Bharat Scouts and Guides,ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯದ ರಾಜ್ಯ ಮುಖ್ಯ ಆಯುಕ್ತರು, ಮಾಜಿ ಸಚಿವರೂ ಆದ ಮಾನ್ಯಶ್ರೀ ಪಿ. ಜಿ. ಆರ್. ಸಿಂಧ್ಯಾ ರವರು ಶಿವಮೊಗ್ಗ ಜಿಲ್ಲಾ ಸಂಸ್ಥೆಗೆ ಭೇಟಿ ನೀಡಿ ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ವಿಚಾರ ವಿನಿಮಯ ಮಾಡುತ್ತ ಕರ್ನಾಟಕ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ರಾಷ್ಟ್ರಮಟ್ಟದಲ್ಲಿ ಪ್ರಬಲ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತಿಸ್ಗಡ್ ಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದಿದೆ ಎಂದು ಹೇಳಿದರು. ಗಣತಿ, ಮಕ್ಕಳ ಕಾರ್ಯಾಚಟುವಟಿಕೆ ಅಯೋಜನೆ, ವಯಸ್ಕ ನಾಯಕರ ತರಬೇತಿ ಆಯೋಜನೆಯಲ್ಲಿ ರಾಜ್ಯ ಸಂಸ್ಥೆಯು ಸಾಧಿಸಿರುವ ಪ್ರಗತಿಯ ಮಾನದಂಡದ ಮೇಲೆ ರಾಷ್ಟ್ರಸಂಸ್ಥೆಯು ಗುರುತಿಸಿ ಗೌರವಿಸಿದೆ ಎಂದರು.
ಶ್ರೀ ಎಸ್. ಜಿ. ಆನಂದ್ ಜಿಲ್ಲಾ ಆಯುಕ್ತರು (ಸ್ಕೌಟ್ ) ಸರ್ವರನ್ನು ಸ್ವಾಗತಿಸಿದರು. ಶ್ರೀ ಚಂದ್ರಶೇಖರಯ್ಯ ಜಿಲ್ಲಾ ಕಾರ್ಯದರ್ಶಿ 2024-25ನೇ ಸಾಲಿನಲ್ಲಿ ನಡೆಸಿದ ಕಾರ್ಯಾಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು.
ಶ್ರೀ ಕೆ. ರವಿ ಜಿಲ್ಲಾ ಆಯುಕ್ತರು (ರೋವರ್ ) ರವರು ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀ ಸಿಂಧ್ಯಾ ರವರು ಮಾತನಾಡುತ್ತಾ ಜಿಲ್ಲಾ ಸಂಸ್ಥೆಯ ಪ್ರಗತಿ, ಚಟುವಟಿಕೆ ಬಗ್ಗೆ ಪ್ರಶಂಸಿದರು. ಹಾಗೆಯೇ ತಮಿಳು ನಾಡಿನ ತಿರುಚಿಯಲ್ಲಿ ಏರ್ಪಡಿಸಿರುವ, ರಾಷ್ಟ್ರದ್ಯಂತದಿಂದ ಸುಮಾರು ೨೫೦೦೦ ಮಕ್ಕಳು ಭಾಗವಹಿಸುತ್ತಿರುವ ಅಮೃತ ಮಹೋತ್ಸವ ರಾಷ್ಟ್ರೀಯ ಜಂಬೂರೀಯಲ್ಲಿ ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ರಾಜ್ಯದಿಂದ ಸುಮಾರು ಎಂಟುನೂರು ಮಕ್ಕಳು ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿ, ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ಸಹ ಭೇಟಿ ಕೊಡಲು ಹೇಳಿದರು.
Bharat Scouts and Guides ಹಾಗೆಯೇ ಗಣತಿಯಲ್ಲಿ ಪ್ರಗತಿ ಸಾಧಿಸಲು ಸೂಚಿಸಿದರು. ರಾಜ್ಯ ಸಂಘಟನಾ ಆಯುಕ್ತ (ಸ್ಕೌಟ್ ) ಶ್ರೀ ಎಂ. ಪ್ರಭಾಕರ್ ಭಟ್ ರವರು ರಾಜ್ಯ ಸಂಸ್ಥೆಯ ವತಿಯಿಂದ ಮುಂದಿನ ದಿನಗಳಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳ ಮಾಹಿತಿ ನೀಡಿ ಜಿಲ್ಲಾ ಸಂಸ್ಥೆಯೂ ಅರ್ಹ ಶಿಭಾರಾರ್ಥಿಗಳನ್ನು ನಿಯೋಜಿಸಲು ಕೋರಿದರು.
ಶ್ರೀಮತಿ ಸರಸ್ವತಿ ನಾಗರಾಜ್ ಜಿಲ್ಲಾ ಆಯುಕ್ತರು ವಯಸ್ಕ ಸಂಪನ್ಮೂಲ ( ಗೈಡ್ ) ರವರು ಮಾತನಾಡುತ್ತ ಶ್ರೀ ಸಿಂಧ್ಯಾ ರವರು ರಾಜ್ಯದ ಚುಕ್ಕಾಣಿ ಹಿಡಿದಂದಿನಿಂದ ರಾಜ್ಯವು ಬಹಳಷ್ಟು ಪ್ರಗತಿ ಸಾದಿಸಿದ್ದದ್ದಕ್ಕಾಗಿ ಅವರನ್ನು ಅಭಿನಂದಿಸಿದರು.
ಶ್ರೀ ರಾಜೇಶ್ ವಿ ಅವಲಕ್ಕಿ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಸರ್ವರಿಗೂ ವಂದಿಸಿದರು. ಜಿಲ್ಲಾ ಸಹಕಾರ್ಯದರ್ಶಿ ಶ್ರೀ ವೈ ಆರ್ ವೀರೇಶಪ್ಪ, ಜಿಲ್ಲಾ ಖಜಾಂಚಿ ಶ್ರೀ ಚೂಡಾಮಣಿ ಈ ಪವಾರ್, ಕೇಂದ್ರ ಸ್ಥಾನಿಕ ಆಯುಕ್ತರಾದ ಶ್ರೀ ಜಿ. ವಿಜಯ್ ಕುಮಾರ್, ಶ್ರೀ ಆರ್. ರಾಘವೇಂದ್ರ, ಕಛೇರಿ ಸಿಬ್ಬಂದಿ ಶ್ರೀ ದೇವಯ್ಯ, ಭರತ್ ಉಪಸ್ಥಿತರಿದ್ದರು.