Shivamogga Police ನಮ್ಮ ವೃತ್ತಿಯ ಜೊತೆಗೆ ಸಮಾಜ ಸೇವೆಯು ಅತಿ ಮುಖ್ಯ ಇಂದು ನಮ್ಮ ಪೊಲೀಸ್ ಸಿಬ್ಬಂದಿ ವರ್ಗದವರು ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುತ್ತಾರೆ . ಇವರುಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ರಕ್ತದಾನ ಮಾಡುವುದರ ಮುಖಾಂತರ ಪವಿತ್ರವಾದ ದಾನಿಗಳಾಗಬೇಕೆಂದು ವಿನೋಬನಗರ ಪೊಲೀಸ್ ಠಾಣೆ ಪಿಎಸ್ಐ ಚಂದ್ರಕಲಾ ಅವರು ನುಡಿದರು.
ಅವರು ವಿನೊಬನಗರದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳಲಾದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ರಕ್ತದಾನಿಗಳು ಸಮಾಜದಲ್ಲಿ ನಿಜವಾದ ಸಮಾಜ ಸೇವಕರು ಇಂದು ರಕ್ತದ ಕೊರತೆ ತುಂಬಾ ಇದೆ ನಾವು ಪ್ರತಿನಿತ್ಯ ಗಮನಿಸುತ್ತಾ ಇರುತ್ತೇವೆ ರಕ್ತ ಸಿಗದೆ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ರಕ್ತದ ಬೆಲೆ ಅದು ಬೇಕಾದಾಗ ಮಾತ್ರ ಗೊತ್ತಾಗುತ್ತದೆ ಈ ನಿಟ್ಟಿನಲ್ಲಿ ಎಲ್ಲರೂ ವೈದ್ಯರ ಸಲಹೆ ಮೇರೆಗೆ ಮೂರು ತಿಂಗಳಿಗೊಂದು ಬಾರಿ ರಕ್ತದಾನ ಮಾಡುವುದರ ಮುಖಾಂತರ ತಮ್ಮ ಆರೋಗ್ಯದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕು ಎಂದು ನುಡಿದರು.
ಇದೇ ಸಂದರ್ಭದಲ್ಲಿ 48 ಬಾರಿ ರಕ್ತದಾನ ಮಾಡಿದ ಹೆಡ್ ಕಾನ್ಸ್ಟೇಬಲ್ ಹಾಲೇಶಪ್ಪನವರು ಮಾತನಾಡುತ್ತಾ ಇಂದು ಪೊಲೀಸ್ ಠಾಣೆಗಳಲ್ಲಿ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವುದು ಒಂದು ಸಮಾಜಮುಖಿ ಕಾರ್ಯ ಈ ನಿಟ್ಟಿನಲ್ಲಿ ನಾವು ಜಿಲ್ಲಾಧ್ಯಂತ ಪೋಲಿಸ್ ಅಧೀಕ್ಷಕರ ಅನುಮತಿ ಮೇರೆಗೆ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ ರಕ್ತದಾನದಿಂದ ನಮ್ಮ ಆಯಸ್ಸು ವೃದ್ಧಿಯಾಗುತ್ತದೆ ಹಾಗೂ ನಮ್ಮ ದೇಹದಲ್ಲಿ ಇರುವ ಯಾವುದಾದರೂ ಆರೋಗ್ಯ ಸಮಸ್ಯೆ ಕೂಡಲೇ ತಿಳಿಯುತ್ತದೆ ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡುವುದರ ಮುಖಾಂತರ ರಕ್ತದ ಕೊರತೆಯನ್ನು ನೀಗಿಸಬೇಕು ಎಂದು ನುಡಿದರು.
Shivamogga Police ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಯ ಮಾಜಿ ಅಧ್ಯಕ್ಷ ಜಿ. ವಿಜಯಕುಮಾರ್ ಅವರು ಮಾತನಾಡುತ್ತಾ ರಕ್ತದಾನದಿಂದ ನಮಗೆ ಏಕಾಗ್ರತೆ ಹೆಚ್ಚುವುದರ ಜೊತೆಗೆ ಸದಾ ಸಂತೋಷದಿಂದ ಉಲ್ಲಾಸದಿಂದ ಇರುತ್ತೇವೆ ದಾನ ಮಾಡುವುದರಿಂದ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ ಅಸಾರು ರಕ್ತ ಉತ್ಪತ್ತಿಯಾಗಿ ಸದಾ ಲವಲವಿಕೆಯಿಂದ ಇರುತ್ತೇವೆ ಮೂಢನಂಬಿಕೆಯಿಂದ ಹೊರ ಬಂದ ರಕ್ತದಾನ ಮಾಡಿ ಸದೃಢವಾದ ಸಮಾಜವನ್ನು ನಿರ್ಮಾಣ ಮಾಡೋಣ ಎಂದು ನುಡಿದರು.
ಶಿಬಿರದಲ್ಲಿ 60 ಬಾರಿ ಸಂಪೂರ್ಣ ರಕ್ತದಾನ ಮಾಡಿ ಇನ್ನೂರ ಎಪ್ಪತ್ತು ಬಾರಿ ಪ್ಲೇಟ್ಲೆಟ್ಸ್ ಗಳನ್ನ ದಾನ ಮಾಡಿದ ಚಂದ್ರಕಾಂತ ಆಚಾರ್ಯ ಅವರು 116 ಬಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್ ,ರೆಡ್ ಕ್ರಾಸ್ ನಾರಿ ನಿರ್ದೇಶಕ ಮಂಜು ಅಪ್ಪಾಜಿ ರೆಡ್ ಕ್ರಾಸ್ ಸಂಜೀವಿನಿ ರಕ್ತ ಕೇಂದ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಶೃತಿ ವಿನೋಬಾ ನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ವರ್ಗದವರು ರಕ್ತದಾನ ಮಾಡುವುದರ ಮುಖಾಂತರ ಪವಿತ್ರ ದಾನಿಗಳಾದರು.