Vagdevi Trust ಇತ್ತಿಚೆಗೆ ತೀರ್ಥಹಳ್ಳಿಯಲ್ಲಿ ವಾಗ್ದೇವಿ ಚಾರಿಟಬಲ್ ಟ್ರಸ್ಟ್ ನ ವಾರ್ಷಿಕ ಕೊಡುಗೆ ಸಮಾರಂಭ ನಡೆಯಿತು. ಸಮಾಜದಲ್ಲಿನ ದುರ್ಬಲ ಮಹಿಳೆಯರಿಗೆ, ವಿಶೇಷ ಚೇತನರಿಗೆ, ಪಾಳು ಮನೆಯಲ್ಲಿ ಜೀವನಸಾಗಿಸುವ ಆರ್ಥಿಕವಾಗಿ ಹಿಂದುಳಿದವರಿಗೆ ವಾಗ್ದೇವಿ ಟ್ರಸ್ಟ್ ಕೈಲಾದಷ್ಟು ನೆರವನ್ನು ನೀಡುತ್ತಾ ಅಳಿಲುಸೇವೆ ಮಾಡುತ್ತಿದೆ.ತೀರ್ಥಹಳ್ಳಿಯಲ್ಲಿ 2024-25 ಸಾಲಿನ ವಿದ್ಯಾಧಾರ ಮತ್ತು ವರ್ಷಾಧಾರ ಯೋಜನೆಯಡಿ ಸಹಾಯಧನ ವಿತರಿಸುವ ಕಾರ್ಯಕ್ರಮ ವ್ಯವಸ್ಥೆಗೊಳಿಸಲಾಗಿತ್ತು. ಸಮಾರಂಭದಲ್ಲಿ ಸಹ್ಯಾದ್ರಿ ಟ್ರಸ್ಟಿನ ಕಾರ್ಯದರ್ಶಿ ಅನಿತಾ ನಾಗರಾಜ್ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾರ್ಗವಿ ಪರಮೇಶ್ವರ್ ಮಾತನಾಡಿದರು.
ಟ್ರಸ್ಟಿನ ಅಧ್ಯಕ್ಷ ರವಿರಾಜ್ ವೈದ್ಯ ಅವರು ವಾಗ್ದೇವಿ ಸಂಸ್ಥೆಯ ಸಮಾಜ ಸೇವಾ ಚಟುವಟಿಕೆ ಪರಿಚಯಿಸಿದರು. ದಾನಿಗಳೂ ಕೂಡ ಟ್ರಸ್ಟಿನ ಸೇವಾಕಾರ್ಯಕ್ಕೆ ಕೈಜೋಡಿಸಿದ್ದಾರೆ. ದಾನಿ ಕೂಳೂರು ಸತ್ಯನಾರಾಯಣರಸವ್, ಡಾ .ಮುರಳೀಧರ್ ಅವರೂ ತಮ್ಮ ಮೆಚ್ವುಗೆ ವ್ಯಕ್ತಪಡಿಸಿ ಮಾತನಾಡಿದರು. ವಿದ್ಯಾರ್ಥಿನಿ ಅಶ್ವಿತಾ ತನಗೆ ಟ್ರಸ್ಡಿನಿಂದ ಆದ ನೆರವಿನ ಬಗ್ಗೆ ಮಾತನಾಡಿದಳು.
Vagdevi Trust ವರ್ಷಾದಾರ ಯೋಜನೆಯಲ್ಲಿ 15 ಅಸಹಾಯಕರಿಗೆ ಆರ್ಥಿಕ ಸಹಾಯ ನೀಡಲಾಯಿತು. ವಿದ್ಯಾಧಾರ ಯೋಜನೆಯಲ್ಲಿ 18 ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಲಾಯಿತು. ಕಮ್ಮರಡಿಯ ವಿಶ್ವತೀರ್ಥ ಪ್ರೌಢ ಶಾಲೆಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯರ ಪರವಾಗಿ ಶುಲ್ಕಾ ಪಾವತಿ ಮಾಡಲಾಯಿತು (25000/-) ಬಸವನಿಯ ಸಾವಿತ್ರಮ್ಮ ರಾಮ ಶರ್ಮ ಅಭಲಾಶ್ರಮಕ್ಕೆ ಧನ ಸಹಾಯ ಮಾಡಲಾಯಿತು. ಒಬ್ಬ ಎಂಜಿನಿಯರಿಂಗ್ ವಿದ್ಯಾರ್ಥಿಗೆ ಸುಮಾರು ಒಂದು ಲಕ್ಷ ಮೌಲ್ಯದ ಲ್ಯಾಪ್ ಟಾಪ್
ನೀಡಲಾಗಿದೆ. ಬಡ ವಿದ್ಯಾರ್ಥಿನಿ ಒಬ್ಬಳಿಗೆ ಸಂಗೀತ ಕಲಿಯುವ ಆಸಕ್ತಿ ಇರುವುದರಿಂದ ಮ್ಯೂಸಿಕ್ ಸಿಸ್ಟಮ್ ನೀಡಲಾಗಿದೆ.
ಅಂಧ ವೃದ್ಧ ಬಡ ಮಹಿಳೆಯೊಬ್ಬರಿಗೆ ಕಾಟ್ ಮತ್ತು ಬೆಡ್ ನೀಡಲಾಗಿದೆ. ಪ್ರತಿ ತಿಂಗಳು 5 ಜನರಿಗೆ ವೈದ್ಯಕೀಯ ಸಹಾಯಧನ ನೀಡಲಾಗುತ್ತಿದೆ. ವೃದ್ಧಾಶ್ರಮ ಒಂದರಲ್ಲಿ ಇರುವ ಒಬ್ಬ ಬಡವರಿಗೆ ಮಾಸಿಕ ಖರ್ಚು ವೆಚ್ಚಗಳನ್ನು ಭರಿಸಲಾಗುತ್ತಿದೆ
ಆರು ಬಡ ಕುಟುಂಬಗಳಿಗೆ ಪ್ರತಿ ತಿಂಗಳು ದಿನಸಿ ಸಾಮಾನು ಉಚಿತವಾಗಿ ಪೂರೈಸಲಾಗುತ್ತಿದೆ.