Bahumukhi Shivamogga ಶಿವಮೊಗ್ಗ ನಗರದ ಬಹುಮುಖಿ ವತಿಯಿಂದ 44ನೇ ಕಾರ್ಯಕ್ರಮವಾಗಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎಂ. ಶ್ರೀಧರ ಮೂರ್ತಿಯವರಿಂದ ಏಕಾಗ್ರತೆ ಕೊರತೆ ಹಾಗೂ ಸಾಮಾಜಿಕ ಸವಾಲುಗಳು ಕುರಿತು ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದೆ.
ಪ್ರೊ. ಎಂ. ಶ್ರೀಧರಮೂರ್ತಿ ಮನಶಾಸ್ತ್ರಜ್ಞರು ಕೂಡಾ. ಸುಮಾರು ನಾಲ್ಕು ದಶಕಗಳ ಕಾಲ ಮನಶಾಸ್ತ್ರ ವನ್ನು ಬೋಧಿಸಿ, ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಆಪ್ತ ಸಮಾಲೋಚನೆಯನ್ನು ಒಂದು ಸಾಮಾಜಿಕ ಸೇವೆಯಂತೆ ಮಾಡುತ್ತಾ ಅನೇಕರ ಬದುಕಿಗೆ ಮಾರ್ಗದರ್ಶಿಯಾಗಿದ್ದಾರೆ. ವೈಚಾರಿಕ ಮನೋಭಾವ, ಚಿಂತನೆ, ಸರಳ ಬದುಕಿಗೆ ಶ್ರೀಧರಮೂರ್ತಿಯವರು ಮೂರ್ತರೂಪ.
ಶ್ರೀಧರಮೂರ್ತಿಯವರು ಅಂತರರಾಷ್ಟ್ರೀಯ ಮನ್ನಣೆ ಪಡೆದ ಛಾಯಾಗ್ರಾಹಕರು ಎಂಬುದು ಮತ್ತೊಂದು ವಿಶೇಷ. ಲ್ಯಾಂಡ್‌ಸ್ಕೆಪ್ ಮತ್ತು ಪೋರ್ಟೆ್ರಂಚರ್ ಫೋಟೋಗ್ರಾಫಿ ವಿಭಾಗದಲ್ಲಿ ಪ್ರಖ್ಯಾತರು. ಶಾಸ್ತ್ರೀಯ ಸಂಗೀತ, ಸಿನೆಮಾ, ಕ್ಯಾಲಿಗ್ರಫಿ ಕೂಡ ಇವರ ಆಸಕ್ತಿಯ ಕ್ಷೇತ್ರಗಳು.
Bahumukhi Shivamogga ಡಿ. 29ರ ಭಾನುವಾರ ಸಂಜೆ 5 :30ಕ್ಕೆ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಪ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿ ಅಪರೂಪದ ಈ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
ಮಾಹಿತಿಗಾಗಿ 9449284495, 9845014229, 95380 20367ರಲ್ಲಿ ಸಂಪರ್ಕಿಸಬಹುದು.