Rotary Club Shivamogga ಸಂಘ ಸಂಸ್ಥೆಗಳಲ್ಲಿ ಸದಾಕಾಲ ಚಟುವಟಿಕೆಯಿಂದ ಇರುವ ಜತೆಯಲ್ಲಿ ಉತ್ತಮ ಕೆಲಸಗಳನ್ನು ಮಾಡಬೇಕು ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದ ಕ್ಲಬ್ ಸದಸ್ಯರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಜನತೆಗೆ ಸಹಾಯ ಸಹಕಾರ ನೀಡಬೇಕು. ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಾಗ ಸಂಸ್ಥೆಗಳು ಸಾರ್ವಜನಿಕವಾಗಿ ಗುರುತಿಸಿಕೊಂಡು ಪ್ರಶಂಸೆಗೆ ಪಾತ್ರವಾಗಬಲ್ಲವು. ಸಂಘ ಸಂಸ್ಥೆಗಳು ಆಯಾ ಪ್ರದೇಶಗಳ ಬೆಳವಣಿಗೆಗೆ ಗುಣಾತ್ಮಕವಾದ ನಿರಂತರ ಪ್ರಯತ್ನ ಮಾಡುತ್ತಿರುತ್ತವೆ ಎಂದು ತಿಳಿಸಿದರು.
ಸಂಘ ಸಂಸ್ಥೆಗಳು ರಾಜಕೀಯ ಹೊರತಾಗಿ ಸೇವಾ ಮನೋಭಾವದಿಂದ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ನಮ್ಮ ಕ್ಲಬ್ ಹೆಮ್ಮೆಯ ಸದಸ್ಯರಾದ ಅರುಣ್ ಕುಮಾರ್, ಚೂಡಾಮಣಿ ಪವಾರ್, ರವಿ ಕೋಟೊಜಿ ಹಾಗೂ ಗಿರೀಶ್ ಅವರಿಗೆ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಶುಭಹಾರೈಸುತ್ತದೆ ಎಂದರು.
Rotary Club Shivamogga ಅರುಣ್ ಕುಮಾರ್ ಕಾಸ್ಮೋ ಕ್ಲಬ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಕ್ಷತ್ರಿಯ ಮರಾಠ ಪತ್ತಿನ ಸಹಕಾರ ಸಂಘದಲ್ಲಿ ಚೂಡಾಮಣಿ ಪವರ್ ಹಾಗೂ ರವಿ ಕೋಟೊಜಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಕಾಳಿಕಾ ಪರಮೇಶ್ವರಿ ಕೋಆಪರೇಟಿವ್ ಸೊಸೈಟಿ ನಿರ್ದೇಶಕರಾಗಿ ಗಿರೀಶ್ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಈಶ್ವರ್, ಆನಂದ್, ಧರ್ಮೇಂದ್ರ ಸಿಂಗ್, ಚಂದ್ರು ಜೆಪಿ, ರಮೇಶ್, ಜಯಶೀಲ ಶೆಟ್ಟಿ, ಬಲರಾಮ್, ಮಿಥುನ್ ಜಗದಾಳೆ, ನಿರಂಜನ್, ಧನಂಜಯ್, ನಟರಾಜ್, ಭರತ್, ರಾಜಶ್ರೀ ಬಸವರಾಜ್, ದೀಪಾ ಶೆಟ್ಟಿ ಹಾಗೂ ಕ್ಲಬ್ಬಿನ ಎಲ್ಲ ಸದಸ್ಯರು ಭಾಗವಹಿಸಿದ್ದರು. ಚುನಾವಣೆಯಲ್ಲಿ ಗೆದ್ದ ಸದಸ್ಯರುಗಳಿಗೆ ಅಭಿನಂದನೆ ತಿಳಿಸಿದರು.