Karnataka State Consumer Disputes Redressal Commission ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಶಿವರಾಮ್ ಎಂ.ಎಸ್. ಎಂಬುವವರು ಇಫ್ಕೋ ಟೋಕಿಯೋ ಜನರಲ್ ಇನ್ಷೂರೆನ್ಸ್ ಕಂಪನಿ ಲಿ., ನವದೆಹಲಿ ಮತ್ತು ಮಂಗಳೂರು ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಹಾರ ನೀಡಲು ಆದೇಶಿಸಿದೆ.
ಶಿವರಾಮ್ ಎಂ.ಎಸ್. ಎಂಬುವವರು ಭದ್ರಾವತಿಯ ಸುಪ್ರಿಂ ಆಟೋ ಡಿಲರ್ಸ್ ಪ್ರೈ. ಲಿ. ಮೂಲಕ ತಮ್ಮ ಉದ್ದಯೋಗಿಗಳಿಗೆ ಹಾಗೂ ಅವರ ಕುಟುಂಬದವರಿಗೆ ಎದುರುದಾರ ಕಂಪನಿಯ ಗ್ರೂಪ್ ಮೆಡಿಶೀಲ್ಡ್ ಇನ್ಷೂರೆನ್ಸ್ ಪಾಲಿಸಿ ಪಡೆದಿದ್ದು, ಈ ಪಾಲಿಸಿದಾರರಾದ ದೂರದಾರರ ಮಗನಿಗೆ ನಗರದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಒಳರೋಗಿಯಾಗಿ ದಾಖಲಾಗಿ ಕ್ಯಾಶ್‌ಲೆಸ್ ಚಿಕಿತ್ಸೆಯನ್ನು ಪಡೆದಿರುತ್ತಾರೆ. ಈ ಸಂಬAಧ ಎಲ್ಲಾ ದಾಖಲೆಗಳನ್ನು ನೀಡಿ ರೂ. 1,23,949/- ಗಳ ವೈದ್ಯಕೀಯ ವೆಚ್ಚದ ಬಿಲ್‌ನ್ನು ಮರುಪಾವತಿಗಾಗಿ ಕಂಪನಿಗೆ ನೀಡಿರುತ್ತಾರೆ. ಆದರೆ ಕಂಪನಿಯವರು ರೂ. 50000/- ಗಳವರೆಗೆ ನಗದುರಹಿತ ಚಿಕಿತ್ಸೆಗೆ ಅನುಮತಿ ನೀಡಿ, ನಂತರದಲ್ಲಿ ಉಳಿದ ವಿಮಾ ಹಣ ಮರುಪಾವತಿಸಲು ನಿರಾಕರಿಸಿರುತ್ತಾರೆ ಎಂದು ಆಯೋಗಕ್ಕೆ ದೂರು ನೀಡಿರುತ್ತಾರೆ.
ಈ ಪ್ರಕರಣವನ್ನು ಆಯೋಗವು ನೊಂದಣಿ ಮಾಡಿಕೊಂಡು ವಿಮಾ ಕಂಪನಿಗೆ ನೋಟಿಸ್ ಕಳುಹಿಸಿ ದೂರಿನ ಬಗ್ಗೆ ತಕರಾರು ಇದ್ದಲ್ಲಿ ಖುದ್ದು ಅಥವಾ ವಕೀಲರ ಮೂಲಕ ಸಲ್ಲಿಸುವಂತೆ ಸೂಚಿಸಲಾಗಿತ್ತು. ವಿಮಾ ಕಂಪನಿಯು ದೂರುದಾರ ನೀಡಿರುವ ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳು ಸಮರ್ಪಕವಾಗಿಲ್ಲ ಎಂದು ಕ್ಲೇಮ್‌ನ್ನು ತಿರಸ್ಕರಿಸಿದ್ದು, ಸೇವಾ ನ್ಯೂನತೆಯಾಗಿರುವುದಿಲ್ಲ. ಕಾರಣ ದೂರನ್ನು ವಜಾ ಮಾಡಲು ಕೋರಿರುತ್ತಾರೆ.
