S.N. Channabasappa ಶಾಲಾ ವಾರ್ಷಿಕೋತ್ಸವಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಅಭಿವ್ಯಕ್ತಗೊಳಿಸಲು ಉತ್ತಮ ವೇದಿಕೆಯಾಗಿದ್ದು, ರೋಟರಿ ಪೂರ್ವದ, ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ (ರಿ.,), ಇದು ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳಲ್ಲಿ ಸಮಷ್ಠಿ ವ್ಯಕ್ತಿತ್ವವನ್ನು ಬೆಳೆಸಲು ಎಲ್ಲಾ ವಿಧಗಳ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ನಡೆಸಿ ವಿಜೇತರಾದವರಿಗೆ ಬಹುಮಾನ ನೀಡುವುದರ ಜೊತೆಗೆ ಈ ದಿನ ನಡೆದ ಅಂಬೇಡ್ಕರ್ ಭವನದ ಮಹಾ ವೇದಿಕೆಯಲ್ಲಿ ಅವುಗಳನ್ನು ಎಲ್ಲಾ ಪೋಷಕರ ಮುಂದೆ ಅಭಿವ್ಯಕ್ತಗೊಳಿಸಿ ಅವರಿಗೆ ತಮ್ಮ ಮಕ್ಕಳು ಶಾಲೆಯಲ್ಲಿ ಕಲಿಕೆ & ಸಹಪಠ್ಯ ಚಟುವಟಿಕೆಗಳ ಪ್ರಗತಿಯನ್ನು ವೀಕ್ಷೀಸಲು ಅವಕಾಶ ಮಾಡಿಕೊಟ್ಟಿರುವುದು ಪ್ರಶಂಸನೀಯ ಸಂಗತಿ. ಇದರ ಜೊತೆಗೆ ರೋಟರಿ ಟ್ರಸ್ಟ್ ರಾಜೀವ್‌ಗಾಂಧಿ ನಗರದಲ್ಲಿರುವ ಚಿತಾಗಾರವನ್ನು ಕಳೆದ ಹಲವಾರು ವರ್ಷಗಳಿಂದ, ಅತ್ಯಂತ ಸಮರ್ಥವಾಗಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶಿವಮೊಗ್ಗ ನಗರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ ಇವರು ಅಭಿಪ್ರಾಯ ಪಡುತ್ತಾ, ರೋಟರಿ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಪದಾಧಿಕಾರಿಗಳ ಸೇವೆಯನ್ನು ಶ್ಲಾಘೀಸಿದರು.
ಅವರು ಇಂದು ರೋಟರಿ ಪೂರ್ವ ಆಂಗ್ಲ ಪ್ರಾಥಮಿಕ & ಪ್ರೌಢ ಶಾಲೆಗಳ ಕ್ರೀಡಾ & ಸಾಂಸ್ಕೃತಿಕ ವೈಭವಗಳ ಪ್ರದರ್ಶನ ಹಾಗೂ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
S.N. Channabasappa ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿವಮೊಗ್ಗ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ರಮೇಶ್, ಕೆ.ಇ.ಎಸ್., ಇವರು ಮಾತನಾಡುತ್ತಾ, ರೋಟರಿ ಪೂರ್ವ ಆಂಗ್ಲ ಶಾಲೆಯು ಏಪ್ರಿಲ್ ೨೪ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ಪಡೆಯುವುದರ ಜೊತೆಗೆ ಉತ್ತಮ ಶೈಕ್ಷಣಿಕ ಅರ್ಹತೆಯುಳ್ಳ ಅನುಭವಿ ಶಿಕ್ಷಕರನ್ನು ನೇಮಿಸಿಕೊಂಡು ನಗರದ ಇತರ ಯಾವ ಶಾಲೆಗಳಿಗೂ ಕಡಿಮೆ ಇಲ್ಲದ ರೀತಿಯಲಿ,್ಲ ಕ್ರೀಡಾ ಹಾಗೂ ಸಾಂಸ್ಕೃತಿಕ ವೈಭವಗಳನ್ನು ಅಭಿವ್ಯಕ್ತಗೊಳಿಸುತ್ತಿರುವುದು ಅಭಿನಂದನೀಯ ಸಂಗತಿ ಎನ್ನುತ್ತಾ, ಶಿಕ್ಷಣ ಇಲಾಖೆಯಲ್ಲಿ ಅತ್ಯುನ್ನತ ಹುದ್ದೆಯಲ್ಲಿದ್ದು, ತಮಗೆ ಸದಾ ಮಾರ್ಗದರ್ಶನ ನೀಡಿ ಸಮರ್ಥ ಅಧಿಕಾರಿಯಾಗಲು ತನ್ನನ್ನು ರೂಪಿಸಿದ ನಿವೃತ್ತ ಡಿ.