Department of Women and Child Development ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜಿಲ್ಲೆಯ 07 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿರುವ 126 ಅಂಗನವಾಡಿ ಕಾರ್ಯಕರ್ತೆಯರ ಮತ್ತು 448 ಸಹಾಯಕಿಯರ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಹಲವಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯಲ್ಲಿ 4 ನೇ ಹಂತಗಳನ್ನು ಪೂರ್ಣಗೊಳಿಸಿರುವುದಿಲ್ಲ. ಪೂರ್ಣಗೊಳಿಸದ ಅರ್ಜಿಗಳು ಊರ್ಜಿತವಲ್ಲದ್ದರಿಂದ ಅಂತಹ ಅಭ್ಯರ್ಥಿಗಳು ಅಪೂರ್ಣವಾಗಿರುವ ಅರ್ಜಿಗಳನ್ನು ಪೂರ್ಣಗೊಳಿಸಲು ದಿ:05/01/2025 ರ ವರೆಗೆ ಅವಕಾಶ ಕಲ್ಪಿಸಲಾಗಿದ್ದು, Department of Women and Child Development http://karnemakaone.kar.nic.in/abcd/ ವೆಬ್ ಸೈಟ್ ರಲ್ಲಿ ಸಲ್ಲಿಸಿ, ಸಲ್ಲಿಕೆಯ 02 ಮತ್ತು 03ನೇ ಹಂತದಲ್ಲಿ ದಾಖಲಾತಿಗಳನ್ನು ಆಪ್‌ಲೋಡ್ ಮಾಡಿ 03ನೇ ಹಂತದಲ್ಲಿ ಇ-ಹಸ್ತಾಕ್ಷರವಾಗಿರುವುದನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸಿ 04ನೇ ಹಂತದಲ್ಲಿ ಇ-ಸಹಿಯಾದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-295514ನ್ನು ಸಂಪರ್ಕಿಸುವುದು.
Department of Women and Child Development ಅಪೂರ್ಣ ಅರ್ಜಿಗಳನ್ನ ಪೂರ್ಣಗೊಳಿಸಲು ಅವಧಿ ವಿಸ್ತರಣೆ
Date:
