Darshan Bail ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣ ವಿಚಾರಣೆ ಹೈಕೋರ್ಟಿನಲ್ಲಿ ನಡೆಯುತ್ತಿದೆ. ನಡುವೆ ಬೆನ್ನು ನೋವಿನ ಬಗ್ಗೆ ಆಪರೇಷನ್ ಸಂಬಂಧಿತ ಮನವಿ ಮೇರೆಗೆ ಆರುವಾರಗಳ ಬೈಲ್ ಸಿಕ್ಕಿತ್ತು. ಆದರೆ ನಟ ದರ್ಶನ್ ಆಪರೇಷನ್ ಗೆ ಒಳಗಾಗಿರಲಿಲ್ಲ. ಪೊಲೀಸ್ ಇಲಾಖೆ ಬೈಲ್ ರದ್ದು ಪಡಿಸಲು ಮೇಲ್ಮನವಿ ಸಲ್ಲಿಸಿತ್ತು.
ಈಗ ವೈದ್ಯಕೀಯ ಶಿಫಾರಸಿನ ಮೇರೆ ಅವರಿಗೆ ಮತ್ತೆ ಬೈಲ್
ಸಿಕ್ಕಿದೆ.
Darshan Bail ದರ್ಶನ್, ಪವಿತ್ರ ಗೌಡ, ಅನು ಕುಮಾರ್ ಅಲಿಯಾಸ್ ಅನು, ಲಕ್ಷ್ಮಣ್ ಎಂ, ಜಗದೀಶ್,ನಾಗರಾಜು ಆರ್, ಪ್ರದೂಷ್ ಎಸ್ ರಾವ್, ಮತ್ತು ಅಲಿಯಾಸ್ ಜಗ್ಗ, ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆ ನಡೆಸಿದೆ.ಹೈಕೋರ್ಟ್ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿಂದ ಆದೇಶ ಹೊರಬಿದ್ದಿದೆ.
ಗಮನಾರ್ಹವೆಂದರೆ ಇದು ಸಾಮಾನ್ಯ ಸ್ವರೂಪದ ಬೈಲ್ ಆಗಿದೆ. ಹಿಂದಿನ ಬೈಲ್ ನೀಡಿದ ಆದೇಶದಲ್ಲಿ ಆಪರೇಷನ್ ಗೋಸ್ಕರ ಆರುವಾರಗಳ ಷರತ್ತುಬದ್ಧ ಬೈಲ್ ನೀಡಲಾಗಿತ್ತು.