Klive News Special ಅಯ್ಯೋ ಮಗಳೇ ಜೋರಾಗಿ ಕಿರುಚಾಡಿ ರಂಪ ಮಾಡ್ಬೇಡ..ನಾಲ್ಕು ಜನ ಏನಾದರೂ ತಿಳ್ಕೊತಾರೆ..ಅಯ್ಯೋ ಇಂತಹ ಬಟ್ಟೆ ಹಾಕೋಬೇಡ ನಾಲ್ಕು ಜನ ನೋಡಿದರೆ ಏನಾದರೂ ತಿಳ್ಕೊeತಾರೆ..ಅಯ್ಯೋ ಹುಡುಗರ ಜೊತೆ ಮಾತಾಡ್ಬೇಡ ನಾಲ್ಕು..ಜನ ನೋಡಿದರೆ ಈ ಹುಡ್ಗಿ ಸರಿಯಿಲ್ಲ ಅಂತಾರೆ…ಹೇಳು ಹೇಳು ಹೇಳುವುದೇ ಆಯ್ತು ಮಕ್ಕಳಿಗೆ ಹೆತ್ತವರು ನಮಗೆ ಯಾರದು..ಯಾರು ಆ ನಾಲ್ಕು ಜನ ಮಹಾಜನಗಳು..ಅವರೇನು ನಮಗೆ ಕಷ್ಟಕ್ಕೆ ಆಗುವರ ಇಲ್ಲ ನಾವು ಸಂತೋಷದಲ್ಲಿರುವಾಗ ನೋಡಿ ಸಹಿಸುವರ ಇಲ್ವಲ್ಲ..ನಮ್ಮ ಕಷ್ಟವನ್ನು ನೋಡಿ ಸಂತೋಷಪಡುವವರೆe ಈ ನಾಲ್ಕು ಜನ ಇಂತಹವರಿಗೆ ನಾವು ಹೆದರಿ ಕಟ್ಟು ಪಾಡುಗಳ ಬೇಲಿ ಹಾಕಿ ಮಕ್ಕಳನ್ನು ಬಂಧನದಲ್ಲಿರಿಸಬೇಕ ಆ ನಾಲ್ಕು ಜನರ ಮನೆಯಲ್ಲಿ ದೋಸೆಕಲ್ಲೇ ತೂತವಾಗಿರುವಾಗ ಬೇರೆಯವರ ಮನೆ ದೋಸೆತೂತದ ಬಗ್ಗೆ ಯಾಕೆ ಮಾತಾಡಬೇಕು..ಅವರಿಗೆ ಅವರ ಸಂಸಾರದ ತೂ ತಗಳೇ ತುಂಬಿ ತುಳುಕುವಷ್ಟು ಇರುತ್ತದೆ.ಅಂತವರೆ ಬೇರೆಯವರ ಬಗ್ಗೆ ಮಾತನಾಡುವುದು..
ಅವರ ಬಗ್ಗೆ ನಾವು ಏಕೆ ತಲೆಕೆಡಿಸಿಕೊಳ್ಳಬೇಕು..ಮಕ್ಕಳಿಗೆ ನಾವು ಕಟ್ಟು ಪಾಡು ವಿಧಿಸಿ ಜೀವನದಲ್ಲಿ ಅನುಭವಿಸಬೇಕಾದ ಖುಷಿಯಿಂದ ವಂಚಿತರನ್ನಾಗಿ ಮಾಡುವುದು ಎಷ್ಟು ಸರಿ ಯಾರೋ ಆಡುವ ಮಾತಿಗೆ ತಲೆ ಕೆಡಿಸಿಕೊಳ್ಳುವ ಬದಲು ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ,ಒಳ್ಳೆಯ ನಡೆ..ಹಿರಿಯರನ್ನು ಗೌರವಿಸುವ ರೀತಿ..ಅಸಹಾಯಕರಿಗೆ ಮಾಡುವ ಸಹಾಯ ಇವುಗಳ ಬಗ್ಗೆ ಚಿಕ್ಕಂದಿನಿಂದಲೇ ಅದರ ಬಗ್ಗೆ ತಿಳಿಸುವ ರೀತಿಯನ್ನು ಹೇಳಿಕೊಟ್ಟರೆ ಅವರು ಮುಂದೊಂದು ದಿನ ಸಮಾಜದಲ್ಲಿ ಅವರು ಉನ್ನತ ವ್ಯಕ್ತಿಯಾಗಿ ಎಲ್ಲರನ್ನೂ ಪ್ರೀತಿಸುವ ವ್ಯಕ್ತಿಯನ್ನಾಗಿ ಮಾಡುತ್ತದೆ.