ಪಿ.ಐ. ಶ್ರೀ ಚಂದ್ರಶೇಖರಯ್ಯ ಎಂ., ಇವರ ಹಾಗೂ ನಗರದ ಅನೇಕ ಪ್ರತಿಷ್ಠಿತ ವ್ಯಕ್ತಿಗಳ ಸೇವೆಯು ಈ ಶಾಲೆಯ ನಿರ್ವಹಣೆಗೆ ದೊರೆಯುತ್ತಿರುವುದು ಅಭಿನಂದನೀಯ ಸಂಗತಿ ಎಂದರು.
ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಫರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ಪ್ರಾಯೋಜಿಸುವುದರ ಜೊತೆಗೆ ಅವುಗಳನ್ನು ವಿತರಣೆ ಮಾಡಿ ಮಾತನಾಡಿದ ಎ.ಪಿ.ಎಂ.ಸಿ. ಯಾರ್ಡ್ನ ಚಿದಂಬರ್ ಅಂಡ್ ಕೋ. ಅಡಿಕೆ ಮಂಡಿಯ ವರ್ತಕರಾದ ಹಾಗೂ ಟ್ರಸ್ಟಿಗಳಾದ ರೊ. ಎಂ.ಸಿ. ಹೇಮಂತ್ ಇವರು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅದೃಷ್ಟವಂತರಾಗಿದ್ದು, (ಶಿಕ್ಷಕರ ವೈಯಕ್ತಿಕ ಗಮನ ದೊರೆಯುತ್ತಿರುವುದರಿಂದ) ವಿದ್ಯಾರ್ಥಿಗಳು ದಿ. ರತನ್ ಟಾಟಾ ಅವರಂತೆ ತಮ್ಮ ಜೀವನದುದ್ದಕ್ಕೂ ಕಲಿಕೆಯಲ್ಲಿ ತೊಡಗಿಕೊಂಡು ಮುಂದೆ ಅವರಂತೆಯೇ ಸಮಾಜದ ಆಸ್ತಿಯಾಗಬೇಕೆಂದು ಕರೆಕೊಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಡಿ.ಪಿ.ಐ. ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ರೊ. ಚಂದ್ರಶೇಖರಯ್ಯ ಎಂ. ಇವರು, ರೋಟರಿ ಆಂಗ್ಲ ಶಾಲೆಯಲ್ಲಿ ನೇಮಕಗೊಂಡಿರುವ ಎಲ್ಲಾ ಶಿಕ್ಷಕರು ಸ್ನಾತಕೋತ್ತರ ಪದವೀಧರರಾಗುವುದರ ಜೊತೆಗೆ ಬಿ.ಎಡ್., ಪದವಿಯನ್ನು ಪಡೆದಿದ್ದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದಾರೆ. ಹಾಗಾಗಿ ಶಿಕ್ಷಕರು ತಮ್ಮ ಮಕ್ಕಳಿಗೆ ಮನೆಯಲ್ಲಿ ಉತ್ತಮ ವಾತಾವರಣವನ್ನು ಕಲ್ಪಿಸಿಕೊಟ್ಟು ತಮ್ಮ ವೈಯಕ್ತಿಕ ಜೀವನದ ಉದಾಹರಣೆ ಹಾಗೂ ನಡವಳಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಿ, ಆಗಿಂದ್ದಾಗ್ಗೆ ಶಿಕ್ಷಕರ ಸಂಪರ್ಕವನ್ನಿಟ್ಟುಕೊAಡು ಮಕ್ಕಳ ಶಿಕ್ಷಣದಲ್ಲಿ ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸಬೇಕೆಂದು ಕರೆಕೊಟ್ಟರು. ಈ ಶಾಲೆಯನ್ನು ಇಷ್ಟು ಉತ್ತಮ ರೀತಿಯಲ್ಲಿ ನಡೆಸುವಲ್ಲಿ ಸಹಕರಿಸುತ್ತಿರುವ ಆಡಳಿತ ಮಂಡಳಿಯ ಪದಾಧಿಕಾರಿಗಳ, ಟ್ರಸ್ಟಿಗಳ, ಪ್ರಾಂಶುಪಾಲರ ಹಾಗೂ ಶಿಕ್ಷಕರ ಸೇವೆಯನ್ನು ಶ್ಲಾಘೀಸಿದರು.
