Sunday, December 7, 2025
Sunday, December 7, 2025

LB & S.B.S. College ನಮ್ಮ ಸಂಸ್ಥೆಯ ಲೆಕ್ಕಪತ್ರಗಳು ಪಾರದರ್ಶಕ, ಆಡಿಟರ್ ಸಲಹೆಯಂತೆ ಕ್ರಮಕೈಗೊಳ್ಳಲಾಗಿದೆ- ಕವಲಕೋಡು ವೆಂಕಟೇಶ್

Date:

LB & S.B.S. College ಹಿಂದಿನ ಆಡಳಿತ ಮಂಡಳಿ ಅಕ್ರಮವಾಗಿ ನೊಂದಾಯಿಸಿದ್ದ ಒಂದೇ ಕುಟುಂಬದ ಬಂಧುಗಳಾಗಿದ್ದ 54 ಸದಸ್ಯರ ಸದಸ್ಯತ್ವ ವಜಾ ಆಗಿದ್ದ ಕಾರಣ ಉಂಟಾಗಿದ್ದ ವಿವಾದದಿಂದಾಗಿ ಮುಂದೂಡಲ್ಪಟ್ಟ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಮಹಾಸಭೆ ಹೈಕೋರ್ಟ್ ಆದೇಶದಂತೆ ಪೋಲೀಸ್ ಬಿಗಿ ಬಂದೋಬಸ್ತಿನಲ್ಲಿ ಎಲ್.ಬಿ. & ಎಸ್.ಬಿ.ಎಸ್. ಕಾಲೇಜಿನಲ್ಲಿ ನಡೆಯಿತು.

ಪ್ರಸ್ತುತ ಬದಲಾದ ಶಿಕ್ಷಣ ವ್ಯವಸ್ಥೆಯ ಹಿನ್ನೆಲೆಯಲ್ಲಿ ಮಲೆನಾಡಿನ ವಿದ್ಯಾಕಾಂಕ್ಷಿಗಳ ಬಯಕೆಯಂತೆ ಪ್ರತಿಷ್ಠಾನದ ಶಿಕ್ಷಣ ಸಂಸ್ಥೆಯಲ್ಲಿ ಹೊಸದಾಗಿ ವಿವಿಧ ಕೋರ್ಸ್ಗಳನ್ನು ಪ್ರಾರಂಭಿಸುವಂತೆ ಮುಂದಿಟ್ಟ ಪ್ರಸ್ತಾವನೆಯನ್ನು ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು.

ಹಿಂದಿನ ಆಡಳಿತ ಮಂಡಳಿಯು ನಡೆದಿದೆ ಎನ್ನಲಾದ ಹಲವು ಕೋಟಿ ರೂಪಾಯಿಗಳ ಅವ್ಯವಹಾರ ಕುರಿತಂತೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಯಿತು.

ಪ್ರಗತಿ ಶಾಲೆಯಲ್ಲಿನ ಸ್ಮಾರ್ಟ್ ಬೋರ್ಡ್ ಹಗರಣ, ಬಿ.ಎಡ್ ಕಾಲೇಜು ಕಟ್ಟಡ, ರಂಗಮಂದಿರ, ಒಳಾಂಗಣ ಕ್ರೀಡಾಂಗಣ ನಿರ್ಮಾಣಗಳಲ್ಲಿ ಆಗಿರುವ ಕಳಪೆ ಕಾಮಗಾರಿ, ಅವ್ಯವಹಾರ, ಹಣಕಾಸಿನ ವ್ಯವಹಾರದಲ್ಲಿ ನಿಯಮಗಳ ಉಲ್ಲಂಘನೆ, ಉಪನ್ಯಾಸಕರ ನೇಮಕಾತಿ ಹಗರಣ, ನ್ಯಾಕ್ ಸಮಿತಿಯ ಭೇಟಿ ಸಂದರ್ಭದಲ್ಲಿ ವ್ಯಯಿಸಿದ ಹಣದ ದುರುಪಯೋಗ, ಸ್ವಜನ ಪಕ್ಷಪಾತ, ನೂರಕ್ಕೂ ಹೆಚ್ಚು ಸ್ವಜನರನ್ನು ಸದಸ್ಯರನ್ನಾಗಿ ನೊಂದಾಯಿಸಿ ಸಂಸ್ಥೆಯನ್ನು ಕುಟುಂಬದ ಆಸ್ತಿಯನ್ನಾಗಿ ಮಾಡಿಕೊಳ್ಳು ಮಾಡಿರುವ ಹುನ್ನಾರ, ಸಾಗರದ ಡಿಸಿಸಿ ಬ್ಯಾಂಕಿನಲ್ಲಿ ಮಾಡಿರುವ ಒಂದು ಕೋಟಿ ರೂಪಾಯಿಗಳ ಸಾಲ, ಕರ್ನಾಟಕ ಬ್ಯಾಂಕಿನಲ್ಲಿ 8೦ ಲಕ್ಷದ ಠೇವಣಿ ಮೇಲೆ ಮಾಡಿರುವ 6೦ ಲಕ್ಷ ರೂಪಾಯಿಗಳ ಸಾಲ, 57 ಲಕ್ಷ ಕೈಗಡ ಸಾಲ ಇತ್ಯಾದಿಗಳ ಕುರಿತಂತೆ ವಿವರಗಳನ್ನು ಮತ್ತು ಅಂಗ ಸಂಸ್ಥೆ ತಾಳಗುಪ್ಪ ನಾಲಂದ ಪ್ರೌಢಶಾಲೆಗೆ ಕಾಯಕಲ್ಪ ನೀಡಿದ್ದು, ವಿಶ್ರಾಂತ ಕುಲಪತಿ ಡಾ|| ಮುರಿಗಪ್ಪ ಕುಟುಂಬದ ಕಾಯಕ ಫೌಂಡೇಷನ್ ಸಂಸ್ಥೆಯೊಂದಿಗೆ ಮಾಡಿಕೊಂಡ ಒಪ್ಪಂದ, ಕಾಲೇಜಿನ 83 ಎಕರೆ ಜಮೀನಿನ ಸಂರಕ್ಷಣೆಗಾಗಿ ಕೈಗೊಂಡ ಕಠಿಣ ನಿರ್ಧಾರಗಳ ಬಗ್ಗೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ|| ಹೆಚ್.ಎಂ. ಶಿವಕುಮಾರ್ ನೀಡಿದರು.

