Rotary Club Shivamogga ದಾನಗಳು ಎಂದು ವಿಫಲವಾಗುವುದಿಲ್ಲ ಮತ್ತು ದಾನ ನಿಸ್ವಾರ್ಥವಾಗಿರುತ್ತದೆ. ದಾನ ಮತ್ತು ಧರ್ಮ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿದೆ, ನೀವು ಯಾವುದೇ ವಸ್ತುವನ್ನು ದಾನವಾಗಿ ನೀಡುವುದರಿಂದ ಸಮಾಜದಲ್ಲಿ ಏಕತೆ ಮತ್ತು ಶಕ್ತಿ ಹೆಚ್ಚುತದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್.ಜಿ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಏರ್ಪಡಿಸಿದ್ದ ವಸ್ತ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ದಾನ ಮಾಡುವುದರಿಂದ ಆತ್ಮದ ಶುದ್ಧೀಕರಣ ಮತ್ತು ಸಂತೋಷ ಪಡೆಯಬಹುದು. ರಾಜು ಅವರು ಎರಡನೇ ಬಾರಿಗೆ ವಸ್ತ್ರದಾನ ಮಾಡುತ್ತಿದ್ದಾರೆ. ಕೈಗೆ ದಾನವೇ ಭೂಷಣ. ನಿರೀಕ್ಷೆ ಇಲ್ಲದೆ ಕೊಡುವುದು ಆರಾಧನೆ ಎಂದು ತಿಳಿಸಿದರು.
Rotary Club Shivamogga ವಸ್ತ್ರದಾನಕ್ಕೆ ತೂಕ ಮತ್ತು ಮಾಪನ ಇಲಾಖೆಯ ನಿರ್ದೇಶಕ ರಾಜು ಅವರು ನೆರವು ನೀಡಿದ್ದು, ರಾಜು ಅವರಂತಹ ದಾನಿಗಳು ಸಮಾಜದಲ್ಲಿ ಹೆಚ್ಚು ಹೆಚ್ಚು ಮುಂದೆ ಬರಬೇಕು. ರಾಜು ಅವರು ಮಾಡುತ್ತಿರುವ ಮಹತ್ಕಾರ್ಯ ಬೇರೆಯವರಿಗೆ ಸ್ಪೂರ್ತಿಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಜನರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ಸೇವಾಕಾರ್ಯಕ್ಕೆ ನೆರವು ನೀಡಿದ ರಾಜು ಮಾತನಾಡಿ, ದಾನ ಮಾಡುವುದರಿಂದ ಆತ್ಮ ತೃಪ್ತಿ ಸಿಗುತ್ತದೆ. ದಾನವನ್ನು ಯಾವುದೇ ಪ್ರತಿಫಲಕ್ಷೆ ಇಲ್ಲದೆ ನೀಡಬೇಕು. ಮುಂದಿನ ದಿನಗಳಲ್ಲಿ ರೋಟರಿ ಸಂಸ್ಥೆಯೊಂದಿಗೆ ಇನ್ನು ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯಕ್ರಮ ಮಾಡಬೇಕು ಎಂಬ ಮಹಾದಾಸೆ ಇದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಬಿ.ವಿ.ಈಶ್ವರ್, ಮಾಜಿ ಅಧ್ಯಕ್ಷ ರಮೇಶ್ ಎನ್ ಮತ್ತು ಕ್ಲಬ್ ಸದಸ್ಯರು ಉಪಸಿತರಿದ್ದರು.
Rotary Club Shivamogga ನಿಸ್ವಾರ್ಥದಿಂದ ಮಾಡಿದ ದಾನ ವ್ಯರ್ಥವಾಗುವುದಿಲ್ಲ- ಜಿ.ಕಿರಣ್ ಕುಮಾರ್
Date: