Inner Wheel Shivamogga ಇಂದು ಎಲ್ಲಾ ಕ್ಷೇತ್ರಗಳಲ್ಲೂ ತಂತ್ರಜ್ಞಾನದ ಅವಶ್ಯಕತೆ ತುಂಬಾ ಇದೆ ವಿಜ್ಞಾನವನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲ ಎಂದು ಇನ್ನರ್ ವೀಲ್ ಶಿವಮೊಗ್ಗ ಪೂರ್ವ ಸಂಸ್ಥೆಯ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅವರು ಅಭಿಮತ ವ್ಯಕ್ತಪಡಿಸಿದರು.
ಅವರು ಇನ್ನರ್ ವೀಲ್ ಸದಸ್ಯನೀಯರಿಂದ ದೇಣಿಗೆ ಸಂಗ್ರಹಿಸಿ ನಗರದ ಗಾಯಿತ್ರಿ ವಿದ್ಯಾಲಯಕ್ಕೆ ಗ್ರೀನ್ ಬೋರ್ಡ್ ಗಳು ಹಾಗೂ ವಿಜ್ಞಾನದ ಉಪಕರಣಗಳು ಮತ್ತು ಅಗತ್ಯ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು ಮಕ್ಕಳು ಪರಿಪೂರ್ಣ ವಿದ್ಯಾರ್ಥಿಗಳಾಗಲು ವಿಜ್ಞಾನದ ಕೊಡುಗೆ ತುಂಬಾ ಇದೆ ಬಾಲ್ಯದಲ್ಲೇ ಮಕ್ಕಳಿಗೆ ವಿಜ್ಞಾನದ ಆಸಕ್ತಿಯನ್ನು ಬೆಳೆಸಬೇಕು ಎಂದು ನುಡಿದರು.
ಗಾಯತ್ರಿ ವಿದ್ಯಾಲಯದ ಖಜಾಂಚಿ ಚಂದ್ರಹಾಸ್ ಪಿ ರಾಯ್ಕರ್ ಅವರು ಮಾತನಾಡುತ್ತಾ ಇನ್ನರ್ ವೀಲ್ ಸಂಸ್ಥೆ ವತಿಯಿಂದ ಈಗಾಗಲೇ ಸಾಕಷ್ಟು ಸೇವ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದರ ಮುಖಾಂತರ ಅವರ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಸಾಕಷ್ಟು ಆರ್ಥಿಕ ಸಹಾಯ ಮಾಡುವುದರ ಮುಖಾಂತರ ವಿದ್ಯಾರ್ಥಿಗಳನ್ನು ಉತ್ತೇಜಿಸಿದ್ದಾರೆ. ಈ ನಿಟ್ಟಿನಲ್ಲಿ ಇಂದು ತುಂಬಾ ಅಗತ್ಯವಾಗಿ ಬೇಕಾಗಿರುವ ವಿಜ್ಞಾನದ ಉಪಕರಣಗಳನ್ನು ನೀಡಿ ಸಹಕರಿಸಿದ್ದಾರೆ ಎಂದು ಇನ್ನರ್ ವೀಲ್ ಸಂಸ್ಥೆ ಯನ್ನು ಅಭಿನಂದಿಸಿದರು.
Inner Wheel Shivamogga ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್ ಅವರು ಮಾತನಾಡುತ್ತಾ ಇನ್ನರ್ ವೀಲ್ ಸಂಸ್ಥೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಮಾಜಮುಖಿ ಹಾಗೂ ಮಾನವೀಯ ಸೇವೆಗಳನ್ನು ಮಾಡ್ತಾ ಬಂದಿದೆ ಈ ನಿಟ್ಟಿನಲ್ಲಿ ಇನ್ನರ್ ವೀಲ್ ಶಿವಮೊಗ್ಗ ಪೂರ್ವ ಸಂಸ್ಥೆಯವರು ಈ ವರ್ಷವಿಡಿ ಸಾಕಷ್ಟು ಮನುಕುಲದ ಸೇವೆಗಳನ್ನು ಮಾಡುತ್ತಾ ಬಂದಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಯಿತ್ರಿ ವಿದ್ಯಾಲಯ ಸಂಸ್ಥೆಯ ಅಧ್ಯಕ್ಷ ಮಾಣೆಶ್ವರ್ ಶೇಟ್ ವಹಿಸಿ ಮಾತನಾಡುತ್ತಾ ಮಕ್ಕಳ ಪ್ರತಿಭೆ ಹಾಗೂ ಶಿಕ್ಷಣ ಅನಾವರಣಗೊಳ್ಳಲು ಹಾಗೂ ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಲು ಸಂಘ ಸಂಸ್ಥೆಗಳ ನೆರವು ಬಹಳ ಮುಖ್ಯ ಈ ನಿಟ್ಟಿನಲ್ಲಿ ಇನ್ನರ್ ವೀಲ್ ಸಂಸ್ಥೆಯವರು ನಮ್ಮ ವಿದ್ಯಾಲಯಕ್ಕೆ ತುಂಬಾ ಅಗತ್ಯವಾದ ವಸ್ತುಗಳನ್ನು ವಿತರಣೆ ಮಾಡಿ ಸಹಾಯ ಹಸ್ತ ನೀಡಿ ಸಹಕರಿಸಿದ್ದಾರೆ ಎಂದು ನುಡಿದರು.
ವೇದಿಕೆಯಲ್ಲಿ ಕಾರ್ಯದರ್ಶಿ ಲತಾ ಸೋಮಶೇಖರ್ ಇನ್ನರ್ವಿಲ್ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್. ವಾಣಿ ಪ್ರವೀಣ್.
ವಿಜಯ ರಾಯ್ಕರ್. ನೇತ್ರಾವತಿ ಅಣಜಿ ಬಸವರಾಜ್, ಮುಖ್ಯೋಪಾಧ್ಯಾಯರಾದ ಮಂಜುನಾಥ್ ರಾಯ್ಕರ್. ಉಪಸ್ಥಿತರಿದ್ದರು.