Inner Wheel Shivamogga ನಾವು ಮಾಡುವ ಸೇವೆ ಸಾರ್ಥಕವಾಗಬೇಕಾದರೆ ಸರಿಯಾದ ಫಲಾನುಭವಿಗಳನ್ನು ಹುಡುಕಿ ಗುರುತಿಸಿ ನೀಡಬೇಕು ಅದರಲ್ಲೂ ಮಾನಸಿಕ ಅಸ್ವಸ್ಥರು ಅಶಕ್ತರಿಗೆ ಮಾಡಿದ ಸೇವೆ ಸಾರ್ಥಕ ಎಂದು ಇನ್ನರ್ ವೀಲ್ ಶಿವಮೊಗ್ಗ ಪೂರ್ವ ಸಂಸ್ಥೆಯ ಸದಸ್ಯರಾದ ಶ್ರೀಮತಿ ಜ್ಯೋತಿ ಬೆನಕಪ್ಪ ಅಭಿಮತ ವ್ಯಕ್ತಪಡಿಸಿದರು. ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಇನ್ನರ್ ವಿಲ್ ಡೇ ಕಾರ್ಯಕ್ರಮದಲ್ಲಿ ಆಧುನಿಕ ಮಾದರಿಯ ವಿತ್ ಕಮೋಡ್ ಇರುವ ವೀಲ್ ಛೇರ್ ದೇಣಿಗೆಯಾಗಿ ನೀಡಿ ಮಾತನಾಡಿದರು.
ದಾನ ಮಾಡುವ ಕೈ ಎಂದು ಸೋಲುವುದಿಲ್ಲ ಸೇವೆ ನಮ್ಮನ್ನು ಸದಾ ಕಾಪಾಡುತ್ತದೆ ಎಂದ ಅವರು ಇಂತಹವರನ್ನು ಗುರುತಿಸಿ ಸಹಾಯತ್ತ ನೀಡೋಣ ಎಂದು ನುಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇನ್ನರ್ ವೀಲ್ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ಶ್ರೀಮತಿ ವಾಗ್ದೇವಿ ಬಸವರಾಜ್ ಅವರು ವಹಿಸಿ ಮಹಿಳೆಯರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ತಮ್ಮ ಪ್ರತಿಬೆ ಅನಾವರಣಗೊಳ್ಳುವವರ ಜೊತೆಗೆ ಸಮಾಜಮುಖಿಯಾಗಿ ತೊಡಗಿಸಿಕೊಳ್ಳಲು ಅವಕಾಶ ಸಿಗುತ್ತದೆ ಎಂದು ನುಡಿದರು.
Inner Wheel Shivamogga ಇನ್ನರ್ ವೀಲ್ ಸಂಸ್ಥೆ ಸ್ಥಾಪನೆಯಾಗಿ 101 ವರ್ಷ ಕಳೆದಿದ್ದು ಈಗಾಗಲೇ ಪ್ರಪಂಚಾದ್ಯಂತ ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುತ್ತಾ ತನ್ನದೇ ಆದ ಇತಿಹಾಸ ಸೃಷ್ಟಿ ಮಾಡಿದೆ ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್ ಇನ್ನರ್ ವೀಲ್ ಜಿಲ್ಲಾ ಉಪಾಧ್ಯಕ್ಷರಾದ ಶಬರಿ ಕಡಿದಾಳ್. ರೋಟರಿ ಮಾಜಿ ಸಹಾಯಕ ಗವರ್ನರ್ ಸುನಿತಾ ಶ್ರೀಧರ್. ಮಾಜಿ ಜಿಲ್ಲಾ ಚೇರ್ಮನ್ ಸುಧಾ ಪ್ರಸಾದ್. ಕಾರ್ಯದರ್ಶಿ ಲತಾ ಸೋಮಶೇಖರ್ ಹಾಗೂ ಇನ್ನರ್ ವೀಲ್ ಸದಸ್ಯರು ಉಪಸ್ಥಿತರಿದ್ದರು.