ಸಮಾರಂಭದಲ್ಲಿ ಇನ್ನೋರ್ವ ಮುಖ್ಯ ಅತಿಥಿಯಾದ ರೋಟರಿ ಪೂರ್ವದ ಅಧ್ಯಕ್ಷರಾದ ರೊ. ಅರುಣ್ ಎಸ್. ದೀಕ್ಷಿತ್, ಅತಿಥಿಗಳಾದ ಟ್ರಸ್ಟ್ನ ಉಪಾಧ್ಯಕ್ಷ ರೊ. ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್, ಕಾರ್ಯದರ್ಶಿ ರೊ. ರಾಮಚಂದ್ರ ಎಸ್.ಸಿ. ಇವರು ಪೋಷಕರ ಪಾತ್ರವನ್ನು ಉದ್ದೇಶಿಸಿ ಮಾತನಾಡಿದರು.
ಸಮಾರಂಭದಲ್ಲಿ ಟ್ರಸ್ಟ್ನ ಉಪಾಧ್ಯಕ್ಷ ರೊ. ಸುರೇಶ್ ಕುಮಾರ್ ಬಿ., ಖಜಾಂಚಿ ರೊ. ವಿಜಯ್ ಕುಮಾರ್ ಜಿ., ಜಂಟಿ ಕಾರ್ಯದರ್ಶಿ ರೊ ನಾಗವೇಣಿ ಎಸ್.ಆರ್., ಪೇಟ್ರನ್ ಟ್ರಸ್ಟಿ ಡಾ. ಕಡಿದಾಳ್ ಗೋಪಾಲ್, ಬೋರ್ಡ್ ಆಫ್ ಟ್ರಸ್ಟಿಗಳಾದ ರೊ. ರವಿಶಂಕರ್ ಕೆ.ಬಿ., ರೊ. ಪ್ರವೀಶ್ ಡಿ., ಟ್ರಸ್ಟಿಗಳಾದ ರೊ. ಸೂರ್ಯನಾರಾಯಣ್ ಹೆಚ್.ಎಸ್., ರೊ. ಆದಿಮೂರ್ತಿ ಹೆಚ್.ಬಿ., ರೊ. ಮಂಜುನಾಥ್ ಎನ್.ಬಿ. ಇವರುಗಳು ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಸೂರ್ಯನಾರಾಯಣ್ ಆರ್., ಇವರು ವರದಿ ವಾಚಿಸಿದರು. ಸಮಾರಂಭದ ನಂತರ ವಿವಿಧ ಶಿಕ್ಷಕರ ಮಾರ್ಗದರ್ಶನದಲ್ಲಿ ಮೂಡಿಬಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು, ಸಮಾರಂಭದ ಅಂತ್ಯದವರೆಗೂ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದವು.
S.N. Channabasappa ಮಕ್ಕಳಲ್ಲಿ ಸಮಷ್ಠಿ ವ್ಯಕ್ತಿತ್ವ ಬೆಳೆಸಲು ಸಾಂಸ್ಕೃತಿಕ,ಕ್ರೀಡಾ ಚಟುವಟಿಕೆಗಳು ಸಹಕಾರಿ- ಶಾಸಕ ‘ಚೆನ್ನಿ’
Date: