S.V. Thimmaiah “ಶರಣ್ಯ”ದಲ್ಲಿ ಎಸ್.ವಿ.ತಿಮ್ಮಯ್ಯ ಸಾರ್ಥಕ ಸ್ಮರಣೆಗೆ ಅವಕಾಶ-ಪಾಸಿಟಿವ್ ಮೈಂಡ್ಡಾ.ಎಸ್.ಟಿ. ಅರವಿಂದ್ ಶಿವಮೊಗ್ಗದ ಸಮಾಜ ಸೇವಕರಲ್ಲಿ
ಮುಂಚೂಣಿ ಹೆಸರು ಎಸ್ .ವಿ.ತಿಮ್ಮಯ್ಯ. ತಮ್ಮ ಜೀವಿತದುದ್ದಕ್ಕೂ ಶೈಕ್ಷಣಿಕ್ಷೇತ್ರದಲ್ಲಿ
ಎನ್ ಇ.ಎಸ್ ಮೂಲಕ ಗಮನಾರ್ಹ ಕೊಡುಗೆ ನೀಡಿದ್ದಾರೆ.
ಗಾಂಧಿಚಿಂತನೆಗಳಿಂದ ಪ್ರಭಾವಿತರಾಗಿ ಸಮಾಜದ ಸರ್ವತೋಮುಖ ಪ್ರಗತಿಯ ಕನಸು ಕಂಡವರು.
ದಿವಂಗತರ ಹನ್ನೋಂದನೇ ವರ್ಷದ ಪುಣ್ಯಸ್ಮರಣಾರ್ಥ ಅವರ ಸುಪುತ್ರ ಡಾ.ಎಸ್.ಟಿ.ಅರವಿಂದ್
ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರು
ಮನೋವೈಜ್ಞಾನಿಕ ವಿಚಾರ ಸಂಕಿರಣ: ಸೋಲದಿರಲಿ ಮನಸ್ಸು.
ಆರ್ಥಿಕ ಸಹಾಯ, ಶಿವಮೊಗ್ಗದ ವಿತರಣೆ, ಅಕ್ಕಿ ,ಬೇಳೆ , ಹಾಗೂ ಅಡುಗೆ ಎಣ್ಣೆ ಹಾಗೂ ಇತರೆ ಸಾಮಗ್ರಿಗಳನ್ನು ಶರಣ್ಯ ರೋಗಿಗಳಿಗೆ ಉಚಿತವಾಗಿ ವಿತರಿಸಲಾಯಿತು.
ಡಿಎಸ್ಎಲ್ ಟ್ರಸ್ಟ್ ಮೂಲಕ ಶ್ರೀ ಡಿಎಲ್ ಮಂಜುನಾಥ್ ಅವರು ಅತ್ಯಂತ ಶ್ಲಾಘನೀಯ ಹಾಗೂ ಪುಣ್ಯದ ಕೆಲಸ ಮಾಡುತ್ತಿದ್ದಾರೆ ಮಾಡುತ್ತಿದ್ದಾರೆ. ಕೊನೆ ಹಂತದ/ ಹಾಸಿಗೆ ಹಿಡಿದಿರುವ ರೋಗಿಗಳ ಆರೈಕೆಯನ್ನು ಮಾಡುತ್ತಿರುವುದು ಪದಗಳಿಗೆ ಮೀರಿ ಮಾಡುತ್ತಿರುವ ಸಮಾಜಮುಖಿ ಕಾರ್ಯ.
ಅವರ ಸಂಸ್ಥೆ ಮೂಲಕ ನನಗೆ ಹಾಗೂ ನಮ್ಮ ಸಿಬ್ಬಂದಿ ವರ್ಗದವರಿಗೆ ಸಸಿ ನೆಡಲು ಸದಾವಕಾಶ ಮಾಡಿಕೊಟ್ಟರು.
S.V. Thimmaiah “ಶರಣ್ಯ”ದಲ್ಲಿ ಎಸ್.ವಿ.ತಿಮ್ಮಯ್ಯ ಸಾರ್ಥಕ ಸ್ಮರಣೆಗೆ ಅವಕಾಶ-ಪಾಸಿಟಿವ್ ಮೈಂಡ್ಡಾ.ಎಸ್.ಟಿ. ಅರವಿಂದ್ಅ ಧ್ಯಕ್ಷತೆಯನ್ನು ವಹಿಸಿ ಅಚ್ಚುಕಟ್ಟಾಗಿ ನಡೆಸಿಕೊಟ್ಟ ಶ್ರೀ ಶ್ರೀನಿಧಿ ಅಶ್ವತ್ ನಾರಾಯಣ್ ಅವರು, ನಿರೂಪಣೆಗೈದ ಇಮ್ತಿಯಾಜ್ ಅಹ್ಮದ್ ಅವರು ಶ್ರೀ ಎಸ್ ವಿ ತಿಮ್ಮಯ್ಯನವರ ಜೀವನ ಸಾಧನೆಯನ್ನು ಕಣ್ಮುಂದೆ ತಂದರು,
ನಾ ಕಂಡಂತೆ ಅಪ್ಪಾಜಿ ವಿಷಯವಾಗಿ ಐಶ್ವರ್ಯ ಅರವಿಂದ್ ಅವರು ಅಪ್ಪಾಜಿಯ ಜೊತೆ ಕಳೆದ ಸಮಯ ಹಾಗೂ ಅವರ ವಿಚಾರದ ಧಾರೆಗಳು ಮತ್ತು ಅವರ ಕೊನೆಯ ದಿನಗಳನ್ನು ನೆನಪಿಸಿ,ಎಲ್ಲರನ್ನೂ ಭಾವನಾತ್ಮಕವಾಗಿ ಮಾಡಿದ್ದರು,
ಶ್ರೀಮತಿ ಕಿರಣ್
ದೇಸಾಯಿ ಅವರು ಮಾತನಾಡಿ ಎಸ್ ವಿ ತಿಮ್ಮಯ್ಯ ಅವರ ಕಾರ್ಯಕ್ಷಮತೆ, ಉದಾರತ್ವ, ಸಾಹಿತ್ಯ ಆಸಕ್ತಿ ಬಗ್ಗೆ ಬೆಳಕು ಚೆಲ್ಲಿದರು ಮತ್ತು ಅವರನ್ನು ಜೀವನ್ಮುಖಿ ಎಂದು ಬಿಂಬಿಸಿದ್ದರು.
ಕರ್ನಾಟಕ ಸಂಘದ ಕಾರ್ಯದರ್ಶಿಗಳಾದ ಶ್ರೀಮತಿ ಆಶಾಲತಾ ಮೇಡಂ, ಆರ್ಟ್ ಆಫ್ ಲಿವಿಂಗ್‌ನ ಶ್ರೀ Shabarish Kannan , ಗಾಂಧಿ ಬಸಪ್ಪನವರ ಮಗನಾದ ಶ್ರೀ ಅಶೋಕ್ ಬಸಪ್ಪ, JNNCE ಪ್ರೊಫೆಸರ್ ಆದ ಶ್ರೀ ಸುರೇಶ್ ಗೌಡ್ರು, ಶ್ರೀಮತಿ ಪ್ರಭಾ ಅಶ್ವತ್ ನಾರಾಯಣ್, ಎಸ್ ವಿ ತಿಮ್ಮಯ್ಯ ಕುಟುಂಬಸ್ಥರು ಹಾಗೂ ಶರಣ್ಯ ಪದಾಧಿಕಾರಿಗಳು ಹಾರೈಕೆ ಮಾಡುತ್ತಿರುವ ವೈದ್ಯರು ನರ್ಸ್ ಗಳು ಹಾಗೂ ಎಲ್ಲಾ ಕೆಲಸದವರು ಕಾರ್ಯಕ್ರಮಕ್ಕೆ ವಿಶೇಷ ಮೆರಗು ಮೂಡಿಸಿದರು.
ಒಂದು ಅರ್ಥಪೂರ್ಣ ಕಾರ್ಯಕ್ರಮ ,ಮನಸ್ಸಿಗೆ ತುಂಬಾ ನೆಮ್ಮದಿ ಹಾಗೂ ಸಂತೋಷವನ್ನು ನೀಡಿತು .ನಮ್ಮ ತಂದೆಯವರು ಇಂತ ಕಾರ್ಯಕ್ರಮಗಳಿಗೆ ನಮಗೆ ಸದಾ ಪ್ರೇರಣೆ.
ಸಾರ್ವಜನಿಕರಲ್ಲಿ ನನ್ನ ಒಂದು ವಿನಂತಿ, ಶರಣ್ಯದಂತಹ ಸಂಸ್ಥೆಗಳಿಗೆ ತಮ್ಮ ಕೈಯಲ್ಲಾದ ಹಣ ಹಾಗೂ ಇತರೆ ಸಹಾಯವನ್ನು ಮಾಡಿ ಮಾನವೀಯತೆಯನ್ನು ಜೀವಂತವಾಗಿಡಿ ಎಂದು ಪಾಸಿಟಿವ್ ಮೈಂಡ್ ಆಸ್ಪತ್ರೆಯ ಮುಖ್ಯಸ್ಥ ಡಾ. ಅರವಿಂದ್ ಎಸ್ ಟಿ. ಕೋರಿದ್ದಾರೆ.