Tuesday, February 3, 2026
Tuesday, February 3, 2026

Joint Commissioner Excise North Division  ಅಬಕಾರಿ ಸಿಬ್ಬಂದಿ ದಾಳಿ.₹1.35,000 ಮೌಲ್ಯದ ಮದ್ಯ ವಶ. ಆರೋಪಿಗಳ ದಸ್ತಗಿರಿ

Date:

Joint Commissioner Excise North Division  ಶಿವಮೊಗ್ಗ ನಗರದ ಸವಳಂಗ ರಸ್ತೆಯ ಫ್ಲೈ ಓವರ್‌ನ ಅಂಡರ್ ಪಾಸ್‌ನಲ್ಲಿ ಡಿ.30 ರಂದು ಅಬಕಾರಿ ದಾಳಿ ನಡೆಸಿ 180 ಮಿ.ಲಿ.ನ ಮ್ಯಾಕ್‌ಡೋವೆಲ್ಸ್ ನಂ-1 ವಿಸ್ಕಿಯ 170 ಬಾಟಲಿಗಳು ಅಂದಾಜು ಮೌಲ್ಯ ರೂ.1,35,000 ದ ಒಟ್ಟು 30,600 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ದಾವಣಗೆರೆ ವಿಭಾಗ, ದಾವಣಗೆರೆ ಹಾಗೂ ಅಬಕಾರಿ ಉಪ ಆಯುಕ್ತರು, ಶಿವಮೊಗ್ಗ ಜಿಲ್ಲೆ ಇವರ ನಿರ್ದೇಶನದ ಮೇರೆಗೆ ಅಬಕಾರಿ ಉಪ ಅಧೀಕ್ಷಕರು, ಶಿವಮೊಗ್ಗ ಉಪ ವಿಭಾಗ ಇವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ವಲಯ-1 ರ ಅಬಕಾರಿ ನಿರೀಕ್ಷಕ ಹನುಮಂತಪ್ಪ ಡಿ.ಎನ್ ಇವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಎ-1 ಹರೀಶ, ಎ-2 ಶಿವು ಚನ್ನಗಿರಿ ತಾಲ್ಲೂಕು ಇವರು ಮದ್ಯವನ್ನು ನೋಂದಣಿ ಸಂಖ್ಯೆ ಕೆಎ 17 ಹೆಚ್‌ಕ್ಯು 0728 ದ್ವಿಚಕ್ರ ವಾಹನದಲ್ಲಿ ಸಾಗಾಣಿಕೆ ಮಾಡುವಾಗ ಜಪ್ತಿ ಮಾಡಿ ಆರೋಪಿಗಳನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿರುತ್ತದೆ.
Joint Commissioner Excise North Division  ಈ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಚಂದ್ರಪ್ಪ ಎಸ್.ಡಿ, ಅಬಕಾರಿ ಮುಖ್ಯ ಪೇದೆಗಳಾದ ಜಯರಂಜ್ ಡಿ, ಮಹಮ್ಮದ್ ಅಸ್ರಾವುದ್ದೀನ್ ಖಾನ್, ಅಬಕಾರಿ ಪೇದೆಗಳಾದ ನಾಗಪ್ಪ ಶಿರೋಳ್, ನಾಗಪ್ಪ, ರವಿ ಹೆಚ್, ನವೀನ್ ಹೆಚ್ ಬಿ ಹಾಗೂ ಇತರ ಅಬಕಾರಿ ಸಿಬ್ಬಂದಿಗಳು ಪಾಲ್ಗೊಂಡಿದ್ದರೆಂದು ಅಬಕಾರಿ ಡೆಪ್ಯುಟಿ ಕಮಿಷನರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...