D.S. Arun ಮಲೆನಾಡ ಗಿಡ್ಡ ಗೋ ತಳಿ ಸಂಶೋಧನೆಯನ್ನು ಪ್ರೋತ್ಸಾಹಿಸಲು ಡಿ.ಎಸ್.ಅರುಣ್ ರವರ ಒತ್ತಾಯಿಸಿದರು.
ಮಾನ್ಯ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್.ಅರುಣ್ ರವರು ಬೆಳಗಾವಿಯ ಚಳಿಗಾಲದ ವಿಧಾನ ಪರಿಷತ್ ಅಧಿವೇಶನದಲ್ಲಿ, ಪಶು ವರ್ಗದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಮಲೆನಾಡು ಗಿಡ್ಡ ತಳಿಯ ಬಗ್ಗೆ ಅಧ್ಯಯನ ಕೈಗೊಳ್ಳಲು ಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯ ಆವರಣದಲ್ಲಿ ಸ್ಥಾಪಿಸಿದ ಮಲೆನಾಡು ಗಿಡ್ಡ ತಳಿ ಸಂಶೋಧನೆ ಹಾಗೂ ಮಾಹಿತಿ ಕೇಂದ್ರವನ್ನು ಪುನಹ ಪ್ರಾರಂಭಿಸಲು ಮಾನ್ಯ ಪಶು ಸಂಗೋಪನ ಸಚಿವರನ್ನು ಒತ್ತಾಯಿಸಿದರು.
D.S. Arun ಮಲೆನಾಡು ಗಿಡ್ಡ ಗೋವು ತಳಿ ಭೌಗೋಳಿಕ ಮಾನ್ಯತೆ ಹೊಂದಿದ್ದು, ಪ್ರಮುಖವಾಗಿ ಮಲೆನಾಡಿನ ಶಿವಮೊಗ್ಗ,ಚಿಕ್ಕಮಗಳೂರು ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಈ ತಳಿ ಹೇರಳವಾಗಿ ಕಂಡುಬರುವಂತಾಗಿದೆ ಎಂದು ಉಲ್ಲೇಖಿಸಿ,ಈ ತಳಿಯ ಹಾಲಿನಲ್ಲಿ ಎ-2 ಕೆಸಿನ್ ಅಧಿಕವಿದ್ದು ಜಗತ್ತಿನಲ್ಲಿ ಕಡಿಮೆ ಕೊಲೆಸ್ಟ್ರಾಲ್ ಅಂಶ ಹೊಂದಿರುವುದು ದೃಢಪಟ್ಟಿರುತ್ತದೆ ಎಂದು ತಿಳಿಸಿದರು.
ಮಲೆನಾಡು ಗಿಡ್ಡ ತಳಿಯ ಹಾಲು ಮತ್ತು ಅದರ ಉತ್ಪನ್ನಗಳಿಗೆ ಬೇಡಿಕೆ ಇದ್ದು, ಹಾಲಿನಲ್ಲಿರುವ ಔಷಧೀಯ ಗುಣದ ಬಗ್ಗೆ ಹಾಗೂ ರೋಗ ನಿರೋಧಕ ಶಕ್ತಿಯ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ಸಲುವಾಗಿ ಮಳೆನಾಡು ಗಿಡ್ಡೆತಳಿ ಸಂಶೋಧನೆಗೆ ಅನುಕೂಲವಾಗುವಂತೆ ಮಾಹಿತಿ ಕೇಂದ್ರವನ್ನು ಪುನರಾರಂಭಿಸಬೇಕು, ಸಂಶೋಧನೆಗೆ ಸರ್ಕಾರ ಹೆಚ್ಚಿನ ಒತ್ತುಕೊಟ್ಟು ಅಗತ್ಯವಿರುವ ಅನುದಾನವನ್ನು ಸಹ ಬಿಡುಗಡೆ ಮಾಡಬೇಕೆಂದು ಡಿ.ಎಸ್.ಅರುಣ್ ರವರು ಮಾನ್ಯ ಪಶುಸಂಗೋಪನ ಸಚಿವರನ್ನು ಶೂನ್ಯ ವೇಳೆಯಲ್ಲಿ ಒತ್ತಾಯಿಸಿದರು.