Kannikaparameshwari Temple ಜೀವನದಲ್ಲಿ ಬರುವ ಸವಾಲುಗಳನ್ನು ಸಂತೋಷವಾಗಿ ಸ್ವೀಕರಿಸಿದಾಗ ಮಾತ್ರ ಸಾಧನೆಗಳನ್ನು ಮಾಡಲು ಸಾಧ್ಯ,ಶಾಲಾ ವಾರ್ಷಿಕ ಪರೀಕ್ಷೆಯನ್ನೂ ಸಂತೋಷದಿಂದ ಸ್ವೀಕರಿಸಬೇಕು ಎಂದು ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ ಹೇಳಿದರು.
ದಾವಣಗೆರೆ ನಗರದ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ ಡೈಮಂಡ್ ಜ್ಯೂಬ್ಲಿ ವಿದ್ಯಾಪೀಠದ ರಾಜನಹಳ್ಳಿ ವಿ ಗೋಪಾಲಕೃಷ್ಣ ಶೆಟ್ಟಿ ಕಾಂತ ಲಕ್ಷ್ಮಮ್ಮ ಕನ್ನಡ ಮಾಧ್ಯಮ ಪ್ರೌಢಶಾಲೆಯ 31ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ತರಗತಿಗಳಲ್ಲಿ ಅಂದಂದಿನ ಪಾಠವನ್ನು ಅಂದಂದೆ ಅರ್ಥ ಮಾಡಿಕೊಂಡವರಿಗೆ ಪರೀಕ್ಷೆ ಯಾವತ್ತೂ ಭಯವೆನಿಸುವುದಿಲ್ಲ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದರೂ ಸಾಧ್ಯವಾದಷ್ಟು ಒಳ್ಳೆಯ ಇಂಗ್ಲೀಷನ್ನೂ ಕಲಿಯಬೇಕು, ಹೊರರಾಜ್ಯ ಹೊರದೇಶಗಳಿಗೆ ಹೋಗಿ ಅವಕಾಶಗಳನ್ನು ಪಡೆಯಲು ಆಂಗ್ಲ ಭಾಷೆಯೂ ಬೇಕಾಗುತ್ತದೆ ಎಂದರಲ್ಲದೆ ಪ್ರತಿ ವಿದ್ಯಾರ್ಥಿಯೂ ತಮ್ಮ ಅಪ್ಪ ಹಾಗೂ ಅಮ್ಮನ ದುಡಿಮೆ ಪರಿಶ್ರಮ ತ್ಯಾಗಗಳಿಂದಾಗಿಯೇ ತಾನು ಶಿಕ್ಷಣ ಪಡೆಯುತ್ತಿರುವುದು ಎಂಬುದನ್ನು ತಿಳಿದು ಶ್ರದ್ಧೆಯಿಂದ ಓದಿ ಉತ್ತಮ ಬದುಕನ್ನು ಕಟ್ಟಿಕೊಂಡಲ್ಲಿ ಅದೇ ತಂದೆ ತಾಯಿಗಳಿಗೆ ಸಲ್ಲಿಸಬಹುದಾದ ಕೃತಜ್ಞತೆ ಎಂದರು.
ಮತ್ತೋರ್ವ ಮುಖ್ಯಅತಿಥಿಗಳಾಗಿ ಮಾರಿಷಸ್ಸಿನ ಅನ್ನಾ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕಿಯಾದ ಡಾ. ಶ್ರೀಮತಿ ಆರ್ ಜಿ ಗೀತಾ ಲಕ್ಷ್ಮಿ ಅವರು ಜೀವನದಲ್ಲಿ ಸಾಧನೆ ಮಾಡಲು ಆರೋಗ್ಯ ತುಂಬಾ ಮುಖ್ಯ, ದಿನಚರಿಯನ್ನು ಶಿಸ್ತು ಬದ್ಧವಾಗಿ ನಿರ್ವಹಿಸಬೇಕು, ಶುಚಿತ್ವವೂ ಅಷ್ಟೇ ಮುಖ್ಯ, ಆಹಾರ ಸೇವಿಸುವಾಗ ಅನ್ಯ ವಿಚಾರಗಳಲ್ಲಿ ಗಮನಹರಿಸದೆ ಶ್ರದ್ಧಾ ಭಕ್ತಿಯಿಂದ ಸೇವಿಸಬೇಕು, ಕ್ರಮಬದ್ಧ ಉಸಿರಾಟಕ್ಕಾಗಿ ನಿತ್ಯವೂ ಸ್ವಲ್ಪ ಹೊತ್ತು ಪ್ರಾಣಾಯಾಮ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ದಾವಣಗೆರೆ ತಾಲೂಕು ಪಂಚಾಯಿತಿ ಅಕ್ಷರ ದಾಸೋಹ ವಿಭಾಗದ ಸಹಾಯಕ ನಿರ್ದೇಶಕ ಕೆ ಆರ್ ವಿಶ್ವನಾಥ್ ರವರು ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳ ಚಿತ್ತ ಸದಾ ಓದಿನತ್ತ ಇರಬೇಕು, ಶೈಕ್ಷಣಿಕ ಸಾಧನೆಯ ಕನಸು ಕಾಣುತ್ತಾ ಅದರ ಸಾಕಾರಕ್ಕಾಗಿ ನಿರಂತರ ಅಧ್ಯಯನ ಮಾಡಬೇಕು ಎಂದರು.
