Shivaganga Yoga Centre ಯೋಗ ಪ್ರಾಣಾಯಾಮ ಧ್ಯಾನ ಸದಾ ನಮ್ಮನ್ನು ಹಸನ್ಮುಖಿ ಗಳಿಸುವುದರ ಜೊತೆಗೆ ದೈಹಿಕ ಹಾಗೂ ಮಾನಸಿಕ ಸದೃಢತೆ ಒದಗಿಸುತ್ತದೆ. ನಮ್ಮ ದೇಹದಲ್ಲಿ ಇರುವ ಪ್ರತಿಯೊಂದು ಅಂಗಾಂಗಗಳು ಸಮಾತೋಲನದಿಂದ ಹಾಗೂ ನೆಮ್ಮದಿಯಿಂದ ಇರಬೇಕಾದರೆ ಧ್ಯಾನವು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ ತಂತ್ರಜ್ಞಾನ ಯುಗದಲ್ಲಿ ಇಂದು ಪ್ರಪಂಚದ 197 ದೇಶಗಳಲ್ಲಿ ಧ್ಯಾನ ಪ್ರಾಣಾಯಾಮಕ್ಕೆ ವಿಶೇಷ ಮಹತ್ವ ದೊರಕಿದೆ ಎಂದು ರಾಜ್ಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶಿವಗಂಗಾ ಯೋಗ ಕೇಂದ್ರದ ಯೋಗ ಆಚಾರ್ಯ ಸಿವಿ ರುದ್ರಾರಾಧ್ಯ ಅವರು ಅಭಿಮತ ವ್ಯಕ್ತಪಡಿಸಿದರು.
ಅವರು ಕಲ್ಲಹಳ್ಳಿಯ ಶಿವಗಂಗಾ ಯೋಗ ಕೇಂದ್ರದಲ್ಲಿ ವಿಶ್ವ ಧ್ಯಾನ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾದ ವಿಶೇಷ ಧ್ಯಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು ಯೋಗ ಎಂದರೆ ಈಗ ಸಾಮಾನ್ಯರ ಗ್ರಹಿಕೆಯಲ್ಲಿ ಆಸನಗಳು ಮಾತ್ರ ಆದರೆ ಯೋಗ ದರ್ಶನದ ವ್ಯಾಪ್ತಿ ಇನ್ನೂ ವಿಸ್ತಾರ ಹಾಗೂ ಆಳವು ಆಗಿದೆ. ಯಮ. ನಿಯಮ. ಆಸನ. ಪ್ರಾಣಾಯಾಮ.ಪ್ರತ್ಯಾಹಾರ. ಧಾರಣ.ಧ್ಯಾನ.ಮತ್ತು ಸಮಾಧಿ ಈ 8 ಸಾಧನೆಗಳನ್ನು ಒಳಗೊಂಡಿರುವುದೇ
ಹಟವಾದ ಯೋಗ.ಇವು ಬೌದ್ಧಿಕ ಶಾರೀರಿಕ ಮತ್ತು ಮಾನಸಿಕ ಸಾಧನೆಗೆ ಒದಗಿಸಿರುವ ಮೆಟ್ಟಿಲುಗಳು ಎಂದು ನುಡಿದ ಅವರು ಡಿಸೆಂಬರ್ 21ನ್ನು ವಿಶ್ವ ಧ್ಯಾನ ದಿನವನ್ನಾಗಿ ಘೋಷಿಸಿದ ಭಾರತ ಸರ್ಕಾರಕ್ಕೆ ವಿಶೇಷ ಧನ್ಯವಾದಗಳು ಸಮರ್ಪಿಸಿದರು.
Shivaganga Yoga Centre ಈ ನಿಟ್ಟಿನಲ್ಲಿ ಯೋಗ ಹಾಗೂ ಧ್ಯಾನಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಕ್ಕಂತಾಗಿದೆ ಎಂದು ನುಡಿದರು.ನಗರದ ಶಿವಗಂಗಾ ಯೋಗ ಕೇಂದ್ರದ 32 ಶಾಖೆಗಳಿಂದ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡು 45 ನಿಮಿಷಕ್ಕೂ ಹೆಚ್ಚು ವಿವಿಧ ಬಗೆಯ ಪ್ರಾಣಾಯಾಮ ಹಾಗೂ ಧ್ಯಾನ ಮಾಡಿದರು ಈ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಚಂದ್ರಶೇಖರಯ್ಯ ಜಗದೀಶ್. ವೀಣಾ ಕೇಶವ್ ಜಿ ವಿಜಯಕುಮಾರ್ ಹಾಗೂ ಯೋಗ ಬಂಧುಗಳು ಉಪಸ್ಥಿತರಿದ್ದರು.