ಅದನ್ನು ಬಿಟ್ಟು ಬೇರೆಯವರಿಗೋಸ್ಕರ ತಮ್ಮತನವನ್ನು ಬಿಟ್ಟು ಪರರಿಗೋಸ್ಕರ ಬದುಕುವ ಬದುಕು ನಮ್ಮ ಬದುಕೇ ಅಲ್ಲ.ನಾವು ಕಷ್ಟದಲ್ಲಿದ್ದಾಗ ಬರದಿದ್ದ ಸಂಬಧಗಳಿಗೆ ನೆರೆ ಹೊರೆಯವರಿಗೆ ಬೆಲೆ ಕೊಡುವುದಾದರು ಏಕೆ..ಅವರಿಗೆ ಏಕೆ ಇಷ್ಟು ಮಾನ್ಯತೆ ನಮ್ಮ ತನ ನಾವು ಬಿಟ್ಟುಕೊಡಬಾರದು ಮಕ್ಕಳನ್ನು ಯಾರ ಅಭಿಮಾನಿಗಳಾಗಿ ಬೆಳೆಸಬಾರದು ಬದಲಾಗಿ ಸ್ವಾಭಿ ಮಾನಿಗಳಾಗಿ ಬದುಕುವಂತೆ ಬೆಳೆಸಬೇಕು.
Klive News Special ಅವರಿಗೆ ಒಳ್ಳೆಯ ನಾಗರಿಕನ ಲಕ್ಷಣಗಳನ್ನು ಹೇಳಿಕೊಡಬೇಕು..ಹೆಣ್ಣು ಮಕ್ಕಳು ಗಂಡುಮಕ್ಕಳು ಎನ್ನುವ ಬೇಧ ಇಲ್ಲದೆ ಅವರಿಗೆ ಒಂದೇ ಸ್ಥಾನ ಕೊಟ್ಟು ಬೆಳೆಸಿದಾಗ ಮಾತ್ರ ಅವರಿಗೆ ಯಾವುದೇ ಕೀಳರಿಮೆ ಇಲ್ಲದೆ ಸಮಾಜವನ್ನು ಎದುರಿಸಿ ನಿಲ್ಲುವ ಸಾಮರ್ಥ್ಯ ಬರುತ್ತದೆ.ಆಗಲೇ ಅವರ ಬದುಕಿಗೊಂದು ಅರ್ಥ ಸಿಗುತ್ತದೆ..
ಆಗ ನಮ್ಮ ಬಗ್ಗೆ ನಾಲ್ಕು ಜನ ನಾಲ್ಕು ಮಾತನಾಡುವರು ಬಾಯಿ ತಂತಾನೇ ಮುಚ್ಚಿಹೋಗಿರು ತ್ತದೆ. ಇದೆ ನಾವು ತಂದೆ ತಾಯಿಗಳು ಮಕ್ಕಳಿಗೆ ಸಮಾಜದ ಬಗ್ಗೆ ಹೆದರಿಕೆ ಹುಟ್ಟಿಸಿ ಬೆಳೆಸುವುದ ಬಿಟ್ಟು ಸಮಾಜವನ್ನು ಎದುರಿಸಿ ಬೆಳೆಸಬೇಕು.ಆಗಲೇ ಅವರ ಇಷ್ಟದ ಬದುಕು ಅವರದ್ದಾಗುತ್ತದೆ.ಎಂಬುದು ನನ್ನ ಅನಿಸಿಕೆ.
ಶುಭ ಕುಸ್ಕೂರು ಶಿವಮೊಗ್ಗ