Karnataka State Consumer Disputes Redressal Commission ಆದರೆ ಆಯೋಗವು ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ, ಮತ್ತು ವಕೀಲರ ವಾದಗಳನ್ನು ಆಲಿಸಿ, ಪ್ರಮುಖವಾಗಿ ಆಟೋ ಅಪ್ರುವಲ್ ಲೆಟರ್, ಆಟೋ ಡಿನೈಯಲ್ ಲೆಟರ್, ಸ.ನಾ.ಸೂ.ಸ್ಪೆಷಾಲಿಟಿ ಆಸ್ಪತ್ರೆಯವರ ಡಿಸ್‌ಚಾರ್ಚ್ ಸಮ್ಮರಿ ಮತ್ತು ಮೆಡಿಕಲ್ ಬಿಲ್ ಹಾಗೂ ಪಾಲಿಸಿ ಷರತ್ತುಗಳು ಸರಿಯಾಗಿದ್ದು, ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯಲಾಗಿದೆ. ಎದುರುದಾರ ಕಂಪನಿಯು ಅಪಾದಿಸಿರುವ ಕಾರಣಕ್ಕೆ ಯಾವುದೇ ಪೂರಕವಾದ ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲವೆಂದು, ಕಂಪನಿಯು ಇಲ್ಲಸಲ್ಲದ ಕಾರಣಗಳನ್ನು ಹೇಳಿ ಮುಂದೂಡುತ್ತಾ ಬಂದಿರುವುದು ಸೇವಾ ನ್ಯೂನ್ಯತೆಯಾಗಿರುತ್ತದೆಂದು ಫರ‍್ಯಾದನ್ನು ಭಾಗಶಃ ಪುರಸ್ಕರಿಸಿ ಇನ್ಸೂರೆನ್ಸ್ ಕಂಪನಿಯು ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಎಂದು ತೀರ್ಮಾನಿಸಿದೆ.
ಆದ್ದರಿಂದ ಅರ್ಜಿದಾರರಿಗೆ ವೈದ್ಯಕೀಯ ವೆಚ್ಚದ ಮೊತ್ತ ರೂ. 1,23,949/-ಗಳನ್ನು (ವೈದ್ಯಕೀಯ ಬಿಲ್‌ಗಳ ಪ್ರಕಾರ) ವಿಮಾ ಕಂಪನಿಯು ಅರ್ಜಿಯನ್ನು ತಿರಸ್ಕರಿಸಿದ ದಿನಾಂಕದಿಂದ ವಾರ್ಷಿಕ ಶೇ.9% ರ ಬಡ್ಡಿಯೊಂದಿಗೆ ಈ ಆದೇಶವಾದ 45 ದಿನಗಳೊಳಗೆ ಪಾವತಿಸುವಂತೆ, ತಪ್ಪಿದ್ದಲ್ಲಿ ಈ ಆದೇಶದ ದಿನಾಂಕದಿಂದ ವಾರ್ಷಿಕ ಶೇ 12% ರ ಬಡ್ಡಿಯನ್ನು ಪೂರಾ ಹಣ ನೀಡುವವರೆಗೂ ಪಾವತಿಸಲು ಹಾಗೂ ಎದುರುದಾರರ ಸೇವಾ ನ್ಯೂನ್ಯತೆಯಿಂದ ಫರ‍್ಯಾದಿದಾರರಿಗೆ ಉಂಟಾದ ಮಾನಸಿಕ ವ್ಯಥೆಗೆ ರೂ. 20,000/-ಗಳನ್ನು ಹಾಗೂ ರೂ. 10,000/- ಗಳನ್ನು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು ಎಂದು ನೀಡಬೇಕೆಂದು ನಿರ್ದೇಶಿಸಿ, ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಶ್ರೀ ಟಿ.ಶಿವಣ್ಣ, ಮಹಿಳಾ ಸದಸ್ಯರಾದ ಶ್ರೀಮತಿ ಸವಿತಾ ಬಿ. ಪಟ್ಟಣಶೆಟ್ಟಿ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಡಿ.03 ರಂದು ಆದೇಶಿಸಿದೆ.
Karnataka State Consumer Disputes Redressal Commission ವಿಮಾ ಕಂಪನಿ ಸೇವಾ ನ್ಯೂನತೆ ಹಿನ್ನೆಲೆ ಗ್ರಾಹಕರಿಗೆ ಪೂರ್ಣ ವೆಚ್ಚ ಭರಿಸಲು ಕಂಪನಿಗೆ ಆದೇಶ
Date: