Saturday, January 25, 2025
Saturday, January 25, 2025

Guarantee scheme ಗ್ಯಾರಂಟಿ ಯೋಜನೆಗಳು ಬಡಕುಟುಂಬಗಳಿಗೆ ಆಸರೆಯಾಗಿವೆ- ಮಧು ಬಂಗಾರಪ್ಪ

Date:

Guarantee scheme ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ‌ ಯೋಜನೆಗಳು ಬಡ ಕುಟುಂಬಗಳಿಗೆ ಆಸರೆಯಾಗಿ ನಿಂತಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಹೇಳಿದರು.
ಸೊರಬದ ಬ್ಲಾಕ್ ವ್ಯಾಪ್ತಿಯ ವಿವಿಧ ಇಲಾಖೆಗಳ 25 ಕಾಮಗಾರಿಗಳು ಮತ್ತು 58 ಕಾಮಗಾರಿಗಳ‌ ಶಂಕುಸ್ಥಾಪನೆ (ಒಟ್ಟು 56.34ಕೋಟಿ ಮೊತ್ತದ)
ಹಾಗೂ ತಾಲ್ಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಕಚೇರಿ , ತಾಲ್ಲೂಕು ಬಗರ್ ಹುಕುಂ ಸಮಿತಿ‌ ಕಚೇರಿ ಹಾಗೂ ಸೊರಬ ಪ್ರಥಮ‌ ದರ್ಜೆ ಕಾಲೇಜಿನ ಹೊಸ ಕಟ್ಟಡ ಕಾಮಗಾರಿ‌ಗಳನ್ನು‌ ಶುಕ್ರವಾರದಂದು ಉದ್ಘಾಟಿಸಿ ಅವರು ಮಾತನಾಡಿದರು.
ಪಂಚ ಗ್ಯಾರಂಟಿ ಯೋಜನೆಗಳು ಆರ್ಥಿಕತೆ ರೂಪದಲ್ಲಿ, ಆಹಾರವಾಗಿ, ಬಡವರ ಮನೆಗಳ ಜ್ಯೋತಿಯಾಗಿ ಬೆಳಗುತ್ತಿವೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿಯಾಗಲ್ಲ. ಬದಲಾಗಿ ಅದು ಅಕ್ಷಯ ಪಾತ್ರೆ. ಗೃಹಜ್ಯೋತಿಯಡಿ ಉಚಿತ ವಿದ್ಯುತ್, ಗೃಹಲಕ್ಷ್ಮಿ‌ಅಡಿಯಲ್ಲಿ ಮನೆ ಯಜಮಾನಿಗೆ ಪ್ರತಿ ತಿಂಗಳು ರೂ.2000 , ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ, ಯುವನಿಧಿ ಯೋಜನೆಯಡಿ ೧೭ ಲಕ್ಷ ವಿದ್ಯಾರ್ಥಿಗಳು ಸೌಲಭ್ಯ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ೫ ಕೆಜಿ ಅಕ್ಕಿ ಹಾಗೂ ಬಾಕಿ 5 ಕೆಜಿ ಅಕ್ಕಿ ಬದಲು ಹಣವನ್ನು ಸಂದಾಯ ಮಾಡಲಾಗುತ್ತಿದ್ದು
ರಾಜ್ಯದ ಬಡ ಜನತೆಯ ಏಳ್ಗೆಗೆ ಗ್ಯಾರಂಟಿ ಯೋಜನೆ ಸಹಕಾರಿಯಾಗಿದೆ ಎಂದರು.
ಶಂಕುಸ್ಥಾಪನೆಯಾದ ಕಾಮಗಾರಿಗಳ ಕೆಲಸವನ್ನು ನಾಳೆಯಿಂದನೇ ಆರಂಭಿಸಬೇಕು. ಗುಣಮಟ್ಟದ ಕಾಮಗಾರಿಗಳು ಆಗಬೇಕು. ಎಲ್ಲ ಗ್ರಾಮಗಳಿಗೆ ನಾನೇ ವೈಯಕ್ತಿಕ ವಾಗಿ ಭೇಟಿ ನೀಡುತ್ತೇನೆ.
ಸೊರಬ ತಾಲ್ಲೂಕಿನಲ್ಲಿ ಮುಂದಿನ ಜನವರಿ ಒಳಗೆ ರೂ. 200 ಕೋಟಿ ಮೊತ್ತದಲ್ಲಿ ಸುಮಾರು ೧೭೯ ಕಾಮಗಾರಿ‌ಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಮಾಜಿ‌ಮುಖ್ಯಮಂತ್ರಿಗಳಾದ ಬಂಗಾರಪ್ಪನವರು ಜಾರಿ ಮಾಡಿದ ಪಂಪ್ ಸೆಟ್ ವಿತರಣೆ ಯೋಜನೆಯಡಿ ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ.‌
Guarantee scheme ಪ್ರಸ್ತುತ ಸರ್ಕಾರ ಪ್ರತಿ ಗ್ರಾ.ಪಂ ಗೆ ಅಭಿವೃದ್ದಿ ಕೆಲಸಗಳಿಗೆ ರೂ. ೮ ರಿಂದ ೯ ಕೋಟಿ ಹಣ ನೀಡುತ್ತಿದೆ.
ಸೊರಬದಲ್ಲಿ ಶೀಘ್ರದಲ್ಲೇ ಜೆಜೆಎಂ‌ ಯೋಜನೆಯಡಿ ಶರಾವತಿ‌ ನದಿಯಿಂದ ೨೪ ತಾಸು ಕುಡಿಯುವ ನೀರು ಒದಗಿಸಲಾಗುವುದು.
೯೬೦ ಕೋಟಿ ಕೆರೆ ತುಂಬಿಸುವ ಯೋಜನೆಯನ್ನೂ ಶೀಘ್ರದಲ್ಲೇ ಅನುಷ್ಟಾನಗೊಳಿಸಲಾಗುವುದು. ಜಿಲ್ಲೆಯಲ್ಲಿ‌ಅಭಿವೃದ್ಧಿ ಕೆಲಸಗಳು ಭರದಿಂದ ಸಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಭೋವಿ ಅಭಿವೃದ್ದಿ‌‌ ನಿಗಮದ ಅಧ್ಯಕ್ಷ ರವಿಕಯಮಾರ್ ‌ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು, ಅನೇಕ ಯೋಜನೆಗಳು‌ ಮತ್ತು ಕಾರ್ಯಕ್ರಮಗಳ‌ ಮೂಲಕ ವಿದ್ಯಾರ್ಥಿಗಳು, ಹಿಂದುಳಿದ ವರ್ಗಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್ ಮಾತನಾಡಿ, ಜಿಲ್ಲೆಯಲ್ಲಿ ಗೃಹಲಕ್ಷ್ಮಿ‌ಯೋಜನೆಯಡಿ ರೂ.7.60 ಕೋಟಿ ಪ್ರತಿ ತಿಂಗಳು ಸಂದಾಯವಾಗುತ್ತಿದೆ. ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಯು ಶೇ.85 ಸಾಧನೆ ಮಾಡಲಾಗಿದ್ದು, ಶೇ.100 ಸಾಧನೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಚಿವರು ಕಾರ್ಮಿಕ ಕಿಟ್, ಮೀನುಗಾರಿಕೆ ‌ಇಲಾಖೆ ಸಲಕರಣೆ ಕಿಟ್, ಹರಿಗೋಲು, ಮಕ್ಕಳಿಗೆ ಶಾಲಾ ಬ್ಯಾಗ್, ಪ.ಜಾತಿ, ಪ.ಪಂ ಗಳ ಫಲಾನುಭವಿಗಳಿಗೆ ಬೋರ್ ವೆಲ್ ಪಂಪ್ ಸೆಟ್ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಮುಖಂಡರು, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರ ತಾಲ್ಲೂಕು ಸಮಿತಿ ಪದಾಧಿಕಾರಿಗಳು, ಬಗರ್ ಹುಕುಂ ಸಮಿತಿ ಪದಾಧಿಕಾರಿಗಳು, ಅಧಿಕಾರಿಗಳು, ಫಲಾನುಭವಿಗಳು ಪಾಲ್ಗೊಂಡಿದ್ದರು.
ಕಾಮಗಾರಿಗಳ ವಿವರ:

  1. ಸೊರಬ ಪುರಸಭೆ ವ್ಯಾಪ್ತಿಯ ಸಂತೆ ಮೈದಾನ ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆ (ಅಂದಾಜು ಮೊತ್ತ: 500.00 ಲಕ್ಷಗಳು)
  2. ಸೊರಬ ಪುರಸಭೆ ವ್ಯಾಪ್ತಿಯ ಬಂಗಾರಪ್ಪ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆ (ಅಂದಾಜು ಮೊತ್ತ: 250.00 ಲಕ್ಷಗಳು)
  3. ಸೊರಬ ಪುರಸಭೆ ವ್ಯಾಪ್ತಿಯ ರಂಗನಾಥ ದೇವಸ್ಥಾನದ ಪಕ್ಕದಲ್ಲಿ ಗಾಂಧಿ ಪಾರ್ಕ್ ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆ (ಅಂದಾಜು ಮೊತ್ತ: 100.00 ಲಕ್ಷಗಳು)
  4. ಸೊರಬ ತಾಲ್ಲೂಕು ಗುಡುವಿ ಗ್ರಾಮದ ಬಳಿ ದಂಡಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯ ಉದ್ಘಾಟನೆ (ಗ್ರಾಮೀಣ ರಸ್ತೆ) (ಅಂದಾಜು ಮೊತ್ತ: 450.00 ಲಕ್ಷಗಳು)
  5. ಸೊರಬ ತಾಲ್ಲೂಕು ಸೊರಬ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್, ಕಾಲೇಜಿಗೆ ಎಐಸಿಟಿ ನಿಯಮ ಹೆಚ್ಚುವರಿ ಕೊಠಡಿ, ವರ್ಕಶಾಪ್ ಮತ್ತು ಪ್ರಯೋಗಾಲಯ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ (ಅಂದಾಜು ಮೊತ್ತ:400.00 ಲಕ್ಷಗಳು)
  6. ಸೊರಬ ತಾಲ್ಲೂಕು ಲಕ್ಕಾಪುರದಿಂದ ಅಂಕರವಳ್ಳಿ ಸೇರುವ ರಸ್ತೆ ರಾ.ಹೆ ಸಿ-22 ರಾ.ಹೆ 282 ಸರಪಳಿ: 28.40 ಕಿ.ಮೀ ನಲ್ಲಿ ಕೊರೆದ ಮೋರಿ ದುರಸ್ಥಿ ಕಾಮಗಾರಿಯ ಶಂಕುಸ್ಥಾಪನೆ (ಅಂದಾಜು ಮೊತ್ತ: 25.00 ಲಕ್ಷಗಳು)
  7. ಸೊರಬ ತಾಲ್ಲೂಕು ಹೆಜ್ಜೆ ಗ್ರಾಮ ಪಂಚಾಯಿತಿ ಸರ್ವೆ ನಂ.23 ರ ಪಕ್ಕ ಗೌರಿ ಹಳ್ಳಕ್ಕೆ ಸಂಪರ್ಕ ಕಲ್ಪಿಸುವ ಹಳ್ಳಕ್ಕೆ ಕಾಲುಸಂಕ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ (ಅಂದಾಜು ಮೊತ್ತ: 22.00 ಲಕ್ಷಗಳು)
  8. ಸೊರಬ ತಾಲ್ಲೂಕು ಭಟ್ಕಳ-ಸೊರಬ ರಾಜ್ಯ ಹೆದ್ದಾರಿ-50 ಸರಪಳಿ: 130.70 ಕಿ.ಮೀ. ಯಲ್ಲಿ ಮಳೆಯಿಂದ ಹಾನಿಯಾದ ರಸ್ತೆಗೆ ತಡೆಗೋಡೆ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ (ಅಂದಾಜು ಮೊತ್ತ: 30.00 ಲಕ್ಷಗಳು)
  9. ಸೊರಬ ತಾಲ್ಲೂಕು ಮಾವಲಿ-ಕಡಸೂರು ಜಿ.ಮು ರಸ್ತೆ ಸರಪಳಿ: 5.40 ಕಿ.ಮೀರಲ್ಲಿ ಡೆಕ್‌ಸ್ಟ್ರಾಬ್ ಮೋರಿ ಪುನರ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ (ಅಂದಾಜು ಮೊತ್ತ: 25.00 ಲಕ್ಷಗಳು)
  10. ಸೊರಬ ತಾಲ್ಲೂಕು ಸಿರ್ಸಿ-ಹೊಸನಗರ ರಾ.ಹೆ.-77 ರಸ್ತೆಯ ಸರಪಳಿ 42.65 ಕಿ.ಮೀ. ರಲ್ಲಿ ಬಾಕ್ಸ್ ಕಲ್ವರ್ಟ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ.
    (ಅಂದಾಜು ಮೊತ್ತ: 45.00 ಲಕ್ಷಗಳು)

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Idagunji Ganapathi Temple  ಇಡಗುಂಜಿ ಮೇಳಕ್ಕೆ”ಯುನೆಸ್ಕೊ” ಗೌರವ, ಕೆರೆಮನೆ ಶಿವಾನಂದ ಹೆಗಡೆಗೆ ಗೌರವಾರ್ಪಣೆ

Idagunji ganapathi temple  ಇಡಗುಂಜಿ ಅಂದರೆ ತಕ್ಷಣ ನಮಗೆ ನೆನಪಿಗೆ ನಿಂತ...

Kichcha Sudeep “ಉತ್ತಮ ನಟ” ಪ್ರಶಸ್ತಿಯನ್ನ ನಯವಾಗಿ ತಿರಸ್ಕರಿದ ಕಿಚ್ಚ ಸುದೀಪ್

Kichcha Sudeep ಕಿಚ್ಚ ಸುದೀಪ್‌ ಅವರ " ಪೈಲ್ವಾನ್" ಸಿನಿಮಾದಲ್ಲಿನ ಅಭಿನಯಕ್ಕಾಗಿ...

CM Siddharamaiah ಬಿಜೆಪಿ‌ ನೇತೃತ್ವದ ಕೇಂದ್ರ ಸರ್ಕಾರವು ಭದ್ರಾ ಯೋಜನೆಗೆ ₹5,300 ಕೋಟಿ ಬಿಡುಗಡೆ ಮಾಡಲಿ- ಸಿದ್ಧರಾಮಯ್ಯ

CM Siddharamaiah ನೀರಾವರಿಗೆ ನಮ್ಮ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು, 1,274...