Kannikaparameshwari Temple ವಿದ್ಯಾಪೀಠದ ಉಪಾಧ್ಯಕ್ಷ ಆರ್ ಎಲ್ ಪ್ರಭಾಕರ್ ವಿದ್ಯಾರ್ಥಿ ದೆಸೆಯಲ್ಲಿ ಮೊಬೈಲ್ ಮುಂತಾದ ಗೀಳಿಗೆ ಒಳಗಾಗದೆ ಓದಿನತ್ತ ಸದಾ ಗಮನ ಇರಬೇಕು ಎಂದರು.
ಕೊಲ್ಕತ್ತಾದ ಸಿಐಎಸ್ಎಫ್ ನಲ್ಲಿ ಯೋಧರಾಗಿರುವ ಶಾಲೆಯ ಹಳೆಯ ವಿದ್ಯಾರ್ಥಿ ಒ ಜಿ ಪ್ರಸಾದ್ ಹಾಗೂ ಬೆಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಕುಮಾರಿ ಎಸ್ ಹೆಚ್ ಜ್ಯೋತಿ ಸನ್ಮಾನ ಸ್ವೀಕರಿಸಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ವಿದ್ಯಾಪೀಠದ ಜಂಟಿ ಕಾರ್ಯದರ್ಶಿ ಆರ್ ಜಿ ಶ್ರೀನಿವಾಸಮೂರ್ತಿ ಶ್ರೀಮತಿ ಚೂಡಾಮಣಿ ನಾಗೇಂದ್ರ ಪ್ರಕಾಶ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ವಿ ಸುರೇಶ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಸಹ ಶಿಕ್ಷಕಿ ಶ್ರೀಮತಿ ಶಾರದಾ ಹಾಡಿದರು. ಸಹ ಶಿಕ್ಷಕ ಕೆ ಪಿ ವಿಶ್ವನಾಥ ಸ್ವಾಗತ ಕೋರಿದರೆ ಮುಖ್ಯೋಪಾಧ್ಯಾಯ ಕೆ ಸಿ ನಿರಂಜನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲೆಯ ಚೇರ್ಮನ್ ಆರ್ ಜಿ ನಾಗೇಂದ್ರ ಪ್ರಕಾಶ್ ವಾರ್ಷಿಕ ವರದಿಯ ವಾಚನ ಮಾಡಿದರೆ ಸಹ ಶಿಕ್ಷಕಿ ಎಂ ಎಸ್ ಜ್ಯೋತಿಲಕ್ಷ್ಮಿ ಅತಿಥಿಗಳ ಪರಿಚಯ ಮಾಡಿದರು. ಸಹ ಶಿಕ್ಷಕ ಹೆಚ್ ಪ್ರದೀಪ್ ವಂದನೆಗಳನ್ನು ಸಲ್ಲಿಸಿದರು. ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡ 91 ರಷ್ಟು ಅಂಕ ಪಡೆದ ವಿ.ದಿಶಾಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೆ ಜೆ ಸುನಿಲ್ ದೇವ್ ಹೆಚ್ ಕೆ ಸತೀಶ್ ವಿ ಸುರೇಶ್ ಕೆ ಜಿ ಶಶಿಧರ್ ವಿ ಶ್ರೀಧರ್ ನಿರೂಪಿಸಿದರು. ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನೆರವೇರಿತು.