S.N.Chennabasappa ಶಿವಮೊಗ್ಗ ನಗರದ ಶಾಸಕರಾದ ಎಸ್. ಎನ್. ಚನ್ನಬಸಪ್ಪ ಅವರು ನಗರದ ಸೋಮಿನಕೊಪ್ಪದಲ್ಲಿರುವ ಶಾರದಾ ಲೇಔಟ್ ಗೆ ಜಲ ಮಂಡಳಿಯ ಅಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಕರೊಂಡಿಗೆ ಭೇಟಿ ನೀಡಿ, ಬಿ.ಎನ್ ಶಾರದಮ್ಮ ಲೇಔಟ್ ನಿವಾಸಿಗಳ ಸಂಘದ ಮಾಸಿಕ ಸಭೆಯಲ್ಲಿ ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.
S.N.Chennabasappa ಈ ಸಂದರ್ಭದಲ್ಲಿ ಬಡಾವಣೆಯಲ್ಲಿರುವಂತಹ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಸ್ಥಳೀಯರಿಂದ ಮಾಹಿತಿ ಪಡೆದು, ಶೀಘ್ರವೇ ಸಮಸ್ಯೆಯನ್ನು ಪರಿಹರಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಿದರು.