klive News Special ಇನ್ನೇನು ಹೊಸ ವರ್ಷ 2024..ಮುಗಿದು 25 ಒಂದೇಬಿಟ್ಟಿತು.ಎಲ್ಲರಲ್ಲೂ ಒಂದೇ ತಳಮಳ ಡಿಸೆಂಬರ್ 31..ಎಲ್ಲಿ ಹೊಸ ವರ್ಷ ಸೆಲೆಬ್ರೇಟ್ ಮಾಡೋದು ಬಹುಶಃ ಒಂದು ತಿಂಗಳಿಂದಲೇ ಯುವಕರು ಯುವತಿಯರ ಲೆಕ್ಕಾಚಾರವಿದ್ದರೆ..ಮದ್ಯಮ ವಯಸ್ಕರದು ಯಾರ ಮನೆಯಲ್ಲಿ ಈ ವರ್ಷ ಪಾರ್ಟಿ ಇಡೋದು ಅನ್ನುವ ಗೊಂದಲದಲ್ಲಿರುತ್ತಾರೆ. ಪಾಶ್ಚಿಮಾತ್ಯರ ಹೊಸ ವರ್ಷ ಇದಾದರೆ ನಮ್ಮ ಭಾರತೀಯರು ಅವರಿಗಿಂತಲೂ ಚೆನ್ನಾಗಿಯೇ ಆಚರಿಸುತ್ತಾರೆ..ಇದು ನಾವು ಮಾಡುವ ಪರರ ಆಚರಣೆ.ಇನ್ನು ದೊಡ್ಡ ದೊಡ್ಡ ನಗರಗಳಲ್ಲಿ ಮೂರು ದಿನದಿಂದಲೇ ಪೊಲೀಸ್ ಭದ್ರತೆ..ಬ್ರಿಗೇಡ್ ರಸ್ತೆ..ಎಂ.ಜಿ.ರೋಡ್ ಇವೆಲ್ಲ ಜಗ ಮಗಿಸುವ ಅಲಂಕಾರ.. ಅಲ್ಲಿ ಪಾರ್ಟಿ ಮಾಡುವರೆಲ್ಲ ಮೇಲ್ದರ್ಜೆ ಅಂದರೆ ದುಡ್ಡಿರುವರು ಎಲ್ಲೆಲ್ಲಿಂದಲೋ ಹೊಸ ವರ್ಷಕ್ಕೆಂದೇ ಬ್ರಿಗೇಡ್ ರೋಡಿಗೆ ಬರುವ ಅನೇಕ ಜನರು.. ಅಲ್ಲಿ ಮಧ್ಯದ ಅಮಲಿನಲ್ಲಿ ..ಅರೆಬರೆ ತುಂಡು ಬಟ್ಟೆಯಲ್ಲಿ ಕುಡಿದು ಹೆಂಗಸರು ಗಂಡಸರು ಎಂಬ ಪರಿವಿಲ್ಲದೆ ಒಬ್ಬರ ಮೇಲೆ ಒಬ್ಬರು ಬೀಳುತ್ತ ಕುಣಿದು ಕುಪ್ಪಳಿಸಿ ಮೈಮೇಲೆ ಪ್ರಜ್ಞೆ ಇಲ್ಲದೆ ಮನೆಗೆ ಹೋಗುವ ದಾರಿಯಲ್ಲೇ ಬಿದ್ದು ಅವರಿಗೆ ಪೊಲೀಸರ ಸಹಾಯದಿಂದ ಮನೆಗೆ ತಲುಪಿಸುವ ವ್ಯವಸ್ಥೆ ಬೇರೆ ಅಂತವರ ರಕ್ಷಣೆಗೆ ಆರಕ್ಷಕರ ಸರ್ಪಗಾವಲು ಎಲ್ಲಿಂಲ್ಲಿದಲೋ ರಕ್ಷಣಾ ದಳದವರನ್ನು ಕರೆತರುವ ಸರ್ಕಾರ..ಪಾಪ ಹಗಲೂ ಇರುಳೂ ಬಿಸಿಲು ಮಳೆ ಗಾಳಿ ಧೂಳು ಇವನ್ನೆಲ್ಲ ಲೆಕ್ಕಿಸದೆ ನಮ್ಮನ್ನು ಕಾಪಾಡುವ ದೇಶದ ಸೈನಿಕರ ಸಂಸಾರಗಳು ಎಷ್ಟೋ ಯೋಧರು ಅಧಿಕಾರಿಗಳು ಕರೆದಾಗ ಹೆಂಡತಿ ಮಕ್ಕಳನ್ನು ಬಿಟ್ಟು ಬೇರೆ ಸ್ಥಳಗಳಿಗೆ ಹೋದರೆ ಬರುವುದು ತಿoಗಳಾದರೂ ಆರು ತಿಂಗಳಾದರೂ ಆಗಬಹುದು. klive News Special ಇಲ್ಲಿ ಸಂಸಾರ ಒಂಟಿ ಜೀವನ ನಡೆಸುವ ಅವರ ಕುಟುಂಬಕ್ಕೆ ಒಂದು ದಿನವಾದರೂ ಸರ್ಕಾರದಿಂದ ರಕ್ಷಣೆಯಾಗಲಿ ಯಾವ ಸೌಲಭ್ಯವಾಗಲಿ ಇಲ್ಲ.ಇದು ನಮ್ಮ ದೇಶದ ಸ್ಥಿತಿ..ನಮಗೆ ಹೊಸ ವರ್ಷ ಚೈತ್ರ ಮಾಸದಲ್ಲಿ ಬರುವ ಯುಗಾದಿಯೆ ನವ ವರ್ಷವು..ಕುಟುಂಬದವರ ಜೊತೆ ಕೂಡಿ ಮಾಡುವ ಹಬ್ಬದಲ್ಲಿ ಹಿರಿಯರ ಆಶೀರ್ವಾದ ಪಡೆದು ಎಲ್ಲರೂ ಒಟ್ಟಿಗೆ ಬೇವು ಬೆಲ್ಲ ತಿಂದು ಜೊತೆಯಲ್ಲಿ ಕುಳಿತು ಹಬ್ಬದ ಅಡುಗೆ ಸವಿಯುವ ಇಂತಹ ಸಂತೋಷ ಎಷ್ಟು ಕೋಟಿ ಕೊಟ್ಟರೂ ಸಿಗದು..ಇದು ನಮ್ಮ ಹೊಸ ವರ್ಷಾಚರಣೆ..ಹೀಗಿರಬೇಕು ನಮ್ಮ ನವ ವರ್ಷದ ಆಗಮನ.ನಾವು ಬದಲಾಗಬೇಕೆ ಹೊರತು ಕಾಲ ಬದಲಾಗುವುದಿಲ್ಲ..ಬದಲು ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಲ್ಲರಿಗೂ ಜನವರಿ I.1.2025 ರ ಶುಭಾಷಯ ತಿಳಿಸುತ್ತಾ ನನ್ನ ಕಿರು ಲೇಖನ ಮುಗಿಸುತ್ತೇನೆ..
ಶುಭ ಕುಸ್ಕೂರು ಶಿವಮೊಗ್ಗ