Bharath Scout & Guides ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿ ಕ್ರೀಯಾಶೀಲತೆ ಹಾಗೂ ನಾಯಕತ್ವ ಗುಣ ವೃದ್ಧಿಸುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ರೋವರ್ ವಿಭಾಗದ ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್ ಹೇಳಿದರು.
ಶಿವಮೊಗ್ಗ ಜಿಲ್ಲಾ ಸ್ಕೌಟ್ ಭವನದಲ್ಲಿ ರೋವರ್ ರೇಂಜರ್‌ಗಳಿಗೆ ಆಯೋಜಿಸಿದ್ದ ಮೂರು ದಿನಗಳ ಜಿಲ್ಲಾಮಟ್ಟದ ದಳ ನಿರ್ವಹಣೆ ಮತ್ತು ಚಾರಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಟೆಂಟ್ ನಿರ್ಮಾಣ ಮಾಡುವುದು, ನಾಟ್ ಹಾಕುವುದು ಸೇರಿದಂತೆ ವೈವಿಧ್ಯಮಯ ವಿಷಯಗಳನ್ನು ಕಲಿಸುತ್ತದೆ. ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿ ಮನೆ ಮನೆಗಳಿಗೂ ತಲುಪಿಸಬೇಕು. ಸ್ಕೌಟ್ ವಿಶ್ವಾದ್ಯಂತ ಸ್ಕೌಟ್ ಚಳವಳಿ ತನ್ನದೇ ಆದ ವಿಶೇಷ ಸ್ಥಾನಮಾನ ಹೊಂದಿದೆ ಎಂದು ತಿಳಿಸಿದರು.
Bharath Scout & Guides ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಕುಪ್ಪಳ್ಳಿ, ಕವಲೇದುರ್ಗ, ಮೃಗವಧೆ ಚಾರಣ ಯಶಸ್ವಿಯಾಗಿ ಪೂರ್ಣಗೊಳಿಸಿದ ವಿಶೇಷ ಅನುಭವ ದೊರಕಿದೆ. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಸ್ಕೌಟ್ಸ್ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದರ ಜತೆಗೆ ದಳಗಳನ್ನು ಸ್ಥಾಪಿಸಿ ಅವರಿಗೆ ಮಾಹಿತಿ ನೀಡಬೇಕು ಎಂದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸ್ಕೌಟ್ ಆಯುಕ್ತ ಎಸ್.ಜಿ.ಆನಂದ್ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ ರೋವರ್ ರೇಂಜರ್‌ಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಮಕ್ಕಳು ವ್ಯಾಯಾಮ ಪ್ರತಿ ನಿತ್ಯ ಮಾಡಬೇಕು. ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ರೋವರ್ ವಿಭಾಗದ ಆಯುಕ್ತ ಕೆ.ರವಿ ಮಾತನಾಡಿ, ಮೂರು ದಿನದ ಶಿಬಿರ ಅತ್ಯಂತ ಯಶಸ್ವಿಗೊಳ್ಳಲು ತರಬೇತಿ ಆಯುಕ್ತರು ಪರಿಶ್ರಮ ಹಾಗೂ ಜಿಲ್ಲಾ ಕಚೇರಿ ಪದಾಧಿಕಾರಿಗಳ ಪ್ರಯತ್ನ ಕಾರಣ ಎಂದು ತಿಳಿಸಿದರು.
ತರಬೇತಿ ಆಯುಕ್ತ ಶಿವಶಂಕರ್, ಸಹ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಲಕ್ಷ್ಮೀ ರವಿ, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ, ಕೇಂದ್ರ ಸ್ಥಾನಿಕ ಆಯುಕ್ತ ರಾಘವೇಂದ್ರ, ಪರಮೇಶ್ವರಯ್ಯ, ಪರಿಮಳಾ, ಅಶೋಕ್, ಶ್ರೇಯಾಂಕ, ಲೋಹಿತ್ ಮತ್ತಿತರರು ಉಪಸ್ಥಿತರಿದ್ದರು.
Bharath Scout & Guides ಸ್ಕೌಟ್ & ಗೈಡ್ಸ್ ಚಳವಳಿ ಮನೆಮನೆಗೂ ತಲುಪಬೇಕು- ಜಿ.ವಿಜಯ ಕುಮಾರ್
Date: