International Day of Persons with Disabilities ಪರಿಶ್ರಮ, ತಾಳ್ಮೆ, ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂದು ವಿದುಷಿ ಮಾನಸ ಶಿವರಾಮಕೃಷ್ಣ ಹೇಳಿದರು.
ಅಶೋಕ ನಗರದಲ್ಲಿರುವ ಯೋಗ ಮಂದಿರದಲ್ಲಿ ಭಾವಗಾನ ಸಂಸ್ಥೆಯಿಂದ ಆಯೋಜಿಸಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಶಾಸ್ತ್ರೀಯ ಸಂಗೀತಕ್ಕೆ ನೂರಾರು ವರ್ಷಗಳ ಇತಿಹಾಸ ಇದ್ದು, ಶಾಸ್ತ್ರೀಯ ಸಂಗೀತವು ಸುಗಮ ಸಂಗೀತದ ತಾಯಿಬೇರು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಪ್ರಸ್ತುತ ಶಾಸ್ತ್ರೀಯ ಸಂಗೀತ ಕಲಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ವೇದಿಕೆ ಅವಕಾಶ ಬೇಕು, ವೇಗವಾಗಿ ಗಾಯಕರಾಗುವ ಹಂಬಲ ಹೊಂದಿದ್ದಾರೆ. ಸಂಗೀತ ಅಭ್ಯಾಸ ಸರಿ ಮಾಡುವುದಿಲ್ಲ ಎಂದರು.
International Day of Persons with Disabilities ಶಾಸ್ತ್ರೀಯ ಸಂಗೀತ ಕ್ರಮಬದ್ಧವಾಗಿ ಅಭ್ಯಾಸ ಮಾಡಿದರೆ ಸಂಗೀತ ತಾನಾಗಿಯೇ ಒಲಿಯುತ್ತದೆ. ಭದ್ರಾವತಿ ವಾಸು ಅವರ ನೇತೃತ್ವದಲ್ಲಿ ಅನೇಕ ಕಾರ್ಯಕ್ರಮ ಆಯೋಜಿಸಿ ಹೊಸ ಪ್ರತಿಭೆಗಳಿಗೆ ಅವಕಾಶ ಸಿಗುತ್ತಿದೆ. ಅನೇಕರು ಕಲಾವಿದರಾಗಿ ಪ್ರತಿಭೆ ಅನಾರವಣಗೊಳಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ಗುರು ಅನಿತಾ ಗೋಪಾಲಕೃಷ್ಣ ಮಾತನಾಡಿ, ರಾಗ, ತಾಳ, ಧ್ವನಿ ಸಂಸ್ಕರಣೆ ಮತ್ತು ಕಲಿಕೆಯಲ್ಲಿ ಆಸಕ್ತಿ ಇರಬೇಕು. ಸರಿಯಾದ ಅಭ್ಯಾಸ ಮಾಡಿದಲ್ಲಿ ಮಾತ್ರ ಸಂಗೀತದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭದ್ರಾವತಿ ವಾಸು ಮಾತನಾಡಿ, ಈಗಾಗಲೇ 200ಕ್ಕೂ ಹೆಚ್ಚು ಜನ ಸದಸ್ಯರು ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 46 ವರ್ಷದ ಸಂಗೀತ ಸೇವೆಯಿಂದ ಸಾರ್ಥಕತೆ ಸಿಕ್ಕಿದೆ ಎಂದು ತಿಳಿಸಿದರು.
ಭಾವಗಾನ ಸದಸ್ಯರು, ಪ್ರಶಾಂತ್, ವಸುಮತಿ ಬಾಪಟ್, ರವಿ, ಬುಜಂಗಪ್ಪ ಮತ್ತಿತರರು ಇದ್ದರು.
International Day of Persons with Disabilities ಶಾಸ್ತ್ರೀಯ ಸಂಗೀತವು ಸುಗಮ ಸಂಗೀತದ ತಾಯಿಬೇರು- ಮಾನಸಾ ಶಿವರಾಮಕೃಷ್ಣ
Date: