Kuvempu University ದಲಿತ ಸಮುದಾಯದ ಮಕ್ಕಳ ಎಳೆ ಮನಸ್ಸಿನಲ್ಲಿ ಸನಾತನ ಧರ್ಮದ ವಿಷ ಬೀಜ ಬಿತ್ತುವ ಮುನ್ನ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಚಿಂತನೆಗಳನ್ನು ಬಿತ್ತಿ ಎಂದು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರೊಫೆಸರ್ ಡಾ. ಸಣ್ಣ ರಾಮ ರವರು ಹೇಳಿದರು.
ಶಿವಮೊಗ್ಗ ನಗರದ ಬಿ. ಎಚ್ .ರಸ್ತೆಯಲ್ಲಿರುವ ಪ್ರೊ ಬಿ ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೇಂದ್ರ ಕಾರ್ಯಾಲಯದಲ್ಲಿ ನಡೆದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ೬೮ನೇ ಮಹಾ ಪರಿನಿರ್ವಹಣಾ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಲಿತರು ರಾಷ್ಟ್ರಪತಿ ಕುರ್ಚಿಯಲ್ಲಿ ಕೂರಬಹುದು ಅದಕ್ಕೆ ಕಾರಣ ಸಂವಿಧಾನ.ಅದೇ ದಲಿತರು ದೇವಸ್ಥಾನದ ಒಳಗೆ ಹೋಗುವುದಕ್ಕೆ ಆಗುವುದಿಲ್ಲ ಅದೇ ಹಿಂದುತ್ವ ಎಂದು ಹೇಳಿದರಲ್ಲದೆ ದಲಿತರು ಬದಲಾಗದಿದ್ದರೆ ಸಂವಿಧಾನ ಬದಲಾಗುತ್ತದೆ ಸಂವಿಧಾನ ಹೊರತುಪಡಿಸಿ ನಮ್ಮನ್ನು ರಕ್ಷಿಸುವ ಯಾವ ಶಕ್ತಿಯು ದೇಶದಲ್ಲಿ ಇಲ್ಲ ಎಂದು ಡಾ ಸಣ್ಣರಾಮ ರವರು ಹೇಳಿದರು.
Kuvempu University ವೇದಿಕೆಯಲ್ಲಿ ಶಿವಬಸಪ್ಪ ನಿವೃತ್ತ ಪ್ರಾಂಶುಪಾಲರು ಭದ್ರಾವತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಎಂ ಏಳು ಕೋಟಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಬೊಮ್ಮನಕಟ್ಟೆ ಕೃಷ್ಣ, ಮಾಜಿ ಜಿಲ್ಲಾ ಸಂಚಾಲಕರಾದ ಎ ಅರ್ಜುನ್, ನಗರ ಸಂಚಾಲಕರಾದ ಹರಿಗೆ ರವಿ, ಭದ್ರಾವತಿ ರಾಜಶೇಖರ್, ನಲ್ಲೂರು ಶಿವು ಮೊದಲಾದವರು ಉಪಸ್ಥಿತರಿದ್ದರು ಸಭೆಯ ಅಧ್ಯಕ್ಷತೆಯನ್ನು ಪ್ರೊ. ಬಿ ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಶಿವಮೊಗ್ಗ ರವರು ವಹಿಸಿದ್ದರು.