Primary Agriculture Cooperative Credit Societies ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಅಬಲಗೆರೆ ಶಿವಮೊಗ್ಗ (ತಾ) ಇದರ ಮುಂದಿನ ಐದು ವರ್ಷಗಳ ಅವಧಿಗೆ ದಿನಾಂಕ 29.12.2024ರ ಭಾನುವಾರ ರಂದು ನಡೆಯಬೇಕಾಗಿದ್ದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಸಾಲಗಾರರ ಸಾಮಾನ್ಯ ಕ್ಷೇತ್ರ, ಮಹಿಳಾ ಮೀಸಲು, ಹಿಂದುಳಿದ ವರ್ಗ ‘ಎ’ ಮತ್ತು ಹಿಂದುಳಿದ ವರ್ಗ ‘ಬಿ’ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಒಟ್ಟು ೬೦ ಜನ ಸದಸ್ಯರು ನಾಮಪತ್ರ ಸಲ್ಲಿಸಿದ್ದರು.
ಹಾಗೂ ಸಾಲಗಾರರಲ್ಲಿದ್ದ ಸಾಮಾನ್ಯ ಕ್ಷೇತ್ರಕ್ಕೆ ಏಳು ಜನ ಸದಸ್ಯರು ನಾಮಪತ್ರ ಸಲ್ಲಿಸಿದ್ದರು.
ದಿನಾಂಕ 22-12-2024 ರಂದು ನಾಮಪತ್ರ ಪರಿಶೀಲನೆಯಲ್ಲಿ ಮೇಲ್ಕಂಡ 67 ಜನ ಸದಸ್ಯರ ನಾಮಪತ್ರಗಳು ಕ್ರಮಬದ್ಧವಾಗಿದ್ದವು ಅದರಂತೆ ದಿನಾಂಕ 23-12-2024 ರಂದು 55 ಅಭ್ಯರ್ಥಿಗಳು ನಾಮಪತ್ರಗಳನ್ನು ವಾಪಸ್ ಪಡೆದುಕೊಂಡರು.
ಉಳಿದ 12 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಅಬ್ಬಲಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕರ ಸಂಘವು ಒಂದು ಮಾದರಿ ಸಂಘವಾಗಿ ಹೊರಹಮ್ಮಿದ್ದು ಚುನಾವಣಾಧಿಕಾರಿಗಳಾದ ನಿಖಿಲ್ ರವರು ಪ್ರಶಂಸೆ ವ್ಯಕ್ತಪಡಿಸಿ ಈ ಕೆಳಕಂಡ ಅಭ್ಯರ್ಥಿಗಳನ್ನು ಚುನಾಯಿತ ಸದಸ್ಯರೆಂದು ಘೋಷಣೆ ಮಾಡಿದರು.
Primary Agriculture Cooperative Credit Societies ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ 1, ಕೆ.ಎಲ್ ಜಗದೀಶ್ವರ್ ಕುಂಚೇನಹಳ್ಳಿ, 2. ಬಿ ಮಂಜಪ್ಪ ಕೊಮ್ಮನಾಳು, 3. ಎಜಿ ಚಂದ್ರಶೇಖರಪ್ಪ ಅಬ್ಬಲಗೆರೆ, 4. ಬಿ ಹೆಚ್ ಉಮಾಪತಿ ಬಸವನಗೂರು, 5. ಮಯೂರ ವರ್ಮ ಬಿಕ್ಕೋನಹಳ್ಳಿ ಬಿಸಿಎಂಎ
- ಎಮ್. ಎಚ್ ಹಾಲೇಶ್ ಕೊಮ್ಮನಾಳ್, ಬಿಸಿಎಂಬಿ, 7. ಅಶೋಕ ಕೆ.ಎಸ್. ಕೊಮ್ಮನಾಳು, ಪರಿಶಿಷ್ಟ ಜಾತಿ, 8. ಚಂದ್ರನಾಯ್ಕ ಕುಂಚೇನಹಳ್ಳಿ ಪರಿಶಿಷ್ಟ ಪಂಗಡ, 9. ಜಗದೀಶ್ ಅಬ್ಬಲಗೆರೆ ಮಹಿಳಾ ಮೀಸಲು 10. ಸೀತಾಬಾಯಿ ಅಬ್ಬಲಗೆರೆ, 11. ನೀಲಾಬಾಯಿ ಕಲ್ಲಾಪುರ, ಸಾಲಗಾರರಲ್ಲಿದ ಕ್ಷೇತ್ರ, 12. ದಶರಥ ನಾಯ್ಕ ಕಲ್ಲಾಪುರ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
7.