Shivamogga News ಶಿವಮೊಗ್ಗ ಉದ್ಯಮ, ಆಹಾರ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಪ್ರೋತ್ಸಾಹ ಹಾಗೂ ಬೆಂಬಲ ನೀಡುವ ಅಗತ್ಯವಿದೆ ಎಂದು ಒಕ್ಕಲಿಗರ ಮಹಿಳಾ ವೇದಿಕೆಯ ಸಂಸ್ಥಾಪಕ ಸದಸ್ಯರಾದ ರುಕ್ಮಿಣಿ ಚೆನ್ನಪ್ಪ ಹಾಗೂ ಇಂದುಮತಿ ಈಶ್ವರ್ ಹೇಳಿದರು ಹೇಳಿದರು.
ಪಂಪ ನಗರದ ಗುತ್ತö್ಯಪ್ಪ ಕಾಲೋನಿಯಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಆಯೋಜಿಸಿದ್ದ ಅಂತರ ರಾಜ್ಯ ಮಟ್ಟದ ಮಲೆನಾಡು ಮೇಳ2025 ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಿದ್ದಾರೆ ಎಂದು ತಿಳಿಸಿದರು.
ಲಕ್ಷ್ಮೀ ಪುಟ್ಟಯ್ಯ ಹೆಗ್ಡೆ ಮಾತನಾಡಿ, ಇಂತಹ ಮೇಳಗಳ ಆಯೋಜನೆಯಿಂದ ಸಮಾಜದ ಎಲ್ಲರೊಂದಿಗೆ ಓಡನಾಟ ಸಂಪರ್ಕ ಹೆಚ್ಚಲಿದ್ದು, ಆರ್ಥಿಕವಾಗಿ ಸಬಲರಾಗುತ್ತಾರೆ ಎಂದರು.
ಸಂಘದ ಅಧ್ಯಕ್ಷೆ ಅರ್ಚನಾ ಮಲ್ಲಿಕಾರ್ಜುನ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯಮಟ್ಟದ ಮಲೆನಾಡು ಮೇಳ ಆಯೋಜಿಸಿದ್ದು, ಈ ಮೇಳದಲ್ಲಿ ಗೃಹಪಯೋಗಿ ವಸ್ತುಗಳು, ಅಲಂಕಾರಿಕ ಸಾಮಾಗ್ರಿಗಳು, ಮನೆಯಲ್ಲಿ ತಯಾರಿಸಿದ ರುಚಿಕರ ಸಸ್ಯಾಹಾರಿ ಹಾಗು ಮಾಂಸಾಹಾರಿ ತಿನುಸುಗಳ ಪ್ರದರ್ಶನ ಹಾಗೂ ಮಾರಾಟ ಹಮ್ಮಿಕೊಳ್ಳಲಾಗಿದೆ ಈ ಬಾರಿಯ ತುಂಬಾ ವಿಶೇಷ ಅಂದರೆ ವಾರಣಾಸಿಯಿಂದ ವಿಶೇಷ ಬನಾರಸ್ಸು ಸ್ಯಾರಿ ಅಂಗಡಿಯವರು ಮಳಿಗೆ ಹಾಕಿರುವುದು ತುಂಬಾ ವಿಶೇಷವಾಗಿದೆ ಎಂದು ನುಡಿದರು .
Shivamogga News ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ರಾದ ಜಿ.ವಿಜಯ್‌ಕುಮಾರ್ ಮಾತನಾಡಿ, ಮಹಿಳೆಯರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಹಂತ ಹಂತವಾಗಿ ಸಾಧನೆ ಮಾಡುತ್ತಿದ್ದು, ಕುಟುಂಬ, ಸ್ನೇಹಿತ ವರ್ಗ ಹಾಗೂ ಎಲ್ಲರ ಸಹಕಾರದಿಂದ ಇನ್ನಷ್ಟು ಸಾಧನೆ ಮಾಡಬೇಕು ಎಂದು ಆಶಿಸಿದರು.
ಬೆಂಗಳೂರು, ಬೇಲೂರು, ಕೊಪ್ಪ, ಶೃಂಗೇರಿ, ಜಯಪುರ, ತರೀಕೆರೆ, ಭದ್ರಾವತಿ, ಸಾಗರ, ತೀರ್ಥಹಳ್ಳಿ. ವಾರಣಾಸಿ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳೆಯರು ಸ್ಟಾಲ್‌ಗಳನ್ನು ಹಾಕಿದ್ದರು. ಮನೆಯಲ್ಲಿ ತಯಾರಿಸಿದ ಹಿಟ್ಟು ಉಂಡೆ, ಹುಲ್ಲಿಂದ ತಯಾರಿಸಿದ ಬುಟ್ಟಿಗಳು, ಮನೆಯಲ್ಲಿ ತಯಾರಿಸಿದ ತಿಂಡಿಗಳು. ವೈನ್. ಕೇಕ್ ಬಹಳ ದೊಡ್ಡ ಸಾಂಪ್ರದಾಯಿಕ ಉಡುಗೆ ತೊಡುಗೆಗಳು.ಸಸ್ಯಾಹಾರಿ ಹಾಗೂ ಮಾಂಸಾಹಾರಿ ತಿನಿಸುಗಳ ಸ್ಟಾಲ್‌ಗಳು ಇದ್ದವು.
ಕಾರ್ಯದರ್ಶಿ ಶೃತಿ ಗೌತಮ್, ಖಜಾಂಜಿ ಆಶ್ರಿಕಾ ದೀಪಕ್ ಹೆಗಡೆ ಸುಪ್ರಿಯಾ ರಾಮಪ್ಪ, ಅಂಜು ಸುರೇಶ್, ಶೈಲಾ ವಾಸುದೇವ್, ಅರ್ಚನಾ, ಪ್ರಭಾ ಶ್ರೀನಾಥ್. ಲೀಲಾವತಿ ಟೀಕಪ್ಪ. ಗೀತಾ ದೇವದಾಸ್ ಕಲ್ಪನಾ, ಹಾಗೂ. ಇನ್ನರ್ವಿಲ್ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್ ಕಾರ್ಯಕಾರಿ ಸಮಿತಿಯವರು ಸಂಘದ ಸದಸ್ಯೆಯರು ಉಪಸ್ಥಿತರಿದ್ದರು.
Shivamogga News ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸು ಸಾಧಿಸುತ್ತಿದ್ದಾರೆ-ಇಂದುಮತಿ ಈಶ್ವರ್
Date:
