Thungataranga Newspaper ಶಿವಮೊಗ್ಗದ ತುಂಗಾತರಂಗ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಜೇವ್ಹಿಯರ್ ಡೇವಿಡ್ ಅವರು ಭಾನುವಾರ ಮದ್ಯಾಹ್ನ ನಿಧನರಾದರು.
ಅವರಿಗೆ 89 ವರ್ಷ ವಯಸ್ಸಾಗಿತ್ತು.
ವಯೋಸಹಜ ಹಾಗೂ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ನಿಧನರಾದ ಅವರು ಕಳೆದ 1978 ರಿಂದ 2011 ರವರೆಗೆ ತುಂಗಾತರಂಗ ದಿನಪತ್ರಿಕೆ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಅವರು ಶಿವಮೊಗ್ಗದ ಹಿರಿಯ ಪತ್ರಿಕಾ ಸಂಪಾದಕರಾಗಿದ್ದಾರು. ಅವರು ಪತ್ನಿ, Thungataranga Newspaper ಮೂವರು ಗಂಡು ಹಾಗೂ ಮೂವರು ಹೆಣ್ಷು ಮಕ್ಕಳು, ಮೊಮ್ಮಕ್ಕಳು ಹಾಗೂ ಶಿವಮೊಗ್ಗದ ಅಪಾರ ಆತ್ಮೀಯರನ್ನು, ಶಿವಮೊಗ್ಗ ಪತ್ರಿಕಾ ಸಮೂಹವನ್ನು ಬಿಟ್ಟು ಅಗಲಿದ್ದಾರೆ.
ಶಿವಮೊಗ್ಗ ಬಿಹೆಚ್ ರಸ್ತೆಗೆ ಹೊಂದಿಕೊಂಡ ಪೆನ್ಷನ್ ಮೊಹಲ್ಲಾ, (ಚಂದ್ರಿಕಾ ಬಾರ್ ಪಕ್ಕದ ಕ್ರಾಸ್)ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು.