LB & S.B.S. College ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ 85 ಲಕ್ಷಕ್ಕೂ ಹೆಚ್ಚಿನ ಹಣದಲ್ಲಿ ಶಾಲಾ ಕಾಲೇಜು ಅಭಿವೃದ್ಧಿಗೆ ವಿನಿಯೋಗಿಸಿದೆ. ಹಾಗೂ ಉಪನ್ಯಾಸಕರಿಗೆ ವೇತನದಲ್ಲಿ ಹೆಚ್ಚಳ, ಪಿ.ಎಫ್, ಇಎಸ್‌ಐ, ಗ್ಯಾಚ್ಯುಟಿ ಸೌಲಭ್ಯಗಳನ್ನು ನೀಡಲಾಗಿದೆ. ಶಾಲೆ ಕಾಲೇಜುಗಳಲ್ಲಿನ ಮೂಲ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಎಲ್ಲ ಸಾಲಗಳಿಂದ ಮುಕ್ತಗೊಳಿಸಲಾಗಿದೆ ಎಂದು ತಿಳಿಸಲು ಸಂತೋಷ ವಾಗುತ್ತದೆ.ಮತ್ತು
ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಯುತ್ತಿದೆ ಮತ್ತು ಭಾಗೀದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಲಿಂಡೆ ಫೌಂಡೇಷನ್ ಸಿಎಸ್‌ಆರ್ ಖಾತೆಯಿಂದ ರೂ 45 ಲಕ್ಷ ನೀಡಿರುತ್ತಾರೆ. ಇದನ್ನು ಕಾಲೇಜ್ ವಿವಿಧ ಶಿಕ್ಷಣ ಅಭಿವೃದ್ಧಿಗೆ ವಿನಯೋಗಿಸಲಾಗಿದೆ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಸಹಕಾರದಿಂದ ಹೊರಾಂಗಣ ಕ್ರೀಡಾಂಗಣದ ಉನ್ನತಿಗಾಗಿ ಕ್ರಮ ಕೈಗೊಳ್ಳಲಾಗಿದೆ.

ನಮ್ಮ ಸಂಸ್ಥೆಯ ಲೆಕ್ಕಪತ್ರಗಳು ಪಾರದರ್ಶಕವಾಗಿದ್ದು, ಆಡಿಟರ್ ಸಲಹೆ ಯೆಂತ್ತೆ ಕ್ರಮ ಕೈಗೊಳ್ಳಲಾಗಿದೆ.ಮಾನ್ಯ ಸದಸ್ಯರು ಕಛೇರಿ ವೇಳೆಯಲ್ಲಿ ಬಂದು ಪರಿಶೀಲಿಸಬಹುದಾಗಿದೆ ಎಂದು ಕೋಶಾಧಿಕಾರಿ ಕವಲಕೋಡು ವೆಂಕಟೇಶ್ ತಿಳಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಎಂ. ಹರನಾಥರಾವ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ಕಳೆದ 60ವರ್ಷಗಳಲ್ಲಿ ಸಂಸ್ಥೆಯಿಂದ ಶಿಕ್ಷಣ ಪಡೆದು ದೇಶವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿರುವ 85 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಹಕಾರ ಪಡೆದು ಸಂಸ್ಥೆಯನ್ನು ಸದೃಢಗೊಳಿಸಿ ಗುಣಮಟ್ಟದ ಶಿಕ್ಷಣ ನೀಡಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿ, ಅನೇಕ ಕಾಲೇಜುಗಳ ಆಡಳಿತ ಮಂಡಳಿಯ ಸದಸ್ಯರೂ, ಖ್ಯಾತ ವಕೀಲರೂ ಆಗಿರುವ ಕೆ. ಬಸಪ್ಪ ಗೌಡರು ಮಾತನಾಡಿ ಉತ್ತಮ ಸಲಹೆಗಳನ್ನು ನೀಡಿದರು.

ಉಪಾಧ್ಯಕ್ಷ ರವಿಕುಮಾರ ಗೌಡ ಅವರು ಆರಂಭದಲ್ಲಿ ಸ್ವಾಗತಿಸಿ, ಸಹಕಾರ್ಯದರ್ಶಿ ಸತ್ಯನಾರಾಯಣ ಎಂ.ಆರ್. ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ನಿವೃತ್ತ ಅಧ್ಯಾಪಕರಿಗೆ ಪಂಚಣಿ ಪರಿಷ್ಕರಣೆಯಿಂದ ಅನ್ಯಾಯ, ಸರಿಪಡಿಸಲು ಆಗ್ರಹ

ನಿವೃತ್ತ ಅಧ್ಯಾಪಕರಿಗೆ ಆಗುವ ಅನ್ಯಾಯವನ್ನು ಸರಿಪಡಿಸುವಂತೆ ಜಿಲ್ಲಾ ವಿಶ್ವವಿದ್ಯಾಲಯ ಮತ್ತು ಪದವಿ...

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...