State Government Employees’ Association ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಪುನರಾಯ್ಕೆಯಾಗಿದ್ದಾರೆ.
ಷಡಾಕ್ಷರಿ ಅವರು 507 ಮತಗಳು ಹಾಗೂ ಬಿ.ಪಿ. ಕೃಷ್ಣೇಗೌಡ ಅವರು 442 ಮತಗಳನ್ನು ಪಡೆದರು. ಷಡಾಕ್ಷರಿ ಅವರು 65 ಮತಗಳ ಅಂತರದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎ. ಹನುಮನರಸಯ್ಯ ಘೋಷಿಸಿದರು
State Government Employees’ Association ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿ.ಎಸ್.ಷಡಾಕ್ಷರಿ ಪುನರಾಯ್ಕೆ ಆಗಿದ್ದಾರೆ.
ಈಗಾಗಲೇ ತಮ್ಮ ಕೌಶಲ,ಚಾಕಚಕ್ಯತೆಗಳ ಮೂಲಕ ಸರ್ಕಾರಿ ನೌಕರರ ಸಮಸ್ಯೆಗಳ ಬಗ್ಗೆ ಸರ್ಕಾರದೊಂದಿಗೆ ಮಧ್ಯಸ್ಥಿಕೆ ನಡೆಸಿ ನೌಕರರ ಹಿತ ರಕ್ಷಿಸುವಲ್ಲಿ ಸಾಕಷ್ಟು ಸೇವೆಮಾಡಿದ ಕೀರ್ತಿ ಅವರದ್ದಾಗಿದೆ.
ಷಡಾಕ್ಷರಿ ಅವರು 507 ಮತಗಳು ಪಡೆದರು. ಎದುರಾಳಿ ಬಿ.ಪಿ. ಕೃಷ್ಣೇಗೌಡ ಅವರು 442 ಮತಗಳಿಗೆ ತೃಪ್ತಿ ಪಡಬೇಕಾಯಿತು. 65 ಮತಗಳ ಅಂತರದಿಂದ ಷಡಕ್ಷರಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎ. ಹನುಮನರಸಯ್ಯ ಘೋಷಿಸಿದ್ದಾರೆ.