Kumsi Police ನ.23 ರಂದು ಆಯನೂರು ಬಳಿಯ ವೀರಣ್ಣನ ಬೆನವಳ್ಳಿ ಕ್ರಾಸ್ ಬಳಿ ಬೈಕ್ ಚಾಲಕನೊಬ್ಬ ನಿರ್ಲಕ್ಷ್ಯದಿಂದ ಸುಮಾರು 35 ವರ್ಷದ ಅನಾಮಧೇಯ ವ್ಯಕ್ತಿಗೆ ಡಿಕ್ಕಿ ಹೊಡೆಸಿ ಅಪಘಾತ ಮಾಡಿದ ಕಾರಣ, ವ್ಯಕ್ತಿಯನ್ನು ಸಾರ್ವಜನಿಕರ ಸಹಾಯದಿಂದ ಅಂಬುಲೆನ್ಸ್ನಲ್ಲಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಡಿ.04 ರಂದು ಮೃತಪಟ್ಟಿರುತ್ತಾರೆ.
Kumsi Police ಮೃತ ವ್ಯಕ್ತಿಯು 5.5 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ ಮತ್ತು ಕನ್ನಡ ಮಾತನಾಡುತ್ತಾರೆ. ಈ ವ್ಯಕತಿಯ ವಾರಸುದಾರರು ಯಾರಾದರು ಇದ್ದಲ್ಲಿ ಕುಂಸಿ ಪೊಲೀಸ್ ಠಾಣೆ ಮೊ.ನಂ 9480803351 ಸಂಪರ್ಕಿಸಿ ಮಾಹಿತಿ ನೀಡುವಂತೆ ಕುಂಸಿ ಪೊಲೀಸ್ ಠಾಣೆ ಪಿ.ಐ ತಿಳಿಸಿದ್ದಾರೆ.
Kumsi Police ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಬಗ್ಗೆ ಕುಂಸಿ ಪೊಲೀಸ್ ಠಾಣೆಯ ಮಾಹಿತಿ
Date: