Tirupati Stampede ತಿರುಪತಿಯಲ್ಲಿ ಇಲ್ಲಿಯವರೆಗೂ ಕೇಳದ ದುರಂತ ಸಂಭವಿಸಿದೆ. ದರ್ಶನಕ್ಕೆ ಸರತಿಯಲ್ಲಿ ನಿಂತಿದ್ದ ಭಕ್ತಾದಿಗಳು ಒಮ್ಮಿಂದೊಮ್ಮೆಲೆ ಆದ ನೂಕು ನುಗ್ಗಾಟದಿಂದ ಆರು ಮಂದಿ ಅಸು ನೀಗಿದ್ದಾರೆ.
ಕಳೆದ ಬುಧವಾರ ಸಂಭವಿಸಿದ ಘಟನೆ ಬಗ್ಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿಚಂದ್ರಬಾಬು ನಾಯ್ಡು ಗುರುವಾರವೇ ಸ್ಥಳಕ್ಕೆಭೇಟಿ ನೀಡಿ ಪರಿಶೀಲನೆ ನಡೆಸಿದರು.
Tirupati Stampede ಅಲ್ಲಿನ ಡಿವೈಎಸ್ಪಿ ರಮಣಕುಮಾರ್, ಗೋಸಂರಕ್ಷಣಾ ಶಾಲೆಯ ನಿರ್ದೇಶಕ ಕೆ.ಹರನಾಥ ರೆಡ್ಡಿ ಅವರನ್ನ ಅಮಾನತ್ತಿನಲ್ಲಿರಿಸಲು ಆದೇಶ ನೀಡಿದ್ದಾರೆ. ಕಾಲ್ತುಳಿತದ ಪ್ರಕರಣವನ್ನ ನ್ಯಾಯಾಂಗ ತನಿಖೆ ಮಾಡಲೂ ಆದೇಶಿಸಿದ್ದಾರೆ.
ಮರಣಹೊಂದಿದವರ ಕುಟುಂಬಸ್ಥರಿಗೆ ತಲಾ 25 ಲಕ್ಷ ರೂ ಮತ್ತು ಗಾಯಾಳುಗಳಿಗೆ 2 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕಾಲ್ತುಳಿತಕ್ಕೆ ಸಿಕ್ಕು
ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿರುವವರನ್ನ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.
Tirupati Stampede ತಿರುಪತಿ ಕಾಲ್ತುಳಿತ ದುರಂತ, ಮೃತರ ಕುಟುಂಬಗಳಿಗೆ ₹ 25 ಲಕ್ಷ ಪರಿಹಾರ ಘೋಷಣೆ
Date: