರೀತಿಸಿದವರಿಗೆ ಎಂದು ದ್ವೇಷಿಸಬೇಡಿ ಎಂದಿದ್ದರು. ಯುವ ಸಮೂಹಕ್ಕೆ ಸ್ಪೂರ್ತಿಯಾಗಿದ್ದರು ಎಂದು ತಿಳಿಸಿದರು.
Rotary Club Shivamogga ಸ್ವಾಮಿ ವಿವೇಕಾನಂದರು ಪಾಶ್ಚಿಮಾತ್ಯ ದೇಶಗಳಿಗೆ ತೆರಳಿ ನಮ್ಮ ದೇಶದ ವೇದಾಂತ ಮತ್ತು ಯೋಗ ತತ್ವ ಜ್ಞಾನಗಳ ಪರಿಚಯಿಸುತ್ತಿದ್ದರು. ಸ್ವಾಮಿ ವಿವೇಕಾನಂದರ 162ನೇ ಜಯಂತಿಯನ್ನು ರೋಟರಿ ಕ್ಲಬ್ ಸೆಂಟ್ರಲ್ ನಲ್ಲಿ ಆಚರಿಸುತ್ತಿರುವುದು ತುಂಬಾ ಹೆಮ್ಮೆಯ ವಿಷಯ ಎಂದರು.
ಸ್ವಾಮಿ ವಿವೇಕಾನಂದರ ಆದರ್ಶಗಳು ಎಂದಿಗೂ ಅಜರಾಮರ. ದಿನಕ್ಕೊಮ್ಮೆ ನಿಮ್ಮೊಂದಿಗೆ ಮಾತನಾಡಿ ಇಲ್ಲದಿದ್ದರೆ ಈ ಜಗತ್ತಿನಲ್ಲಿ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವುದು ತಪ್ಪಿಸಿಕೊಳ್ಳುತ್ತೀರಿ, ನೀವು ಒಳಗಿನಿಂದಲೇ ಬೆಳೆಯಬೇಕು. ಯಾರು ನಿಮಗೆ ಕಲಿಸಲು ಸಾಧ್ಯವಿಲ್ಲ, ಯಾರು ನಿಮ್ಮನ್ನು ಆಧ್ಯಾತ್ಮಿಕರಾಗಿ ಮಾಡಲಾಗುವುದಿಲ್ಲ, ನಿಮ್ಮ ಆತ್ಮವನ್ನು ಹೊರತುಪಡಿಸಿ, ಬೇರೆ ಯಾರು ಇಲ್ಲ. ನಮ್ಮ ಆಲೋಚನೆಗಳು ನಮ್ಮನ್ನು ರೂಪಿಸುತ್ತದೆ ಎನ್ನುವ ಸ್ವಾಮಿ ವಿವೇಕಾನಂದರ ಮಾತುಗಳು ಇಂದಿಗೂ ಯುವ ಜನತೆಗೆ ಸ್ಪೂರ್ತಿಯಾಗಿದೆ ಎಂದು ಹೇಳಿದರು.
ರೋಟರಿ ಕ್ಲಬ್ ಶಿಮೊಗ್ಗ ಸೆಂಟ್ರಲ್ ಪದಾಧಿಕಾರಿಗಳ ಸಭೆಯಲ್ಲಿ ಕಾರ್ಯದರ್ಶಿ ಈಶ್ವರ್, ಖಜಾಂಚಿ ಬಸವರಾಜ್, ಸಹ ಕಾರ್ಯದರ್ಶಿ ಜಯಶೀಲ ಶೆಟ್ಟಿ, ರವಿ ಕೂಟೊಜಿ ಧರ್ಮೇಂದ್ರ ಸಿಂಗ್, ರಮೇಶ್ ಎನ್, ಸಂತೋಷ್ ಬಿ ಎ, ಚಿದಾನಂದಯ್ಯ, ಚುಡಾಮಣಿ ಪವಾರ್, ಚಂದ್ರು ಜೆಪಿ, ಸತೀಶ್, ಧನಂಜಯ್, ನಿರಂಜನ್, ವಿಶ್ವನಾಥ್ ಕಾರ್ಯಕಾರಿ ಮಂಡಳಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
Rotary Club Shivamogga ಭಾರತದ ಆಧ್ಯಾತ್ಮಿಕ ಶಕ್ತಿ, ಸ್ವಾಮಿ ವಿವೇಕಾನಂದರು- ಜಿ.ಕಿರಣ್ ಕುಮಾರ್
Date: