Rashtrotthana Vidya Kendra ನಾಮ ರೂಪಾತ್ಮಕವಾದ ಈ ಶರೀರ ನಾನಲ್ಲ, ದೇಹದ ಪ್ರಾಣ ಚೇತನವಾದ ಆತ್ಮವೇ ನಾನು ಎಂಬ ಪರಮ ಸತ್ಯದ ಅರಿವನ್ನ ಹೊಂದುವುದೇ ಆಧ್ಯಾತ್ಮಿಕತೆ ಎಂದು ಹಿರಿಯ ಪತ್ರಕರ್ತ ಡಾ ಎಚ್ ಬಿ ಮಂಜುನಾಥ ಹೇಳಿದರು.
ರಾಷ್ಟ್ರೋತ್ಥಾನ ಕೇಂದ್ರದಲ್ಲಿ ರಾಷ್ಟ್ರೋತ್ಥಾನ ಸಿ ಬಿ ಎಸ್ ಇ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಏರ್ಪಾಡಾಗಿದ್ದ ರಾಜ್ಯಮಟ್ಟದ ‘ಆಧ್ಯಾತ್ಮಿಕ ಪರ್ವ’ ಶಿಬಿರದಲ್ಲಿ ‘ಭಗವದ್ಗೀತೆ ಮತ್ತು ಆಧ್ಯಾತ್ಮಿಕತೆ’ ಎಂಬ ವಿಷಯವಾಗಿ ಉಪನ್ಯಾಸ ನೀಡುತ್ತಾ ತಿಳಿದುಕೊಳ್ಳಲು ಕ್ಲಿಷ್ಟಕರ ಎನಿಸುವ ವೇದಾಂತಗಳ ಸಾರ ಸಂಗ್ರಹವನ್ನು 18 ಅಧ್ಯಾಯಗಳಲ್ಲಿ ಏಳುನೂರು ಸರಳ ಶ್ಲೋಕಗಳ ಮೂಲಕ ಮೂಲಕ ಭಗವದ್ಗೀತೆ ಕೊಟ್ಟಿರುವುದು ಕೇವಲ ಭಾರತಕಷ್ಟೇ ಅಲ್ಲ, ಇಡೀ ಮನುಕುಲಕ್ಕಾಗಿ, ಆದ್ದರಿಂದಲೇ ಪ್ರಪಂಚದ ಬಹುತೇಕ ಭಾಷೆಗಳಿಗೆ ಭಗವದ್ಗೀತೆ ಭಾಷಾಂತರಗೊಂಡಿದೆ. ಸೇವಿಸುವ ಆಹಾರ,ನಡೆಸುವ ಚಿಂತನೆ, ಮಾಡುವ ಕಾರ್ಯ ಮುಂತಾಗಿ ಎಲ್ಲವೂ ಅರ್ಥವತ್ತಾಗಿ ನಡೆಸುವುದು ಹೇಗೆ ಎಂಬುದನ್ನು ಹೇಳಿರುವ ಭಗವದ್ಗೀತೆಯು ಪ್ರಸ್ತುತ ಮಾನವರನ್ನು ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ಯುವ ಜನರನ್ನು ಕಾಡುತ್ತಿರುವ ಚಿತ್ತಚಾಂಚಲ್ಯವನ್ನು ನಿವಾರಿಸುವುದು ಹಾಗೂ ಏಗಾಗ್ರತೆಯನ್ನು ಹೊಂದುವುದು ಹೇಗೆ ಎಂಬುದನ್ನು ಭಗವದ್ಗೀತೆ ಸರಳವಾಗಿ ಹೇಳಿದೆ ಎಂಬುದನ್ನು ತತ್ಸಂಬಂಧಿ ಶ್ಲೋಕಗಳ ಮೂಲಕ ಮಂಜುನಾಥ್ ವಿವರಿಸಿದರು.
Rashtrotthana Vidya Kendra ರಾಜ್ಯದಾದ್ಯಂತದಿಂದ ರಾಷ್ಟ್ರೋತ್ಥಾನ ಸಿ ಬಿ ಎಸ್ ಇ ಶಾಲಾ ವಿದ್ಯಾರ್ಥಿಗಳು ಆಗಮಿಸಿದ್ದರು.
ಶಾಲೆಯ ಪ್ರಾಂಶುಪಾಲ ಮಂಜುನಾಥ್, ಶಶಿಧರ್, ಐಶ್ವರ್ಯಾ, ಸರಸ್ವತಿ ಬಡಾವಣೆಯ ರಾನಡೆ ಮುಂತಾದವರು ಉಪಸ್ಥಿತರಿದ್ದರು.